RBI Action: ಹದಗೆಡುತ್ತಿರುವ ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರಿಸರ್ವ್ ಬ್ಯಾಂಕ್ ಇಂದು 5 ಸಹಕಾರಿ ಬ್ಯಾಂಕ್‌ಗಳ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಆರ್‌ಬಿಐ ಈ ಕ್ರಮಕ್ಕೆ ಕಾರಣವೇನು?
ನವದೆಹಲಿ (ಫೆ.25): ರಾಜ್ಯದ ಮಂಡ್ಯ ಜಿಲ್ಲೆಯ ಸಹಕಾರ ಬ್ಯಾಂಕ್ ಸೇರಿದಂತೆ ದೇಶದ ಐದು ಸಹಕಾರಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ಶುಕ್ರವಾರ ದೊಡ್ಡ ಕ್ರಮ ಕೈಗೊಂಡಿದೆ. ಈ ಬ್ಯಾಂಕ್‌ಗಳ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿರುವ ಕಾರಣ, ಇವುಗಳ ಮೇಲೆ ನಿರ್ಬಂಧ ವಿಧಿಸಿರುವುದಾಗಿ ತಿಳಿಸಿದೆ. ಬ್ಯಾಂಕ್‌ಗಳ ಆರ್ಥಿಕ ವ್ಯವಸ್ಥೆಯ ಮೇಲೆ ಹದ್ದಿನ ಕಣ್ಣಿಡುತ್ತಿರುವ ಆರ್‌ಬಿಐ, ಅವ್ಯವಹಾರದ ಸೂಚನೆ ಕಂಡ ತಕ್ಷಣವೇ ಶುಕ್ರವಾರ ಕ್ರಮ ಕೈಗೊಂಡಿದೆ. ಶುಕ್ರವಾರ ನೀಡಿದ ಪ್ರಕಟಣೆಯಲ್ಲಿ 5 ಸಹಕಾರಿ ಬ್ಯಾಂಕ್‌ಗಳ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ. ಇದು ಬ್ಯಾಂಕ್‌ನಿಂದ ಹಿಂಪಡೆಯುವ ಮಿತಿಯನ್ನು ಸಹ ಒಳಗೊಂಡಿದೆ. ಈ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧ ಹೇರಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ದುರ್ಬಲ ಆರ್ಥಿಕ ಸ್ಥಿತಿಯನ್ನು ಉಲ್ಲೇಖಿಸಿ ಫೆಬ್ರವರಿ 24 ರಂದು 5 ಸಹಕಾರಿ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ವ್ಯವಹಾರ ನಿರ್ಬಂಧಗಳನ್ನು ವಿಧಿಸಿದೆ. ಕೇಂದ್ರೀಯ ಬ್ಯಾಂಕಿನ ಪೂರ್ವಾನುಮತಿ ಇಲ್ಲದೆ, ಹೊಸ ಠೇವಣಿಗಳನ್ನು ಸ್ವೀಕರಿಸಲು ಅಥವಾ ಯಾವುದೇ ರೀತಿಯ ಸಾಲವನ್ನು ನೀಡಲು ಸಾಧ್ಯವಿಲ್ಲ ಎಂದು ಆರ್‌ಬಿಐ ಹೇಳಿದೆ. ಆರ್‌ಬಿಐ ಇವುಗಳಲ್ಲಿ 3 ಬ್ಯಾಂಕ್‌ಗಳ ಮೇಲೆ ಭಾಗಶಃ ಠೇವಣಿ ಹಿಂಪಡೆಯುವ ನಿರ್ಬಂಧಗಳನ್ನು ವಿಧಿಸಿದೆ ಮತ್ತು ಇನ್ನೆರಡು ಬ್ಯಾಂಕ್‌ಗಳ ಮೇಲೆ ಸಂಪೂರ್ಣ ನಿರ್ಬಂಧಗಳನ್ನು ವಿಧಿಸಿದೆ.
ಬ್ಯಾಂಕ್ ವ್ಯವಹಾರ ಮುಂದುವರಿಯಲಿದೆ: ಆರ್‌ಬಿಐ ಪ್ರಕಾರ, ಬ್ಯಾಂಕಿನ ಅರ್ಹ ಠೇವಣಿದಾರರು 5 ಲಕ್ಷದವರೆಗಿನ ಠೇವಣಿ ವಿಮೆ ಮೊತ್ತವನ್ನು ಸ್ವೀಕರಿಸಲು ಅರ್ಹರಾಗಿರುತ್ತಾರೆ. ಆರ್‌ಬಿಐ ನೀಡಿರುವ ಈ ಸೂಚನೆಯನ್ನು ಆರ್‌ಬಿಐ ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸಿದೆ ಎನ್ನುವ ರೀತಿಯಲ್ಲಿ ತೆಗೆದುಕೊಳ್ಳಬಾರದು. ಈ ಬ್ಯಾಂಕ್‌ಗಳು ತಮ್ಮ ಹಣಕಾಸಿನ ಸ್ಥಿತಿ ಸುಧಾರಿಸುವವರೆಗೆ ನಿರ್ಬಂಧಗಳೊಂದಿಗೆ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನು ಮುಂದುವರಿಸಬಹುದು. ಈ ಹಿಂದೆ, ದೇಶದ ದುರ್ಬಲ ಸಹಕಾರಿ ಬ್ಯಾಂಕ್‌ಗಳ ವಿರುದ್ಧ ಕ್ರಮ ಕೈಗೊಳ್ಳುವಾಗ, ಆರ್‌ಬಿಐ ಅವರ ಬ್ಯಾಂಕ್‌ಗಳ ಪರವಾನಗಿಯನ್ನು ಸಹ ರದ್ದುಗೊಳಿಸಿದೆ.
ಎದುರಾಳಿಗಳನ್ನ ಮಣಿಸಲು ಅಂಬಾನಿ ತಂತ್ರ, ಜಿಯೋ ಸಿನಿಮಾದಲ್ಲಿ ಐಪಿಎಲ್ ಉಚಿತವಾಗಿ ಪ್ರಸಾರ!
ಈ ಬ್ಯಾಂಕ್‌ಗಳಿಗೆ ನಿರ್ಬಂಧ: ಆರ್‌ಬಿಐನಿಂದ ನಿರ್ಬಂಧಕ್ಕೆ ಒಳಗಾದ ಬ್ಯಾಂಕ್‌ಗಳೆಂದರೆ, ಎಚ್‌ಸಿಬಿಎಲ್ ಸಹಕಾರಿ ಬ್ಯಾಂಕ್ ಲಿಮಿಟೆಡ್, ಉರವಕೊಂಡ ಕೋ-ಆಪರೇಟಿವ್ ಟೌನ್ ಬ್ಯಾಂಕ್ ಲಿಮಿಟೆಡ್, ಆದರ್ಶ ಮಹಿಳಾ ನಗರಿ ಸಹಕಾರಿ ಬ್ಯಾಂಕ್ ಮರ್ಯಾದಿತ್, ಮಂಡ್ಯದ ಶಿಂಶಾ ಸಹಕಾರ ಬ್ಯಾಂಕ್ ನಿಯಮಿತ ಮತ್ತು ಶಂಕರರಾವ್ ಮೋಹಿತೆ ಪಾಟೀಲ್ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಶಂಕರರಾವ್ ಮೋಹಿತೆ ಪಾಟೀಲ್ ಸಹಕಾರಿ ಬ್ಯಾಂಕ್ ಲಿಮಿಟೆಡ್).
BHIM SBI Pay ಪ್ರಾರಂಭ; ಎಸ್ ಬಿಐ ಗ್ರಾಹಕರು ಇನ್ಮುಂದೆ ಕ್ಷಣಾರ್ಧದಲ್ಲಿ ಸಿಂಗಾಪುರಕ್ಕೆ ಹಣ ಕಳುಹಿಸ್ಬಹುದು!
ಆರ್‌ಬಿಐನಿಂದ ಕಾಲಕಾಲಕ್ಕೆ ಬ್ಯಾಂಕ್‌ಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ನಿಯಮಗಳನ್ನು ಉಲ್ಲಂಘಿಸಿದ ಮತ್ತು ಇತರ ಕಾರಣಗಳಿಗಾಗಿ ಬ್ಯಾಂಕ್‌ಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಇತ್ತೀಚೆಗೆ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ದಂಡವನ್ನೂ ವಿಧಿಸಲಾಗಿದೆ. ಅವರ ಕಾರ್ಯವೈಖರಿಯಲ್ಲಿ ಹಲವು ರೀತಿಯ ನ್ಯೂನತೆಗಳು ಕಂಡುಬಂದಿವೆ. ಅದಕ್ಕಾಗಿಯೇ ಕೇಂದ್ರ ಬ್ಯಾಂಕ್ ಅವರಿಗೆ ಭಾರಿ ದಂಡ ವಿಧಿಸಿತ್ತು.