ಎಟಿಎಂ ಕಾರ್ಡ್‌ ವಂಚನೆ ತಡೆಗೆ ಸ್ವಿಚ್‌ಆಫ್‌, ಸ್ವಿಚ್‌ಆನ್‌ ಸೌಲಭ್ಯ

By Kannadaprabha NewsFirst Published Jan 17, 2020, 11:32 AM IST
Highlights

ಮಾಹಿತಿ ಕದ್ದು ಹಣ ಲಪಟಾಯಿಸುವ ಪ್ರಕರಣಗಳಿಗೆ ಶಾಶ್ವತವಾಗಿ ಬ್ರೇಕ್‌ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್‌  ಇದೀಗ ಬ್ಯಾಂಕುಗಳಿಗೆ ಹೊಸ ಸೂಚನೆಯನ್ನು ನೀಡಿದೆ. 

ಮುಂಬೈ [ಜ.17]: ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ಗಳನ್ನು ಬೇರೆಯವರು ಎಗರಿಸಿ ಅಥವಾ ಅವುಗಳ ಮಾಹಿತಿ ಕದ್ದು ಹಣ ಲಪಟಾಯಿಸುವ ಪ್ರಕರಣಗಳಿಗೆ ಶಾಶ್ವತವಾಗಿ ಬ್ರೇಕ್‌ ಹಾಕಲು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ), ಹೊಸ ಸೂಚನೆಗಳನ್ನು ಬ್ಯಾಂಕ್‌ಗಳಿಗೆ ನೀಡಿದೆ.

ಕ್ರೆಡಿಟ್‌ ಹಾಗೂ ಡೆಬಿಟ್‌ ಕಾರ್ಡ್‌ಗಳನ್ನು ಸ್ವಿಚ್‌ ಆನ್‌ ಹಾಗೂ ಸ್ವಿಚ್‌ ಆಫ್‌ ಮಾಡುವ ತಂತ್ರಜ್ಞಾನವನ್ನು ಬ್ಯಾಂಕ್‌ಗಳು ಆರಂಭಿಸಬೇಕು. ತಮಗೆ ಬೇಕಾದಾಗ ಕಾರ್ಡ್‌ಗಳನ್ನು ಸ್ವಿಚ್‌ ಆನ್‌ ಮಾಡಿಕೊಳ್ಳಲು ಅಥವಾ ಸ್ವಿಚ್‌ ಆಫ್‌ ಮಾಡಿಕೊಳ್ಳಲು ಗ್ರಾಹಕರಿಗೆ ಸಾಧ್ಯವಾದಾಗ, ಅವುಗಳನ್ನು ಕಳ್ಳರು ಎಗರಿಸಿದ ಸಂದರ್ಭದಲ್ಲಿಯೂ ಕಾರ್ಡ್‌ಗಳು ಕೆಲಸ ಮಾಡುವುದಿಲ್ಲ. ಇದರಿಂದ ಕಾರ್ಡ್‌ ವಂಚನೆಗಳು ತಪ್ಪಲಿವೆ.

100 ರು. ತೆಗೆದ್ರೆ 500 ರು. : ATMಲ್ಲಿ ಹಣ ತೆಗೆದವರಿಗೆ ಬಂಪರೋ ಬಂಪರ್ !...

ಇದೇ ವೇಳೆ, ಕದ್ದ ಕಾರ್ಡ್‌ಗಳನ್ನು ಬಳಸಿ ಕಳ್ಳರು ಆನ್‌ಲೈನ್‌ ವಹಿವಾಟು ಮಾಡುತ್ತಿರುತ್ತಾರೆ. ಇಂತಹ ವ್ಯವಹಾರ ತಡೆವ ಉದ್ದೇಶದಿಂದ, ಯಾವತ್ತೂ ಆನ್‌ಲೈನ್‌ ವಹಿವಾಟಿಗೆ ಬಳಸದೇ ಇರುವ ಕಾರ್ಡ್‌ಗಳನ್ನು ಕೇವಲ ಎಟಿಎಂ ಕೇಂದ್ರಗಳು ಮತ್ತು ಪಾಯಿಂಟ್‌ ಆಫ್‌ ಸೇಲ್‌ ಸ್ವೈಪಿಂಗ್‌ ಯಂತ್ರಗಳಲ್ಲಿ ಮಾತ್ರ ಬಳಸಲು ಅವಕಾಶ ಕಲ್ಪಿಸಬೇಕು ಎಂದೂ ಆರ್‌ಬಿಐ ಸೂಚಿಸಿದೆ.

ನಿಮಗೆ ಗೊತ್ತಿರಲಿ: ಎಟಿಎಂ ಹಣ ವಿತ್‌ಡ್ರಾ ಮಾಡಲು ಹೊಸ ವರ್ಷಕ್ಕೆ ಹೊಸ ರೂಲ್ಸ್!..

ಕಾರ್ಡುದಾರ ಹಣಕಾಸು ವಹಿವಾಟಿನ ಮೇಲೆ ಮಿತಿ ವಿಧಿಸಿಕೊಳ್ಳಲು, ಮಿತಿಯನ್ನು ಬದಲಿಸಿಕೊಳ್ಳಲು ಕೂಡ ಸಾಧ್ಯವಾಗುವಂತೆ ಮಾಡಬೇಕು ಎಂದಿರುವ ಆರ್‌ಬಿಐ, ಇಂಟರ್ನೆಟ್‌ ಬ್ಯಾಂಕಿಂಗ್‌, ಎಟಿಎಂ ಯಂತ್ರಗಳು ಹಾಗೂ ಇಂಟರಾರ‍ಯಕ್ಟಿವ್‌ ವಾಯ್ಸ್ ಪ್ರೊಟೊಕಾಲ್‌ಗಳಿಗೂ ಇದು ವಿಸ್ತರಣೆ ಆಗಬೇಕು ಎಂದು ತಿಳಿಸಿದೆ.

click me!