ಲಂಡನ್ ರಸ್ತೇಲಿ ಮಸಾಲೆ ಮಂಡಕ್ಕಿ ಘಮ.. ಭಾರತೀಯ ಸ್ಟ್ರೀಟ್ ಫುಡ್ ಮಾರ್ತಾರೆ ವಿದೇಶಿಗ

By Suvarna News  |  First Published Jul 5, 2023, 12:47 PM IST

ವಿದೇಶದಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆ ಸಾಕಷ್ಟಿದೆ. ತಮ್ಮ ದೇಶದ ತಿಂಡಿಗಳ ಸವಿ ಸವಿಯಲು ಅವರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಇದನ್ನೇ ಲಂಡನ್ ವ್ಯಕ್ತಿ ಬಂಡವಾಳ ಮಾಡಿಕೊಂಡಿದ್ದಾರೆ. ಅವರ ಕೃಪೆಯಿಂದ ಕಲ್ಕತ್ತಾ ಸ್ಟ್ರೀಟ್ ಫುಡ್ ಲಂಡನ್‌ನಲ್ಲಿ ಸಿಗುವಂತಾಗಿದೆ.
 


ಸಂಜೆ ಆಗ್ತಿದ್ದಂತೆ ನಗರದ ರಸ್ತೆಗಳಲ್ಲಿ ಜನಜಂಗುಳಿ ಆರಂಭವಾಗುತ್ತೆ. ತರಹೇವಾರಿ ಸ್ಟ್ರೀಟ್ ಫುಡ್ಸ್ ಸುವಾಸನೆ ಗಲ್ಲಿ ಗಲ್ಲಿಗಳಲ್ಲಿ ಹರಡಿರುತ್ತೆ. ಗೋಲ್ಗಪ್ಪಾ, ಮಸಾಲೆ ಪುರಿ, ಪಾನಿಪುರಿ, ಬೇಲ್ ಪುರಿಯಂತಹ ಹಲವಾರು ತಿಂಡಿಗಳು ಜನರನ್ನು ಕೈ ಬೀಸಿ ಕರೆಯುತ್ತವೆ.  ಈ ತರಹದ ಸ್ಟ್ರೀಟ್ ಫುಡ್ (Street Food) ಗಳು ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರುತ್ತದೆ. ಹೊರ ರಾಜ್ಯದ ಹಾಗೂ ಹೊರ ದೇಶದ ತಿಂಡಿಗಳು ನಮ್ಮ ದೇಶದಲ್ಲಿ ಫೇಮಸ್ ಆದ ಹಾಗೆ ನಮ್ಮ ದೇಶದ ಸ್ಟ್ರೀಟ್ ಫುಡ್ ವಿದೇಶಿಗರಿಗೆ ಬಹಳ ಇಷ್ಟ. ಹಾಗೆಯೇ ಅಲ್ಲಿ ನೆಲೆಸಿರುವ ಭಾರತೀಯರಿಗೆ ದೇಶದ ನೆನಪನ್ನು, ಇಲ್ಲಿನ ರುಚಿಯನ್ನು ಉಣಬಡಿಸುತ್ತೆ. ನಮ್ಮ ದೇಶದವರು ವಿದೇಶಕ್ಕೆ ಹೋಗಿ ಅಲ್ಲಿ ನಮ್ಮೂರ ರುಚಿ ಉಣಬಡಿಸುವುದು ಸಾಮಾನ್ಯ ಸಂಗತಿ. ಆದ್ರೆ ವಿದೇಶದ ವ್ಯಕ್ತಿಯೊಬ್ಬ ನಮ್ಮ ದೇಶದ ತಿಂಡಿಯನ್ನು ತನ್ನೂರಿನಲ್ಲಿ ನಮ್ಮವರಿಗೆ ನೀಡ್ತಿರುವುದು ವಿಶೇಷ. 

ಲಂಡನ್ (London)  ವ್ಯಕ್ತಿಯೊಬ್ಬ ಕಲ್ಕತ್ತಾದ ಒಂದು ಸ್ಟ್ರೀಡ್ ಫುಡ್ ಅನ್ನು ಸ್ವತಃ ತಾನೇ ತಯಾರಿಸಿ ಲಂಡನ್ ರಸ್ತೆಗಳಲ್ಲಿ ಮಾರುತ್ತಿದ್ದಾನೆ. ಆತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಲಂಡನ್ ಅಲ್ಲಿ ಫೇಮಸ್ ಆಗಿದೆ ಕಲ್ಕತ್ತಾದ ಜಲ್ಮುಡಿ (Jhalmudi) ಲಂಡನ್ ನ ಬೀದಿಗಳಲ್ಲಿ ಈಗ ಹೆಸರುವಾಸಿ. ಇದು ನಮ್ಮ ದೇಶದ ಬೀದಿ ಬದಿ ಹಾಗೂ ರೈಲಲ್ಲಿ ಸಿಗೋ ಮಸಾಲೆ ಮಂಡಕ್ಕಿ ರೀತಿಯೇ ಇರುತ್ತೆ. ಬ್ರಿಟಿಷ್ ಶೆಫ್ ಆಗಿರುವ 63 ವರ್ಷದ ಎಂಗಸ್. ಜೊ ಎನ್ನುವವರು ಝಲ್ಮುರಿಯ ರುಚಿಯನ್ನು ಲಂಡನ್ನಿನ ಜನರಿಗೆ ಹಂಚುತ್ತಿದ್ದಾರೆ. ಭಾರತದಲ್ಲಿ ಹೇಗೆ ವಿದೇಶದ ಫುಡ್ ಜನಪ್ರಿಯವಾಗಿದೆಯೋ ಹಾಗೆ ವಿದೇಶದಲ್ಲಿಯೂ ಭಾರತದ ಫುಡ್ ಫೇಮಸ್ ಆಗುತ್ತಿದೆ ಅನ್ನೋದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.

ಬೆಂಗಳೂರಿನಲ್ಲಿ ಸಿಗ್ತಿದೆ ಬಾಳೆದಿಂಡಿನ ಚಾಟ್‌ ಮಸಾಲ, ಸಿಕ್ಕಾಪಟ್ಟೆ ಹೆಲ್ದೀ ಕಣ್ರೀ..

Tap to resize

Latest Videos

ಬ್ರಿಟೀಶ್ ಶೆಫ್ ಆಗಿರುವ ಎಂಗಸ್ ಅವರು ಭಾರತದ ಮಾದರಿಯಲ್ಲೇ ಜಲ್ಮುರಿ ಅಥವಾ ಜಲ್ಮುಡಿ ತಯಾರಿಸುತ್ತಿರುವುದು ವಿಶೇಷ. ರಸ್ತೆ ಬದಿಯಲ್ಲಿ ಚಿಕ್ಕದಾದ ತಳ್ಳುಗಾಡಿಯಲ್ಲಿ ಇವರು ಇದಕ್ಕೆ ಬೇಕಾಗುವಂತಹ ಹುಣಸೆ ಹಣ್ಣಿನ ನೀರು, ಮಸಾಲೆ, ಚುರುಮುರಿ, ಕೊತ್ತುಂಬರಿ ಸೊಪ್ಪು ಮುಂತಾದ ಎಲ್ಲ ಪದಾರ್ಥಗಳನ್ನು ಅಚ್ಚುಕಟ್ಟಾಗಿ ಜೋಡಿಸಿಕೊಂಡಿದ್ದಾರೆ. ಇವರ ಗಾಡಿಯನ್ನು ನೋಡುವ ಪ್ರತಿಯೊಬ್ಬ ಭಾರತೀಯನಿಗೂ ತನ್ನ ದೇಶದ ನೆನಪಾಗುತ್ತದೆ.

ಒಳ್ಳೆಯ ಸಂಪಾದನೆ : 2006 ಇಸವಿಯಲ್ಲಿ ನಾನು ಕಲ್ಕತ್ತಾಗೆ ಹೋಗಿದ್ದೆ. ಆ ಸಮಯದಲ್ಲಿ ಅಲ್ಲಿನ ಈ ವಿಶಿಷ್ಟ ರುಚಿಯ ಝಲ್ಮುರಿ ನನಗೆ ಬಹಳ ಇಷ್ಟವಾಯಿತು. ಅದೇ ನನ್ನನ್ನು ಈ ಕೆಲಸ ಮಾಡಲು ಪ್ರೇರೇಪಿಸಿತು ಎಂದು ಎಂಗಸ್ ತಮ್ಮ ಅಭಿಪ್ರಾಯ ಹೇಳ್ತಾರೆ. 2019 ರ ವರ್ಲ್ಡ್ ಕಪ್ ಸಮಯದಲ್ಲಿ ಕೂಡ ಎಂಗಸ್ ಕ್ರೀಡಾಂಗಣದ ಹೊರಗೆ ಝಲ್ಮುರಿಯನ್ನು ತಯಾರಿಸಿ ಮಾರಾಟ ಮಾಡಿದ ಸುದ್ದಿ ಬಹಳ ವೈರಲ್ ಆಗಿತ್ತು. ಈಗ ಲಂಡನ್ ನಲ್ಲಿಯೂ ಕೂಡ ಹಲವಾರು ಮಂದಿ ಎಂಗಸ್ ಅವರ ಝಲ್ಮುರಿಗೆ ಮನಸೋತಿದ್ದಾರೆ.  ಎಂಗಸ್ ಅವರು ಝಲ್ಮುರಿಗೆ ಬೇಕಾಗುವಂತಹ ಕೆಲವು ಪದಾರ್ಥಗಳನ್ನು ಬಾಂಗ್ಲಾ ದೇಶದಲ್ಲಿ ಹಾಗೂ ಇನ್ನು ಕೆಲವನ್ನು ಭಾರತೀಯ ಶಾಪ್ ಗಳಿಂದ ತಂದುಕೊಳ್ತಾರಂತೆ. ಭಾರತೀಯ ದರದಲ್ಲಿ ಝಲ್ಮುರಿಯ ಬೆಲೆ 400 ರೂಪಾಯಿ.

ಬಾಯಲ್ಲಿ ನೀರೂರಿಸುವ ಈ ಸ್ಟ್ರೀಟ್ ಫುಡ್ ತಿನ್ನದಿದ್ದರೆ ಜೀವನವೇ ವೇಸ್ಟ್ ಬಿಡಿ

ಎಂಗಸ್ ಅವರು ತಾವು ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಈ ಬೀದಿ ಬದಿ ಫುಡ್ ವ್ಯಾಪಾರದಲ್ಲಿ ಒಳ್ಳೆಯ ಹಣ ಗಳಿಸುತ್ತಿದ್ದಾರೆ. ಇವರು ತಮ್ಮ ಚಿಕ್ಕ ಅಂಗಡಿಗೆ ಜಾಲ್ಮುರಿ ಎಕ್ಸಪ್ರೆಸ್, ಕಲ್ಕತ್ತಾ ಚ್ಯಾಟ್ ಅಥೆಂಟಿಕ್ ಎಂಡ್ ಒರಿಜಿನಲ್ ಎಂದು ಹೆಸರಿಟ್ಟುಕೊಂಡಿದ್ದಾರೆ. ಲಂಡನ್ನಿನ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಕ್ರಿಕೆಟ್ ಮ್ಯಾಚ್ ನಡೆಯುವ ಸಂದರ್ಭದಲ್ಲಿ ಪ್ರತಿ ಬಾರಿಯೂ ಎಂಗಸ್ ಅವರು ಝಲ್ಮುರಿ ತಯಾರಿಸುತ್ತಾರೆ. ಕ್ರಿಕೆಟ್ ಪಂದ್ಯ ಮುಗಿದ ತಕ್ಷಣ ಹಲವಾರು ಮಂದಿ ಝಾಲ್ಮುರಿಯನ್ನು ಖರೀದಿಸುತ್ತಾರೆ. ಇದು ನನಗೆ ಖುಷಿ ನೀಡುತ್ತೆ ಎನ್ನುತ್ತಾರೆ ಎಂಗಸ್. 


 

click me!