ಆಸಕ್ತಿ, ಪರಿಶ್ರಮ, ಶ್ರದ್ಧೆಯಿದ್ರೆ ಗಳಿಕೆ ಕಷ್ಟವಲ್ಲ. ಸ್ಪಷ್ಟಗುರಿಯೊಂದಿಗೆ ಮುನ್ನುಗ್ಗಿದ್ರೆ ಪ್ರಸಿದ್ಧಿ, ಹಣ ತಾನಾಗಿಯೇ ಬರುತ್ತದೆ. ಇದಕ್ಕೆ ರಣವೀರ್ ಬ್ರಾರ್ ಉತ್ತಮ ನಿದರ್ಶನ. ಒಂದು ಸಮಯದಲ್ಲಿ ಕೆಲಸಕ್ಕೆ ಅಲೆಯುತ್ತಿದ್ದ ಬ್ರಾರ್ ಈಗ ಲಕ್ಷ ಲಕ್ಷ ಸಂಪಾದನೆ ಮಾಡ್ತಾರೆ.
ನೀವು ಮಾಡುವ ರುಚಿ ರುಚಿ ಅಡುಗೆ ಕೇವಲ ಮನೆ ಮಂದಿಗೆ ಸೀಮಿತವಾಗಿದ್ರೆ ಸಾಲದು. ನಿಮ್ಮ ಕೈ ಅದ್ದಿದ್ರೆ ಸಾಕು, ಅಡುಗೆಗೆ ಹೊಸ ಟೇಸ್ಟ್ ಬರುತ್ತೆ ಎಂಬ ಗುಟ್ಟು ನಿಮಗೆ ತಿಳಿದಿದ್ರೆ ಅದನ್ನೇ ಬಂಡವಾಳ ಮಾಡ್ಕೊಂಡು ಲಕ್ಷಾಂತರ ರೂಪಾಯಿ ಗಳಿಸಬಹುದು. ಭಾರತದಲ್ಲಿ ಸಾಕಷ್ಟು ಪ್ರಸಿದ್ಧ ಬಾಣಸಿಗರಿದ್ದಾರೆ. ಅವರೆಲ್ಲ ಆಹಾರ ತಯಾರಿಸಿ ಹಣ ಗಳಿಸೋದು ಮಾತ್ರವಲ್ಲ ನಾನಾ ಪುಸ್ತಕ, ಟಿಪ್ಸ್, ಕಾರ್ಯಕ್ರಮ ನೀಡಿ ಆದಾಯ ಗಳಿಸ್ತಿದ್ದಾರೆ.
ಭಾರತ (India) ದಲ್ಲಿ ಪ್ರಸಿದ್ಧಿ ಪಡೆದ ಬಾಣಸಿಗರಲ್ಲಿ ರಣವೀರ್ ಬ್ರಾರ್ (Ranveer Brar ) ಕೂಡ ಸೇರಿದ್ದಾರೆ. ಬಾಣಸಿಗ (Chef) , ರೆಸ್ಟೋರೆಂಟ್ ಮಾಲೀಕ, ಬರಹಗಾರ ಮತ್ತು ಟೆಲಿವಿಜನ್ ಸೆಲೆಬ್ರಿಟಿ ರಣವೀರ್ ಬ್ರಾರ್ ನಡೆದು ಬಂದ ಹಾದಿ ತುಂಬಾ ಆಸಕ್ತಿಯಿಂದ ಕೂಡಿದೆ. ಅವರ ಸಾಧನೆ ಹಾಗೂ ಗಳಿಕೆ ಬಗ್ಗೆ ನಿಮಗೊಂದಿಷ್ಟು ಮಾಹಿತಿ ಇಲ್ಲಿದೆ.
undefined
ರಣವೀರ್ ಬ್ರಾರ್ ನಡೆದು ಬಂದ ಹಾದಿ : ರಣವೀರ್ ಬ್ರಾರ್ ಲಕ್ನೋ ಮೂಲದವರು. ಫೆಬ್ರವರಿ 8, 1978 ರಂದು ರೆಸ್ಟೋರೆಂಟ್ ಮಾಲೀಕತ್ವದ ಕುಟುಂಬದಲ್ಲಿ ಹುಟ್ಟಿದ್ರು. ಚಿಕ್ಕ ವಯಸ್ಸಿನಲ್ಲೇ ಅಡುಗೆ ಮೇಲೆ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಆಗಾಗ ತಾಯಿಗೆ ಅಡುಗೆಮನೆಯಲ್ಲಿ ಸಹಾಯ ಮಾಡ್ತಿದ್ದರು. ಪ್ರೌಢಶಾಲೆಯ ನಂತರ ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್ ಸೇರಿದ್ದ ರಣವೀರ್ ಬ್ರಾರ್, ಕೆಲವೇ ತಿಂಗಳಿನಲ್ಲಿ ಇದನ್ನು ಬಿಟ್ಟಿದ್ದರು. ನಂತರ ಅವರು ಪಾಕಶಾಸ್ತ್ರವನ್ನು ವೃತ್ತಿಯಾಗಿಸಿಕೊಳ್ಳುವ ಗುರಿಯೊಂದಿಗೆ ಮುಂಬೈಗೆ ಪ್ರಯಾಣ ಬೆಳೆಸಿದ್ದರು.
ಎಲ್ಲರೂ ದುಡ್ಡು ಕಳೆದುಕೊಂಡರೆ ಇವನು ಆಲ್‌ಲೈನ್ ಗೇಮಲ್ಲಿ 18 ಲಕ್ಷ ಗಳಿಸಿದ್ದಾನೆ!
ಬಾಣಸಿಗನಾಗಿ ಕೆಲಸ ಸಿಗುವವರೆಗೂ ಬ್ರಾರ್, ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡ್ತಿದ್ದರು. ಅವರ ಈ ದಾರಿ ಸುಗಮವಾಗಿರಲಿಲ್ಲ. ಕೊನೆಗೂ ಅವರ ಪ್ರಯತ್ನಕ್ಕೆ ಫಲ ಸಿಕ್ಕಿತ್ತು. ಅಂತಿಮವಾಗಿ ತಾಜ್ ಮಹಲ್ ಪ್ಯಾಲೇಸ್ ನಲ್ಲಿ ಬಾಣಸಿಗರ ಕೆಲಸ ಸಿಕ್ಕಿತ್ತು. ಅಲ್ಲಿಯೇ ಬ್ರಾರ್, ಮುಖ್ಯ ಬಾಣಸಿಗರಾಗಿ ಕೆಲಸ ನಿರ್ವಹಿಸಿದ್ದರು. ಮಾಸ್ಟರ್‌ಶೆಫ್ ಇಂಡಿಯಾ ಕೊನೆಗೊಂಡ ನಂತ್ರ ರಣವೀರ್ ಬ್ರಾರ್ ಹೆಸರು ಸಾಕಷ್ಟು ಪ್ರಸಿದ್ಧಿಗೆ ಬಂದಿದೆ. ಇದ್ರ ಹಿಂದೆ ರಣವೀರ್ ಬ್ರಾರ್ ಪರಿಶ್ರಮ ಸಾಕಷ್ಟಿದೆ. ರಣವೀರ್ ಬ್ರಾರ್ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅದ್ರಲ್ಲಿ ದಿ ಇಂಡಿಯನ್ ಕಿಚನ್ ಕೂಡ ಸೇರಿದೆ. ಸಂಜೀವ್ ಕಪೂರ್ ಕೆ ಕಿಚನ್ ಕಿಲಾಡಿ ಮತ್ತು ರಣವೀರ್ ಅವರ ಚಖಲೆ ಇಂಡಿಯಾ ನಂತಹ ಕೆಲವು ಆಹಾರ ಸಂಬಂಧಿ ಕಾರ್ಯಕ್ರಮಗಳನ್ನು ಬ್ರಾರ್ ನಡೆಸಿಕೊಟ್ಟಿದ್ದಾರೆ.
ರಣವೀರ್ ಬ್ರಾರ್ ದೆಹಲಿ ಮತ್ತು ಮುಂಬೈನಲ್ಲಿ ತಮ್ಮ ತಿನಿಸುಗಳ ವ್ಯಾಪಾರವನ್ನು ಹೆಚ್ಚಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ರಣವೀರ್ ಬ್ರಾರ್, ಭಾರತದ ಅತ್ಯಂತ ಶ್ರೀಮಂತ ಬಾಣಸಿಗರ ಪೈಕಿ ಒಬ್ಬರಾಗಿದ್ದಾರೆ. ಅವರ ಯೋಜಿತ ನಿವ್ವಳ ಮೌಲ್ಯ 41 ಕೋಟಿ ರೂಪಾಯಿ. ಈ ಸಮಯದಲ್ಲಿ ರಣವೀರ್ ಬ್ರಾರ್ ಅವರ ತಿಂಗಳ ಆದಾಯ ಬರೋಬ್ಬರಿ 45 ಲಕ್ಷ ಎಂದು ಅಂದಾಜಿಸಲಾಗಿದೆ. ಪುಸ್ತಕ, ಟಿವಿಕಾರ್ಯಕ್ರಮ ಹೊರತುಪಡಿಸಿ, ರಣವೀರ್ ಬ್ರಾರ್ ವೆಬ್ಸೈಟ್ ಕೂಡ ನಡೆಸುತ್ತಾರೆ. ಅದ್ರಲ್ಲಿ ನೀವು ಸಾಕಷ್ಟು ವೆರೈಟಿ ಆಹಾರಗಳನ್ನ ನೋಡ್ಬಹುದು. ಯುಟ್ಯೂಬ್ ಚಾನಲ್ ಕೂಡ ನಡೆಸ್ತಿರುವ ರಣವೀರ್ ಬ್ರಾರ್, ಅದ್ರಿಂದಲೂ ಲಕ್ಷಾಂತರ ರೂಪಾಯಿ ಗಳಿಸ್ತಾರೆ.
ರೈತರಿಲ್ಲಿ ತಿಂಗಳಿಗೆ MNC ಉದ್ಯೋಗಿಗಳಂತೆ ಲಕ್ಷಗಟ್ಟಲೆ ಸಂಪಾದಿಸ್ತಾರೆ!
ರಣವೀರ್ ಬ್ರಾರ್ ಮಾಲೀಕತ್ವದಲ್ಲಿ ಅನೇಕ ಹೊಟೇಲ್ ಗಳಿವೆ. ಅವುಗಳಲ್ಲಿ ಗೋವಾದ ಸುಂದರವಾದ ಕಡಲತೀರಗಳ ನಡುವೆ ನೆಲೆಸಿರುವ ಮೊರಿಸ್ಕೊ ಪ್ರಸಿದ್ಧಿ ಪಡೆದಿದೆ. ತಾಜಾ ಮೀನಿನ ಆಹಾರವನ್ನು ನೀವು ಸವಿಯಬಹುದು. ಗೋವಾದಲ್ಲಿರುವ ಇಲ್ ಕ್ಯಾಮಿನೊ ಕೂಡ ರಣವೀರ್ ಬ್ರಾರ್ ನಿರ್ವಹಣೆಯಲ್ಲಿದೆ. ಪಿಶ್ ಟೈಲ್ ಹೊಟೇಲ್ ಗೋವಾ, ಮುಂಬೈನಲ್ಲಿರುವ ಇಂಗ್ಲಿಷ್ – ವಿಂಗ್ಲೀಷ್ ಹೊಟೇಲ್ ಕೂಡ ರಣವೀರ್ ಬ್ರಾರ್ ಮಾಲಿಕತ್ವದ್ದಾಗಿದೆ.