ಆ್ಯಪಲ್ ವಿಶ್ವದ ಪ್ರಥಮ ಟ್ರಿಲಿಯನ್ ಡಾಲರ್ ಸಂಸ್ಥೆ

By Web DeskFirst Published Aug 3, 2018, 11:13 AM IST
Highlights

ವಿಶ್ವದ ಪ್ರತಿಷ್ಠಿತ ಆ್ಯಪಲ್ ಕಂಪೆನಿ 1 ಟ್ರಿಲಿಯನ್ ಡಾಲರ್ ಷೇರು ಮಾರುಕಟ್ಟೆ ಮೌಲ್ಯ ಹೊಂದಿದ ವಿಶ್ವದ ಮೊದಲ ಕಂಪನಿ ಎಂಬ ಹಿರಿಮೆಗೆ ಪಾತ್ರವಾಗಿದೆ. 

ಸ್ಯಾನ್‌ಫ್ರಾನ್ಸಿಸ್ಕೊ: ವಿಶ್ವದ ಪ್ರತಿಷ್ಠಿತ ಆ್ಯಪಲ್ ಕಂಪೆನಿ , ಗುರುವಾರ 1 ಟ್ರಿಲಿಯನ್ ಡಾಲರ್ (68 ಲಕ್ಷ ಕೋಟಿ  ರು.) ಷೇರು ಮಾರುಕಟ್ಟೆ ಮೌಲ್ಯದ ವಿಶ್ವದ ಮೊದಲ ಕಂಪನಿ ಎಂಬ ಹಿರಿಮೆಗೆ ಪಾತ್ರವಾಯಿತು.

42 ವರ್ಷಗಳ ಹಿಂದೆ ಸ್ವೀವ್ ಜಾಬ್ಸ್ ಈ ಕಂಪೆನಿ ಆರಂಭಿಸಿದ್ದರು. ಒಂದು ಹಂತ ದಲ್ಲಿ ತೀವ್ರ ನಷ್ಟದಿಂದ ಬಿಲ್ ಪಾವತಿಗೂ ಪರದಾಡುತಿತ್ತು.

ಈ ವೇಳೆ ಕಂಪೆನಿಯಿಂದ ಹೊರಹಾಕಲ್ಪಟ್ಟಿದ್ದ ಸ್ಟೀವ್ ಜಾಬ್ಸ್‌ರನ್ನು ಮತ್ತೆ ಕರೆ ತರಲಾಯಿತು. ಅಲ್ಲಿಂದಾಚೆಗೆ, ಸಂಸ್ಥೆ ಉತ್ತುಂಗಕ್ಕೇರಿತು. 

click me!