ದೇಶದ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಲಿಕ್ವಿಡಿಟಿ; ಹಣಕಾಸು ನೀತಿ ಬಿಗಿಗೊಳಿಸೋ ಯೋಚನೆಯಿಲ್ಲ: RBI Governor

Suvarna News   | Asianet News
Published : Mar 22, 2022, 05:48 PM IST
ದೇಶದ ಆರ್ಥಿಕ ಬೆಳವಣಿಗೆಗೆ ಇನ್ನಷ್ಟು ಲಿಕ್ವಿಡಿಟಿ; ಹಣಕಾಸು ನೀತಿ ಬಿಗಿಗೊಳಿಸೋ ಯೋಚನೆಯಿಲ್ಲ: RBI Governor

ಸಾರಾಂಶ

*ಆರ್ಥಿಕತೆಗೆ ದ್ರವ್ಯತೆ ತುಂಬೋದು ಚಕ್ರವ್ಯೂಹ ಪ್ರವೇಶಿಸಿದಂತೆ ಎಂದ ಗವರ್ನರ್ *ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವಂತೆ ಭಾರತದಲ್ಲಿ ನಿಂತಹಣದುಬ್ಬರ ಪರಿಸ್ಥಿತಿಯಿಲ್ಲ *ರಷ್ಯಾ-ಉಕ್ರೇನ್ ಸಂಘರ್ಷದಿಂದ ಹಸಿರು ಇಂಧನಕ್ಕೆ ಹೆಚ್ಚಲಿದೆ ಬೇಡಿಕೆ  

ಮುಂಬೈ (ಮಾ.22):  ದೇಶದ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡೋ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್  ಸಾಕಷ್ಟು ದ್ರವ್ಯತೆ (liquidity) ಒದಗಿಸೋ ಕಾರ್ಯವನ್ನು ಮುಂದುವರಿಸಲಿದೆ ಎಂದು ಆರ್ ಬಿಐ (RBI) ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ತಿಳಿಸಿದ್ದಾರೆ. ಪ್ರಸಕ್ತ ಸನ್ನಿವೇಶದಲ್ಲಿ ಆರ್ ಬಿಐ (RBI) ಹಣಕಾಸು ನೀತಿಗಳನ್ನು ಬಿಗಿಗೊಳಿಸಬಹುದೆಂಬ ನಿರೀಕ್ಷೆಯಿದೆ, ಆದ್ರೆ ಸದ್ಯ ಅಂಥ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೆಲವು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿರುವಂತೆ ಭಾರತದಲ್ಲಿ  ನಿಂತಹಣದುಬ್ಬರ (stagflation) ಪರಿಸ್ಥಿತಿಯಿಲ್ಲ. ಅಲ್ಲದೆ, ಉಕ್ರೇನ್ (Ukraine) -ರಷ್ಯಾ (Russia) ಯುದ್ಧದ ಹೊರತಾಗಿಯೂ ದೇಶದಲ್ಲಿ ಆರ್ಥಿಕ ಬೆಳವಣಿಗೆ ಕಂಡುಬಂದಿದ್ದು, ಹಣದುಬ್ಬರ ತಾತ್ಕಾಲಿಕವಾಗಿದೆ ಎಂಬ ಅಭಿಪ್ರಾಯವನ್ನು ಗವರ್ನರ್ ವ್ಯಕ್ತಪಡಿಸಿದ್ದಾರೆ. 'ಹಣಕಾಸು ನೀತಿಯನ್ನು (Monetary Policy) ಬದಲಾಯಿಸೋ ಬಗ್ಗೆ ಇದ್ದ ಎಲ್ಲ ಸೆಳೆತ ಹಾಗೂ ನಿರೀಕ್ಷೆಗಳನ್ನು ನಾವು ಸದ್ಯಕ್ಕೆ ತಡೆ ಹಿಡಿದಿದ್ದೇವೆ. ನೀತಿಗಳನ್ನು ಬಿಗಿಗೊಳಿಸೋ ಮೂಲಕ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸೋ ನಮ್ಮ ನಿಲುವಿನಿಂದಲೂ ಸದ್ಯಕ್ಕೆ ದೂರ ಸರಿದಿದ್ದೇವೆ' ಎಂದು ಶಕ್ತಿಕಾಂತ್ ದಾಸ್ ಮುಂಬೈಯಲ್ಲಿ (Mumbai)ನಡೆದ ಸಿಐಐ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ತಿಳಿಸಿದ್ದಾರೆ. ಹಾಗಂತ ಇಂಥ ಹೇಳಿಕೆ ಮೂಲಕ ಮುಂದಿನ ತಿಂಗಳು ನಡೆಯಲಿರೋ ಆರ್ ಬಿಐ ಹಣಕಾಸು ನೀತಿ ಸಮಿತಿಗೆ ಹಣಕಾಸು ನೀತಿ ನಿರೂಪಣೆಗೆ ಸಂಬಂಧಿಸಿ ಯಾವುದೇ ಸೂಚನೆಯನ್ನು ಕೂಡ ನೀಡುತ್ತಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಂದ ಹಾಗೇ ಕೊರೋನಾ ಮಹಾಮಾರಿ ಕಾಣಿಸಿಕೊಂಡ ಬಳಿಕ ಇದು ಆರ್ ಬಿಐ ಗವರ್ನರ್  ಅವರ ಮೊದಲ ಭೌತಿಕ ಸಂವಹನವಾಗಿದೆ. ಜನತಾ ಕರ್ಫ್ಯೂ ದ್ವಿತೀಯ ವಾರ್ಷಿಕೋತ್ಸವದ ಸಂದರ್ಭದಲ್ಲೇ ಈ ರೀತಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿರೋದಾಗಿಯೂ ಸ್ವತಃ ಗವರ್ನರ್  ಅವರೇ ನೆನಪಿಸಿಕೊಂಡರು.

Isak Munda Success Story : ಹಸಿವು ಮರೆಯಲು ಯುಟ್ಯೂಬ್ ಚಾನೆಲ್ ಶುರು ಮಾಡಿದವನ ಯಶೋಗಾಥೆ

ಕೊರೋನಾದ ಪ್ರಾರಂಭದ ದಿನಗಳಲ್ಲಿ ಆರ್ ಬಿಐ ಕೈಗೊಂಡ ಕ್ರಮಗಳ ಬಗ್ಗೆಯೂ ಈ ಸಂದರ್ಭದಲ್ಲಿ ಗವರ್ನರ್ ಮಾಹಿತಿ ಹಂಚಿಕೊಂಡರು. ಬಡ್ಡಿದರವನ್ನು ತಗ್ಗಿಸಲು ಕೇಂದ್ರೀಯ ಬ್ಯಾಂಕ್ ಬ್ಯಾಂಕುಗಳ ಮೂಲಕ 17 ಲಕ್ಷ ಕೋಟಿ ರೂ. ಹೆಚ್ಚುವರಿ ದ್ರವ್ಯತೆ ಲಭ್ಯವಾಗುವಂತೆ ಮಾಡಿತ್ತು. ಈ ಮೂಲಕ ಕ್ರೆಡಿಟ್ ಮಾರ್ಕೆಟ್ ಯಾವುದೇ ಕಾರಣಕ್ಕೂ ನಿಷ್ಕ್ರಿಯಗೊಳ್ಳದಂತೆ ಎಚ್ಚರ ವಹಿಸಿದ್ದೆವು ಎಂದು ಅವರು ತಿಳಿಸಿದರು. 17 ಲಕ್ಷ ಕೋಟಿ ರೂಪಾಯಿಯಲ್ಲಿ ಸಾಲದಾತರು 12 ಲಕ್ಷ ಕೋಟಿ ರೂ. ಬಳಸಿಕೊಂಡಿದ್ದಾರೆ. ಅಲ್ಲದೆ, ಅವರು ಈಗಾಗಲೇ 5ಲಕ್ಷ ಕೋಟಿ ರೂ. ಹಿಂತಿರುಗಿಸಿದ್ದಾರೆ ಎಂದು ಅವರು ತಿಳಿಸಿದರು.

'ನೀವು ಆರ್ಥಿಕತೆಗೆ ದ್ರವ್ಯತೆ ತುಂಬುತ್ತಿದ್ದೀರಿ ಎಂದ್ರೆ ಚಕ್ರವ್ಯೂಹಕ್ಕೆ ಪ್ರವೇಶ ಮಾಡುತ್ತಿದ್ದೀರಿ ಎಂದೇ ಅರ್ಥ. ಬಹುತೇಕ ಜನರಿಗೆ ಚಕ್ರವ್ಯೂಹದ ಒಳಹೋಗೋದು ಗೊತ್ತು. ಆದ್ರೆ ಅದ್ರಿಂದ ಹೊರಬರೋ ದಾರಿ ಗೊತ್ತಿರೋದು ಕೆಲವೇ ಕೆಲವು ಮಂದಿಗೆ ಮಾತ್ರ. ಹೀಗಾಗಿ ಆರ್ ಬಿಐ ಇಂಥ ಕ್ರಮಗಳನ್ನು ಘೋಷಿಸೋ ಸಂದರ್ಭದಲ್ಲೇ ಅದ್ರಿಂದ ಹೊರಬರೋ ದಾರಿಗಳ ಬಗ್ಗೆಯೂ ಯೋಜನೆ ರೂಪಿಸಿದ್ದೇವೆ. ಈ ಚಕ್ರವ್ಯೂಹದಿಂದ ನಾವು ಹೊರಬಂದೇ ಬರುತ್ತೇವೆ' ಎಂದು ದಾಸ್ ತಿಳಿಸಿದರು. 

ರಷ್ಯಾ-ಉಕ್ರೇನ್ ಸಂಘರ್ಷದಿಂದ ಸೃಷ್ಟಿಯಾಗಿರೋ ಪರಿಸ್ಥಿತಿ ಬಗ್ಗೆ ವಿಶ್ಲೇಷಿಸಿದ ದಾಸ್, ಇದು ಹಸಿರು ಇಂಧನಕ್ಕೆ ರೂಪಾಂತರಗೊಳ್ಳಲು ಕಾರಣವಾಗುತ್ತಿದೆ. ಹಾಗೆಯೇ ಇದೇ ಸಮಯದಲ್ಲಿ ಮುಂದುವರಿದ ಆರ್ಥಿಕತೆಗಳು ಜೈವಿಕ ಇಂಧನಗಳ ಮೇಲಿನ ಹೂಡಿಕೆಯನ್ನು ಮರುಪ್ರಾರಂಭಿಸಲು ಕಾರಣವಾಗಲಿದೆ. ಯುರೋಪಿಯನ್ ರಾಷ್ಟ್ರಗಳು ರಕ್ಷಣಾ ಹೂಡಿಕೆಯನ್ನು ಹೆಚ್ಚಿಸೋ ಸಾಧ್ಯತೆಯೂ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. 

LPG Price Hike: ಅಕ್ಟೋಬರ್ 2021ರ ಬಳಿಕ ಮೊದಲ ಬಾರಿಗೆ ಗ್ಯಾಸ್‌ ಸಿಲಿಂಡರ್‌ ಬೆಲೆ ₹50 ಹೆಚ್ಚಳ!

ದ್ರವ್ಯತೆ ಎಂದರೇನು?
ಮಾರುಕಟ್ಟೆ ಬೆಲೆಗೆ ಹಾನಿಯಾಗದಂತೆ  ಯಾವುದೇ ಒಂದು ವಸ್ತು ಅಥವಾ ಆಸ್ತಿಯನ್ನು ತ್ವರಿತವಾಗಿ ನಗದು ರೂಪಕ್ಕೆ ಪರಿವರ್ತಿಸೋ ದಕ್ಷತೆಗೆ ದ್ರವ್ಯತೆ ಎನ್ನುತ್ತಾರೆ. ನಗದು ರೂಪದಲ್ಲಿರೋ ಹಣಕ್ಕೆ ಎಲ್ಲಕ್ಕಿಂತ ಹೆಚ್ಚಿನ ದ್ರವ್ಯತೆ ಇರುತ್ತದೆ.  ಮಾರುಕಟ್ಟೆಯಲ್ಲಿ ದ್ರವ್ಯತೆ ಹೆಚ್ಚಿದ್ದಷ್ಟೂ ಆಸ್ತಿ ಅಥವಾ ವಸ್ತುವನ್ನು ನಗದಾಗಿ ಪರಿವರ್ತಿಸೋ ಕ್ರಿಯೆ ಸುಲಭವಾಗುತ್ತದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!
100 ವರ್ಷ ಹಳೇ ಕುಂದನ್ ಪೊಲ್ಕಿ ಕಿವಿಯೋಲೆ, ತಾಯಿಯ ಆಭರಣ ಧರಿಸಿದ ನೀತಾ ಅಂಬಾನಿ