
ಜೈಪುರ: ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ (ಎಸ್‌ಎಫ್‌ಬಿ) ಎಂಬ ರಾಜಸ್ಥಾನ ಮೂಲದ ಬ್ಯಾಂಕ್ ತನ್ನ ಎಲ್ಲ ಗ್ರಾಹಕರಿಗೆ ವರ್ಷದ 365 ದಿನಗಳವರೆಗೆ 24 ಗಂಟೆಯೂ ವಿಡಿಯೋ ಬ್ಯಾಂಕಿಂಗ್ ಸೌಲಭ್ಯವನ್ನು ಒದಗಿಸುವ ಮೂಲಕ ಇಂಥ ಸೌಲಭ್ಯ ಒದಗಿಸಿದ ಭಾರತದ ಮೊದಲ ಬ್ಯಾಂಕ್ ಎನಿಸಿಕೊಂಡಿದೆ. ಈ ವಿಡಿಯೋ ಬ್ಯಾಂಕಿಗ್ ಸೌಲಭ್ಯದ ಮೂಲಕ ನೂತನ ಬ್ಯಾಂಕ್ ಖಾತೆ ತೆರೆಯುವುದು ಹಾಗೂ ಕೆವೈಸಿ (KYC) ಸೇರಿದಂತೆ ತಮ್ಮ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದ 400ಕ್ಕೂ ಅಧಿಕ ಸಮಸ್ಯೆಗಳನ್ನು ಗ್ರಾಹಕರು ಪರಿಹರಿಸಿಕೊಳ್ಳಬಹುದಾಗಿದೆ.
‘ಬ್ಯಾಂಕಿನ ಗ್ರಾಹಕರಿಗೆ (Bank customer) ಅವರ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಕ್ರೆಡಿಟ್ ಕಾರ್ಡ್ (credit card), ಸಾಲ, ಉಳಿತಾಯ, ಡಿಜಿಟಲ್ ಉಳಿತಾಯ, ಮೂಲ ಸೇವಾ ಉಳಿತಾಯ ಮತ್ತು ಚಾಲ್ತಿ ಖಾತೆ ಸೇರಿದಂತೆ ಎಲ್ಲ ಅಂಶಗಳ ಕುರಿತ ವ್ಯವಹಾರ ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಸೌಲಭ್ಯವು ಲಭ್ಯವಾಗಲಿದೆ’ ಎಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಉತ್ತಮ್ ತೆಬ್ರಿವಾಲ್ ತಿಳಿಸಿದ್ದಾರೆ. ಇನ್ನು ಪ್ರಧಾನ್ ಮಂತ್ರಿ ಜನ್‌ಧನ್ ಖಾತೆದಾರರೂ ಈ ವಿಡಿಯೋ ಬ್ಯಾಂಕಿಂಗ್ ಸೌಲಭ್ಯ ಪಡೆಯಬಹುದಾಗಿದೆ.
ನಿಮಗೆ ಗೊತ್ತಿಲ್ಲದೇ ಅದು, ಇದು ಅಂಥ ಸರ್ವಿಸ್ ಚಾರ್ಜ್ ಹಾಕುತ್ತೆ ಬ್ಯಾಂಕ್, ಇರಲಿ ಗಮನ
ಈ ಬ್ಯಾಂಕಿನ ಕೇಂದ್ರ ಕಚೇರಿ ರಾಜಸ್ಥಾನದ (Rajasthan) ಜೈಪುರದಲ್ಲಿದೆ. ವಿಶೇಷವೆಂದರೆ ಕರೆಯಲ್ಲಿ ಖಾತೆದಾರ ಗ್ರಾಹಕರೇ ಮಾತನಾಡುತ್ತಿದ್ದಾರೋ ಇಲ್ಲವೋ ಎಂಬುದನ್ನು ಪತ್ತೆ ಹಚ್ಚಲು ಎಐ ಮೂಲಕ ಗ್ರಾಹಕ ಮುಖ ಪತ್ತೆಮಮಾಡುವ ತಂತ್ರಜ್ಞಾನವನ್ನೂ ಈ ಬ್ಯಾಂಕ್ ಅಳವಡಿಸಿಕೊಂಡಿದೆ. ಚೆಕ್, ಠೇವಣಿ ಸೇರಿದಂತೆ ಯಾವುದೇ ರೀತಿಯ ನಗದು ಸಂಬಂಧಿತ ವ್ಯವಹಾರಗಳನ್ನು ಮಾತ್ರ ಈ ವಿಡಿಯೋ ಬ್ಯಾಂಕಿಂಗ್‌ನಲ್ಲಿ ನಿರ್ವಹಿಸಲು ಸಾಧ್ಯವಿಲ್ಲ.
ಒಂದಕ್ಕಿಂತ ಹೆಚ್ಚು PAN Card ಹೊಂದಿದ್ರೆ ಜೇಬಿಗೆ ಬೀಳುತ್ತೆ ಕತ್ತರಿ!
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.