ರೈತರಿಗೆ ಗುಡ್‌ನ್ಯೂಸ್: ಭತ್ತ ಸೇರಿ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ!

By Suvarna NewsFirst Published Jun 10, 2021, 8:59 AM IST
Highlights

* ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆಯೇ ರೈತರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ

* 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ ಕೇಂದ್ರ ಸಂಪುಟ ನಿರ್ಧಾರ

* ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು 72 ರು.ನಷ್ಟುಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ನಿರ್ಧಾರ

ನವದೆಹಲಿ(ಜೂ.10): ಮುಂಗಾರು ಹಂಗಾಮು ಆರಂಭವಾಗುತ್ತಿದ್ದಂತೆಯೇ ರೈತರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು 72 ರು.ನಷ್ಟುಹೆಚ್ಚಿಸಲು ಕೇಂದ್ರ ಸಚಿವ ಸಂಪುಟ ನಿರ್ಧರಿಸಿದೆ. ಇದರಿಂದಾಗಿ ಬೆಂಬಲ ಬೆಲೆ 2021-22ನೇ ಬೆಳೆ ವರ್ಷಕ್ಕೆ ಕ್ವಿಂಟಾಲ್‌ಗೆ 1,940 ರು.ಗೆ ಏರಿಕೆಯಾಗಲಿದೆ. ಬೆಳೆ ವರ್ಷವನ್ನು ಸರ್ಕಾರ ಜುಲೈನಿಂದ ಜೂನ್‌ವರೆಗೆ ಪರಿಗಣಿಸುತ್ತದೆ.

2020-21ರ ಬೆಳೆ ವರ್ಷದಲ್ಲಿ ಭತ್ತದ ಬೆಂಬಲ ಬೆಲೆ 1,868 ರು. ಇತ್ತು. ಇದು ಈಗ 1940 ರು.ಗೆ ಹೆಚ್ಚಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ತಿಳಿಸಿದ್ದಾರೆ. ಭತ್ತ ಸೇರಿ ಒಟ್ಟು 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಈ ಏರಿಕೆ ಬಳಿಕ ಕೃಷಿಕರು ತಮ್ಮ ಉತ್ಪಾದನಾ ವೆಚ್ಚಕ್ಕಿಂತ ಶೇ.5-58ರಷ್ಟುಬೆಲೆ ಪಡೆಯಲಿದ್ದಾರೆ ಎಂದು ಸರ್ಕಾರ ಹೇಳಿದೆ.

ಉತ್ಪನ್ನ ಏರಿಕೆ ಹೊಸದರ
ಭತ್ತ   1,940 ರು.
ಹತ್ತಿ 72 ರು.   5726 ರು.
ಜೋಳ 211ರು.  2,738 ರು
ರಾಗಿ   118 ರು. .3,377 ರು.
ಮೆಕ್ಕೆ​ಜೋ​ಳ 82 ರು.  1,870 ರು
ಸೋಯಾ​ಬೀ​ನ್‌ 20 ರು.  .3,950 ರು.
ನೆಲ​ಗ​ಡ​ಲೆ   70 ರು. 5,550 ರು.
ಸೂರ್ಯ​ಕಾಂತಿ ಬೀಜ 130 ರು 6,015 ರು.
ತೊಗ​ರಿ  300 ರು.  6,300 ರು.
ಉದ್ದು  300 ರು 6,300 ರು.
ಹೆಸ​ರು​ಬೇ​ಳೆ 79 ರು.  7,275 ರು.

 

click me!