ಕಾರಿನ ಪ್ರೀತಿ ದುಬಾರಿಯಾಯ್ತು…! ಏನೂ ಇಲ್ಲದೆ ಕೋಟ್ಯಾಂತರ ರೂ. ದಂಡಕ್ಕೆ ಹೋಯ್ತು

Published : Jan 11, 2024, 02:48 PM ISTUpdated : Jan 11, 2024, 03:04 PM IST
ಕಾರಿನ ಪ್ರೀತಿ ದುಬಾರಿಯಾಯ್ತು…! ಏನೂ ಇಲ್ಲದೆ ಕೋಟ್ಯಾಂತರ ರೂ. ದಂಡಕ್ಕೆ ಹೋಯ್ತು

ಸಾರಾಂಶ

ಗೌತಮ್ ಸಿಂಘಾನಿಯಾ ಮತ್ತೆ ಸುದ್ದಿಯಲ್ಲಿದ್ದಾರೆ. ಅವರಿಗೆ ಕಾರಿನ ಮೇಲಿರುವ ಮೋಹವೇ ಅವರಿಗೆ ದುಬಾರಿಯಾಗಿದೆ. ಕಾರು ಆಮದಿನ ಸುಂಕ, ಬಡ್ಡಿ ಕೋಟ್ಯಾಂತರ ರೂಪಾಯಿಯಾಗಿದ್ದು, ಇಷ್ಟಾದ್ರೂ ಅವರ ಖುಷಿಗೆ ಧಕ್ಕೆಯಾಗಿಲ್ಲ.   

ಹವ್ಯಾಸಕ್ಕೆ, ಆಸೆಗೆ ಅತಿ ಹೆಚ್ಚು ಮಹತ್ವ ನೀಡುವ ಜನರು ನಮ್ಮಲ್ಲಿದ್ದಾರೆ. ಅವರು ಹವ್ಯಾಸಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರೆ. ಖುಷಿಯಾಗಿ ಎಷ್ಟು ಹಣ ಖರ್ಚು ಮಾಡಿದ್ರೂ ಅವರಿಗೆ ಬೇಸರವಾಗೋದಿಲ್ಲ. ಇದಕ್ಕೆ ಭಾರತೀಯ ಬಿಲಿಯನೇರ್ ಗೌತಮ್ ಸಿಂಘಾನಿಯಾ ಉತ್ತಮ ನಿದರ್ಶನ. ಅವರು ತಮ್ಮ ಆಸೆ ಈಡೇರಿಸಿಕೊಳ್ಳಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಆದ್ರೆ ಅವರು ಮಾಡಿದ ಖರ್ಚಿನಿಂದ ಅವರಿಗೆ ಲಾಭದ ಬದಲು ನಷ್ಟವಾಗಿದೆ. ಆದ್ರೂ ಅವರ ಮುಖದಲ್ಲಿ ನಗುವಿದೆ, ಸಂತೋಷವಿದೆ. ಇದಕ್ಕೆ ಕಾರಣ ಏನು ಅನ್ನೋದನ್ನು ನಾವು ಹೇಳ್ತೇವೆ.

ಕಾರು (Car) ಖರೀದಿಗೆ ಕೋಟ್ಯಾಂತರ ರೂ. ಖರ್ಚು : ಭಾರತೀಯ ಬಿಲಿಯನೇರ್ ಗೌತಮ್ ಸಿಂಘಾನಿ (Gautam Singhani) ಯಾಗೆ ಕಾರುಗಳೆಂದ್ರೆ ಬಹಳ ಇಷ್ಟ. ಅವರು ವಿಂಟೇಜ್ ಕಾರುಗಳನ್ನು ಖರೀದಿಸುವ ಹವ್ಯಾಸ (Hobbies) ಹೊಂದಿದ್ದಾರೆ. ಕಾರಿಗಾಗಿ ಅವರು ಕೋಟ್ಯಾಂತರ ರೂಪಾಯಿ ಖರ್ಚು ಮಾಡ್ತಾರೆ. ಆದ್ರೆ ಈ ಬಾರಿ ಕಾರು ಖರೀದಿ ಖರ್ಚಿನ ಜೊತೆ ಬಡ್ಡಿ ಹಾಗೂ ದಂಡಕ್ಕೆ ಅವರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದಿದೆ.

ಬಾಲಕನ ಹೊಟ್ಟೆಯೊಳಗಿದೆ ಟ್ರಾಕ್ಟರ್, ಮಿಮಿಕ್ರಿಗೆ ಮನಸೋತ ಆನಂದ್ ಮಹೀಂದ್ರ!

ವಾಸ್ತವವಾಗಿ ಗೌತಮ್ ಸಿಂಘಾನಿ, ಕಳೆದ ಕೆಲ ವರ್ಷಗಳಲ್ಲಿ ವಿಶ್ವದ ಅನೇಕ ದೇಶಗಳಿಂದ ಕಾರುಗಳನ್ನು ಆಮದು ಮಾಡಿಕೊಂಡಿದ್ದಾರೆ. ಅವರ 142 ಕಾರುಗಳು ಭಾರತಕ್ಕೆ ಆಮದಾಗಿವೆ. ಇದ್ರಲ್ಲಿ 138 ಕಾರುಗಳು ವಿಂಟೇಜ್ ಕಾರ್ ಗಳಾಗಿದ್ದು, 4 ಕಾರುಗಳನ್ನು ಆರ್ & ಡಿಗಾಗಿ ಆಮದು ಮಾಡಿಕೊಳ್ಳಲಾಗಿದೆ. ಅವರು ವಾಹನಗಳನ್ನು ವಿವಿಧ ಹರಾಜಿನಲ್ಲಿ ಖರೀದಿಸಿದ್ದಾರೆ. ಅದರಲ್ಲಿ ಸೋಥೆಬಿಸ್, ಬ್ಯಾರೆಟ್-ಜಾಕ್ಸನ್ ಮತ್ತು ಬೊನ್‌ಹ್ಯಾಮ್ಸ್‌ನಂತಹ ದೊಡ್ಡ ಹರಾಜು ಸೇರಿದೆ.

ಆಮದು ಸುಂಕ ತಪ್ಪಿಸಿಕೊಂಡಿದ್ದ ಗೌತಮ್ ಸಿಂಘಾನಿಯಾ :  ಗೌತಮ್ ಸಿಂಘಾನಿಯಾ ಕಾರುಗಳನ್ನು ಆಮದು ಮಾಡಿಕೊಂಡಿದ್ದಾರೆ ನಿಜ. ಆದ್ರೆ ಆಮದು ಸುಂಕವನ್ನು ಅವರು ಪಾವತಿಸಿಲ್ಲ.  ಈ ಕಾರುಗಳ ಮೇಲೆ ಅವರು 229.72 ಕೋಟಿ ರೂಪಾಯಿ ಆಮದು ಸುಂಕವನ್ನು ಪಾವತಿಸಬೇಕಾಗಿತ್ತು. ಅದಕ್ಕೆ ಶೇಕಡಾ 15ರಷ್ಟು ದಂಡ ಸೇರ್ಪಡೆಯಾಗಿದೆ. ಈ ಹಿನ್ನೆಲೆಯಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಗೌತಮ್ ಅವರಿಗೆ ನೋಟಿಸ್ ಜಾರಿ ಮಾಡಿದೆ. ಗೌತಮ್ ಒಟ್ಟು 328 ಕೋಟಿ ರೂಪಾಯಿಯನ್ನು ಈಗ ಆಮದು ಸುಂಕ ಮತ್ತು ದಂಡದ ರೂಪದಲ್ಲಿ ನೀಡಬೇಕಾಗಿದೆ. 

ಕಾರ್ ಮ್ಯೂಜಿಯಂ ಕನಸು : ಗೌತಮ್ ಸಿಂಘಾನಿಯಾ ಈ ಹಳೆಯ ಕಾರುಗಳನ್ನು ಖರೀದಿಸಿ ಕಾರ್ ಮ್ಯೂಸಿಯಂ ಮಾಡಲು ಬಯಸಿದ್ದಾರೆ. ಕಂಬಳ ಬೆಟ್ಟದ ಜೆಕೆ ಹೌಸ್ ನಲ್ಲಿ ಮ್ಯೂಜಿಯಂ ಶುರು ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಗೌತಮ್ ಸಿಂಘಾನಿಯಾ ಇಷ್ಟದ ಕಾರುಗಳ ಪಟ್ಟಿಯಲ್ಲಿ ವಿಂಟೇಜ್ ಕಾರುಗಳು ಮಾತ್ರ ಇಲ್ಲ. ಹಲವಾರು ಐಷಾರಾಮಿ ವಾಹನಗಳ ಸಮೂಹ ಇದೆ.  

ದುಡ್ಡು ಮಾಡೋದು ಹೇಗೆ? ಮಿಡಲ್ ಕ್ಲಾಸಿನವರೇಕೆ ಸಿರಿವಂತರಾಗೋಲ್ಲ?

ಗೌತಮ್ ಸಿಂಘಾನಿಯಾ ಯಾರು? : ಗೌತಮ್ ಸಿಂಘಾನಿಯಾ ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ರೇಮಂಡ್ ಗ್ರೂಪ್, ಬಟ್ಟೆ, ಡೆನಿಮ್,  ಎಂಜಿನಿಯರಿಂಗ್ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ಅನೇಕ  ವ್ಯವಹಾರಗಳನ್ನು ಹೊಂದಿದೆ. ಸಿದ್ಧ ಉಡುಪುಗಳ ಮಾರುಕಟ್ಟೆಯಲ್ಲಿ ಈ ಗುಂಪು ಪ್ರಬಲ ಅಸ್ತಿತ್ವವನ್ನು ಹೊಂದಿದೆ.  ಗೌತಮ್ ಸಿಂಘಾನಿಯಾ ಸುಮಾರು 11 ಸಾವಿರ ಕೋಟಿ ರೂಪಾಯಿ ನಿವ್ವಳ ಮೌಲ್ಯದ ಆಸ್ತಿ ಹೊಂದಿದ್ದಾರೆ. ಸಿಂಘಾನಿಯಾ ಅವರ ಸಂಪತ್ತಿನ ಹೆಚ್ಚಿನ ಭಾಗವು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆಯಾಗಿದೆ.  ಕೆಳ ತಿಂಗಳ ಹಿಂದೆ ಗೌತಮ್ ಸಿಂಘಾನಿಯಾ ಕೌಟುಂಬಿಕ ವಿಷ್ಯಕ್ಕೆ ಸುದ್ದಿಯಲ್ಲಿದ್ದರು. ಅವರ ಪತ್ನಿ ನವಾಜ್ ಮೋದಿಗೆ ವಿಚ್ಛೇದನ ನೀಡುವ ವಿಷ್ಯ ಚರ್ಚೆಗೆ ಬಂದಿತ್ತು. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!