ವಿಶ್ವದ ಪ್ರಬಲ ಆರ್ಥಿಕ ಶಕ್ತಿ ಕೇಂದ್ರವಾದ ಭಾರತ, ಮೋರ್ಗಾನ್ ಸ್ಟಾನ್ಲಿ ಪೋರ್ಟ್‌ಫೋಲಿಯೋ ಬಹಿರಂಗ!

By Suvarna News  |  First Published Aug 8, 2023, 7:05 PM IST

ಜಾಗತಿಕ ಮಟ್ಟದ ಸವಾಲುಗಳ ಜೊತೆ ಆತಂರಿಕ ಸವಾಲುಗಳನ್ನು ಸಮರ್ಥವಾಗಿ ಮೆಟ್ಟಿನಿಲ್ಲುವ ಮೂಲಕ ಭಾರತ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗೆ ಬೆಳೆದಿದೆ. ಈ ಕುರಿತು ಮೋರ್ಗಾನ್ ಸ್ಟಾನ್ಲಿ ಪ್ರಕಟಿಸಿದ ವರದಿ ಇದೀಗ ಭಾರತದ ಹಿರಿಮೆಯನ್ನು ಸಾರಿ ಹೇಳುತ್ತಿದೆ.


ನವದೆಹಲಿ(ಆ.08)  ಕಳೆದ 9 ತಿಂಗಳಲ್ಲಿ ಇಎಂ ಮಾರುಕಟ್ಟೆಯಲ್ಲಿ ಭಾರತದ ಅದ್ವಿತೀಯ ಸಾಧನೆಯನ್ನು ಮೋರ್ಗನ್ ಸ್ಟಾನ್ಲಿ ಪೋರ್ಟ್‌ಫೋಲಿಯೋ ಬಹಿರಂಗಪಡಿಸಿದೆ. ಜಾತ್ಯಾತೀತಯೆ ನಾಯಕತ್ವ, ಉದಯೋನ್ಮುಖ ಮಾರುಕಟ್ಟೆ, EPS ಬೆಳವಣಿಗೆಯಿಂದ ಭಾರತ ಕಡಿಮೆ ತೂಕದಿಂದ ಸಮಾನ ತೂಕ ಮಟ್ಟಕ್ಕೆ ಜಿಗದಿದಿದೆ. ಮೋರ್ಗಾನ್ ಸ್ಟಾನ್ಲಿಯ ಏಷ್ಯಾ ಮತ್ತು ಇಎಮ್ ಇಕ್ವಿಟಿ ಸ್ಟ್ರಾಟೆಜಿಸ್ಟ್ ಜೊನಾಥನ್ ಗಾರ್ನರ್ ಪ್ರಕಾರ, ಭಾರತದ ಆರ್ಥಿಕ ಮಾರುಕಟ್ಟೆ ಬೆಳವಣಿಗೆಯಿಂದ ಏಷ್ಯಾಮಾರುಕ್ಟಟೆ ಮೇಲೆ ಪರಿಣಾಮ ಬೀರಿದೆ. ಏಷ್ಯಾದ ಇಎಂ ಮಾರುಕಟ್ಟೆ ಕಳೆದ 9 ತಿಂಗಳಿನಿಂದ ಹಿಂದುಳಿದಿದೆ ಎಂದಿದ್ದಾರೆ. 

ಮಾರುಕಟ್ಟೆ  ಮರುಮೌಲ್ಯಮಾಪನದ ನಂತರ ತೈವಾನ್‌ನಲ್ಲಿ ಲಾಭ-ತೆಗೆದುಕೊಳ್ಳುವಿಕೆ, ಚೀನಾದೊಂದಿಗೆ ಜಾಗರೂಕತೆ ಹೆಜ್ಜೆ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳಿಂದ ಆರ್ಥಿಕ ಶಕ್ತಿಯಾಗಿ ಬೆಳೆಯತ್ತಿದೆ. ಭಾರದದ ಯುವ ಜನಸಂಖ್ಯೆ ಈಕ್ವಿಟಿ ಒಳಹರಿವು ಬೆಂಬಲಿಸುತ್ತದೆ. ರೂಪಾಯಿ ಹೆಚ್ಚಿದ ಸ್ಥಿರತೆ ಹಾಗೂ ಮೌಲ್ಯ ವರ್ಧನೆಯೆ ಸಾಮರ್ಥ್ಯ ಭಾರತವನ್ನು ಹೊಸ ವೇಗದಲ್ಲಿ ಕೊಂಡೊಯ್ದಿದೆ ಎಂದು ಜೊನಾಥನ್ ಗಾರ್ನರ್ ಹೇಳಿದ್ದಾರೆ.

Tap to resize

Latest Videos

ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟ ಫಿಡೆಲಿಟಿ, ಬೆಂಗಳೂರಿನಲ್ಲಿ ಹೊಸ ಕಚೇರಿ, 800 ಜಾಬ್ಸ್‌!

ಎಕಾನಾಮಿಕ್ಸ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಜೊನಾಥನ್ ಗಾರ್ನರ್, ಭಾರತದ ಬೆಳವಣಿಗೆ ಹಾಗೂ ಚೀನಾ ಎದುರಿಸುತ್ತಿರುವ ಸವಾಲುಗಳ ಕುರಿತು ಬೆಳಕು ಚೆಲ್ಲಿದ್ದಾರೆ. ಚೀನಾದ ದುರ್ಬಲ ಆರ್ಥಿಕತೆ ಚೇತರಿಕೆ ಹಾಗೂ ಜನಸಂಖ್ಯಾ ಸವಾಲುಗಳನ್ನು ವಿವರಿಸಿದ್ದಾರೆ. ಇದೇ ವೇಳೆ ಭಾರತದಲ್ಲಿರುವ ಉತ್ಪಾದನೆ ಹಾಗೂ ಸೇವಾ ಕ್ಷೇತ್ರಗಳ ಅಭಿವೃದ್ಧಿ, ಮೂಲಸೌಕರ್ಯಗಳ ಮೇಲ್ದರ್ಜೆ, ರಿಯಲ್ ಎಸ್ಟೇಟ್ ವಹಿವಾಟು, ಎಫ್‌ಡಿಐ, ಯುವ ಜನಸಂಖ್ಯಾ ಪ್ರಯೋಜನದಿಂ ಸದೃಢ ಆರ್ಥಿಕತೆಯಾಗಿ ಭಾರತ ಬೆಳೆದಿದೆ ಎಂದಿದ್ದಾರೆ.

ಭಾರತ ಹಾಗೂ ಚೀನಾದ ಜಿಡಿಪಿ ತಲಾವಾರು ನೋಡಿ ಎಲ್ಲವನ್ನೂ ಅಳೆಯಲು ಸಾಧ್ಯವಿಲ್ಲ. ಆರ್ಥಿಕತೆಯ ಚೇತರಿಕೆ ಮುಖ್ಯ ಎಂದು ಗಾರ್ನರ್ ಹೇಳಿದ್ದಾರೆ. ಭಾರತದ ತಲಾವಾರು ಜಿಡಿಪಿ ಸರಿಸುಮಾರು  US$2,50. ಇನ್ನು ಚೀನಾದ ತಲಾವಾರು ಜಿಡಿಪಿ US$13,000. ಎರಡು ದೇಶದ ತಲಾವಾರು ಜಿಡಿಪಿಯಲ್ಲಿ ಭಾರಿ ವ್ಯತ್ಯಾಸಗಳಿವೆ. ಭಾರತದ ಬೆಳವಣಿಗೆ ಸಾಮರ್ಥ್ಯ ವಿಸ್ತಾರವಾಗಿದೆ. ಜಿಡಿಪಿ ಬೆಳವಣಿಗೆ, ಮನೆಯ ಸಾಲದ ಅನುಪಾತ ಕಡಿಮೆಯಾಗಿದೆ. ಆದರೆ ಚೀನಾ ಬೆಳವಣಿಗೆ ಹಲವು ಸಮಸ್ಯೆ ಎದುರಿಸುತ್ತಿದೆ. ಚೀನಾದಿಂದ ಪ್ರಮುಖ ಕಂಪನಿಗಳು ಭಾರತಕ್ಕೆ ಸ್ಥಳಾಂತರಗೊಳ್ಳುತ್ತಿದೆ.  

ಆರ್ಥಿಕ ಹಿಂಜರಿಕೆಯಿಂದ ಹೊರಗುಳಿದ ಭಾರತಕ್ಕೆ ವಿಶ್ವಬ್ಯಾಂಕ್‌ ಶಹಬ್ಬಾಸ್‌: ಜಿಡಿಪಿ ದರಕ್ಕೂ ಮೆಚ್ಚುಗೆ

ರಚನಾತ್ಮಕ ಬದಲಾವಣೆಯು ಪೋರ್ಟ್‌ಫೋಲಿಯೊ ಹರಿವಿನ ಮೇಲೆ ಪ್ರಭಾವ ಬೀರುತ್ತಿದೆ. ಜಾಗತಿಕ ಹೂಡಿಕೆಯ ಭೂದೃಶ್ಯದಲ್ಲಿ ಭಾರತದ ಸ್ಥಾನಕ್ಕೆ ಪ್ರಯೋಜನವನ್ನು ನೀಡುತ್ತಿದೆ.

ಭಾರತದಲ್ಲಿ ಈಗಾಗಲೇ ಫಾಕ್ಸ್‌ಕಾನ್ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಕರ್ನಾಟಕ, ತಮಿಳುನಾಡು , ಗುಜರಾತ್ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಈಗಾಗಲೇ ಹೂಡಿಕೆ ಮಾಡಿದೆ.  ಐದು ವರ್ಷಗಳ ಅವಧಿಯಲ್ಲಿ $2 ಶತಕೋಟಿ ಡಾಲರ್ ಮೊತ್ತದ ಗಮನಾರ್ಹ ಹೂಡಿಕೆಯ ಯೋಜನೆಗಳನ್ನು ಫಾಕ್ಸ್‌ಕಾನ್ ಅನಾವರಣಗೊಳಿಸಿದೆ. ಭಾರತದಲ್ಲಿ ತನ್ನ ಕಾರ್ಯಪಡೆಯನ್ನು ವಿಸ್ತರಿಸುವ ಉದ್ದೇಶವನ್ನು ಕಂಪನಿಯು ತಿಳಿಸಿದ್ದು, ಪ್ರಸ್ತುತ 40,000 ಉದ್ಯೋಗಿಗಳು ಐಫೋನ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಮುಂದಿನ ಕೆಲವು ವರ್ಷಗಳಲ್ಲಿ ಈ ಉದ್ಯೋಗಿಗಳ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ.

click me!