ಆರ್‌ಬಿಐ ಸಮೀಕ್ಷೆ: ಮೋದಿ ಮೇಲೆ ವಿಶ್ವಾಸ ಡೌನ್, ಯುಪಿಎಗಿಂತ ಬೆಟರ್!

By Web DeskFirst Published Aug 3, 2018, 1:01 PM IST
Highlights

ಆರ್‌ಬಿಐ ಗ್ರಾಹಕರ ವಿಶ್ವಾಸ ಸಮೀಕ್ಷೆ! ಎನ್‌ಡಿಎ ಮೇಲಿನ ವಿಶ್ವಾಸ ಕಡಿಮೆ! ಯುಪಿಎ ಅವಧಿಗಿಂತ ಉತ್ತಮ ಎಂದ ಜನ! ಈಗಲೂ ಅಚ್ಛೇ ದಿನ್ ಬರುವ ವಿಶ್ವಾಸ ಇದೆ! ಆರ್ಥಿಕ ಸ್ಥಿರತೆಗೆ ಸರ್ಕಾರದ ಕ್ರಮ ಉತ್ತಮ

ನವದೆಹಲಿ(ಆ.3): ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಂದು ಸುತ್ತಿನ ಗ್ರಾಹಕ ವಿಶ್ವಾಸ ಸಮೀಕ್ಷೆ ನಡೆಸಿದ್ದು, ದೇಶದ ಅರ್ಥ ವ್ಯವಸ್ಥೆ, ಉದ್ಯೋಗ ಸೃಷ್ಟಿ, ಆರ್ಥಿಕ ಶಿಸ್ತು ಕುರಿತು ಜನಸಾಮಾನ್ಯರಲ್ಲಿ ಅಸಮಾಧಾನ ಇದೆಯಾದರೂ, ಪ್ರಸಕ್ತ ಎನ್‌ಡಿಎ ಸರ್ಕಾರದ ಮೇಲೆ ಜನತೆ ಯುಪಿಎ ಸರ್ಕಾರಕ್ಕಿಂತ ಹೆಚ್ಚಿನ ವಿಶ್ವಾಸ ಉಳಿಸಿಕೊಂಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.

ನೋಟು ಅಮಾನ್ಯೀಕರಣದ ನಂತರ ಸರ್ಕಾರದ ಮೇಲೆ ಜನರ ವಿಶ್ವಾಸ ಕಡಿಮೆಯಾಗಿತ್ತಾದರೂ, ತದನಂತರ ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಂದ ಜನ ಸಮಾಧಾನಗೊಂಡಿದ್ದಾರೆ ಎಂಬುದು ಗ್ರಾಹಕ ವಿಶ್ವಾಸ ಸಮೀಕ್ಷೆಯಿಂದ ಸಾಬೀತಾಗಿದೆ ಎಂದು ಆರ್‌ಬಿಐ ತಿಳಿಸಿದೆ.

ಕಪ್ಪು ಹಣದ ಮೇಲೆ ನಿಯಂತ್ರಣ, ಉದ್ಯೋಗ ಸೃಷ್ಟಿ, ತೈಲ ಬೆಲೆ ನಿಯಂತ್ರಣ ಮುಂತಾದ ವಿಷಯಗಳ ಮೇಲೆ ಜನರಿಗೆ ಈಗಲೂ ಕೇಂದ್ರ ಸರ್ಕಾರದ ಮೇಲೆ ವಿಶ್ವಾಸ ಇದ್ದು, ಕೇವಲ ಇವುಗಳ ಜಾರಿಯಲ್ಲಾಗುತ್ತಿರುವ ವಿಳಂಬದಿಂದ ತುಸು ಅಸಮಾಧಾನಗೊಂಡಿದ್ದಾರೆ ಎಂಬುದು ಆರ್‌ಬಿಐ ತಿಳಿಸಿದೆ.

click me!