
ನವದೆಹಲಿ: ಫ್ಲಿಪ್‌ಕಾರ್ಟ್ ಒಡೆತನದ ಮತ್ತು ಭಾರತದ ಅತಿ ಹಳೇ ಇ-ಕಾಮರ್ಸ್ ಎಂಬ ಕೀರ್ತಿಗೆ ಪಾತ್ರವಾಗಿದ್ದ ಇ ಬೇ.ಇನ್ ವೆಬ್‌ಸೈಟ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.
ಈ ಮೂಲಕ ಹಳೆಯ ಮತ್ತು ಬಳಕೆ ಮಾಡಿದ ವಸ್ತುಗಳನ್ನು ಮಾರಾಟ ಹಾಗೂ ಖರೀದಿಸಲು ಸೇತುವೆಯಂತಿದ್ದ ಇಬೇ ಬಂದ್ ಆಗಲಿದ್ದು, ಒಎಲ್‌ಎಕ್ಸ್ ಮತ್ತು ಕ್ವಿಕರ್‌ಗಳಿಗೆ ಇ- ಕಾಮರ್ಸ್ ಮಾರುಕಟ್ಟೆಯಲ್ಲಿ ವಾಲೊಡ್ಡುವವರು ಇಲ್ಲದಂತಾಗಿದೆ.
2018 ರ ಆಗಸ್ಟ್ 14 ರಂದು ಇ ಬೇ.ಇನ್ ಬಂದ್ ಆಗಲಿದೆ ಎಂದು ಹೇಳಲಾಗಿದೆ. ಕ್ಯಾಲಿಫೋರ್ನಿಯಾ ಮೂಲದ ಇಬೇಯನ್ನು 2017 ರಲ್ಲಿ ಫ್ಲಿಪ್‌ಕಾರ್ಟ್ ಖರೀದಿಸಿತ್ತು.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.