ಹಬ್ಬದ ಗಿಫ್ಟ್: ಪೆಟ್ರೋಲ್ ಬೆಲೆಯಲ್ಲಿ ಗಮರ್ನಾಹ ಇಳಿಕೆ!

By Suvarna NewsFirst Published Jan 16, 2020, 5:10 PM IST
Highlights

ಹಬ್ಬದ ವೇಳೆ ಪೆಟ್ರೋಲ್ ಬೆಲೆ ಇಳಿಕೆಯ ಸಿಹಿ ಸುದ್ದಿ| ದೇಶದ ಮಹಾನಗರಗಳಲ್ಲಿ ಇಳಿಕೆಯತ್ತ ಮುಖ ಮಾಡಿದ ಪೆಟ್ರೋಲ್, ಡೀಸೆಲ್ ದರ| ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ|  ತಣ್ಣಗಾದ ಇರಾನ್-ಅಮೆರಿಕ ನಡುವಿನ ಯುದ್ಧೋನ್ಮಾದ| 

ನವದೆಹಲಿ(ಜ.16): ಇರಾನ್-ಅಮೆರಿಕ ನಡುವಿನ ಯುದ್ಧೋನ್ಮಾದ ತಣ್ಣಗಾಗುತ್ತಿದ್ದಂತೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಕಂಡುಬಂದಿದೆ. 

ಇದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಬೆಲೆ 15 ಪೈಸೆ ಮತ್ತು ಡೀಸೆಲ್ ಬೆಲೆ 14 ಪೈಸೆ ಇಳಿಕೆಯಾಗಿದೆ.

ಯುದ್ಧ ಭೀತಿ ತಂದ ಫಜೀತಿ: ಪೆಟ್ರೋಲ್ ಬೆಲೆ ದಿಢೀರ್ ಏರಿಕೆ!

ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರದತ್ತ ಗಮನಹರಿಸುವುದಾದರೆ...

ರಾಷ್ಟ್ರ ರಾಜಧಾನಿ ನವದೆಹಲಿ:

ಪೆಟ್ರೋಲ್-75.55 ರೂ.

ಡೀಸೆಲ್-68.92 ರೂ.

ಪ.ಬಂಗಾಳ ರಾಜಧಾನಿ ಕೋಲ್ಕತ್ತಾ:

ಪೆಟ್ರೋಲ್-78.23 ರೂ.

ಡೀಸೆಲ್-71.29 ರೂ.

ವಾಣಿಜ್ಯ ರಾಜಧಾನಿ ಮುಂಬೈ:

ಪೆಟ್ರೋಲ್- 81.14 ರೂ.

ಡೀಸೆಲ್-72. 27 ರೂ.

ತಮಿಳುನಾಡು ರಾಜಧಾನಿ ಚೆನ್ನೈ:

ಪೆಟ್ರೋಲ್-78.49 ರೂ.

ಡೀಸೆಲ್-72.83  ರೂ.

ರಾಜ್ಯ ರಾಜಧಾನಿ ಬೆಂಗಳೂರು:

ಪೆಟ್ರೋಲ್-77.83ರೂ.

ಡೀಸೆಲ್-70.99 ರೂ.

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 64 ಡಾಲರ್ ಆಗಿದೆ. 

click me!