ನಿಮ್ಮ 1 ಬಿಲಿಯನ್‌ನಿಂದ ನಮಗೇನ್ರೀ ಪ್ರಯೋಜನ?: ಜೆಫ್‌ಗೆ ಗೋಯಲ್ ಪ್ರಶ್ನೆ!

Suvarna News   | Asianet News
Published : Jan 16, 2020, 06:20 PM ISTUpdated : Jan 16, 2020, 06:24 PM IST
ನಿಮ್ಮ 1 ಬಿಲಿಯನ್‌ನಿಂದ ನಮಗೇನ್ರೀ  ಪ್ರಯೋಜನ?: ಜೆಫ್‌ಗೆ ಗೋಯಲ್ ಪ್ರಶ್ನೆ!

ಸಾರಾಂಶ

ಭಾರತದಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಘೋಷಿಸಿದ ಜೆಫ್ ಬೆಜೋಸ್| ಆನ್‌ಲೈನ್ ಆಧಾರಿತ ಸಣ್ಣ ಮತ್ತು ಮಧ್ಯಮ ವಾಣಿಜ್ಯ ಕಂಪನಿ ಗಳನ್ನು ತೆರೆಯುವುದಾಗಿ ಹೇಳಿದ ಜೆಫ್| 10 ಬಿಲಿಯನ್ ಡಾಲರ್ ಮೊತ್ತದ ಭಾರತದ ವಸ್ತುಗಳ ರಫ್ತಿನ ಗುರಿ| ಹೂಡಿಕೆಯಿಂದ ಭಾರತಕ್ಕೇನು ಲಾಭ ಎಂದು ಕೇಳಿದ ಕೇಂದ್ರ ಸಚಿವ| ಕಾನೂನುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ ಎಂದ ಪಿಯೂಷ್ ಗೋಯೆಲ್| 

ನವದೆಹಲಿ(ಜ.16): ಆನ್‌ಲೈನ್ ಆಧಾರಿತ ಸಣ್ಣ ಮತ್ತು ಮಧ್ಯಮ ವಾಣಿಜ್ಯ ಕಂಪನಿಗಳನ್ನು ಆರಂಭಿಸಲು, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಭಾರತದಲ್ಲಿ 1 ಬಿಲಿಯನ್ ಅಮೆರಿಕನ್ ಡಾಲರ್(7,100 ಕೋಟಿ ರೂ.) ಹೂಡಿಕೆ ಮಾಡುವ ಘೋಷಣೆ ಮಾಡಿದ್ದಾರೆ.

ಆದರೆ ಜೆಫ್ ಬೆಜೋಸ್ ಅವರ ಘೋಷಣೆಗೆ ಚಕಾರ ಎತ್ತಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್, ಇದರಿಂದ ಭಾರತಕ್ಕೆ ಏನೂ ಲಾಭವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿ ಜೆಫ್ ಬೆಜೋಸ್ ಭಾರತೀಯರಿಗೆ ಉಪಕಾರ ಮಾಡುತ್ತಿಲ್ಲ, ಬದಲಿಗೆ ಅವರ ಕಂಪನಿಯ ಲಾಭವನ್ನಷ್ಟೇ ಅವರು ನೋಡುತ್ತಿದ್ದಾರೆ ಎಂದು ಪಿಯೂಷ್ ಗೋಯೆಲ್ ಹೇಳಿದ್ದಾರೆ.

ಸೂಟ್‌ಕೇಸ್‌ನಲ್ಲಿ 1 ಬಿಲಿಯನ್ ಡಾಲರ್ ಇಟ್ಕೊಂಡು ಭಾರತಕ್ಕೆ ಬಂದ ಅಮೆಜಾನ್ ಮುಖ್ಯಸ್ಥ!

ಭಾರತದಲ್ಲಿ ಹೂಡಿಕೆ ಮಾಡುವ ಮೊದಲು ಇಲ್ಲಿನ ಕಾನೂನುಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿರುವ ಗೋಯೆಲ್, ಲಾಭ ನಷ್ಟದ ಹೊಣೆ ಹೂಡಿಕೆ ಮಾಡುವ ವಿದೇಶಿ ಕಂಪನಿಯದ್ದೇ  ಇರಲಿದೆ ಎಂದು ಎಚ್ಚರಿಸಿದ್ದಾರೆ .

ಭಾರತ ಅಮೆಜಾನ್’ನ ಬೃಹತ್ ಮಾರುಕಟ್ಟೆಯಾಗಿದ್ದು, ಇದನ್ನು ವಿಸ್ತರಿಸುವ ಉದ್ದೇಶದೊಂದಿಗೆ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿರುವುದಾಗಿ ಜೆಫ್ ಬೆಜೋಸ್ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಜನಸಂಖ್ಯೆ ಹೆಚ್ಚಳಕ್ಕೆ ಚೀನಾದಲ್ಲಿ ಕಾಂಡೋಮ್‌ ಟ್ಯಾಕ್ಸ್‌
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!