Radhika Merchant vs Shloka Mehta, ಮುಖೇಶ್ ಅಂಬಾನಿ ಸೊಸೆಯಂದಿರಲ್ಲಿ ಯಾರು ಸಿರಿವಂತೆ ?

Published : Oct 13, 2025, 04:55 PM IST
Radhika Merchant

ಸಾರಾಂಶ

ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿ ಇಬ್ಬರು ಮುದ್ದಾದ ಸೊಸೆಯಂದಿರನ್ನು ಹೊಂದಿದ್ದಾರೆ. ಇಬ್ಬರೂ ಸಖತ್ ಆಕ್ಟಿವ್ ಆಗಿದ್ದು, ಮೀಡಿಯಾ ಕಣ್ಣನ್ನು ಸೆಳೆಯುತ್ತಾರೆ. ಇವರಿಬ್ಬರಲ್ಲಿ ಯಾರ ದುಡಿಮೆ ಹೆಚ್ಚಿದೆ ಗೊತ್ತಾ? 

ಭಾರತದ ಶ್ರೀಮಂತ ಫ್ಯಾಮಿಲಿ ಅಂಬಾನಿ ಕುಟುಂಬದ ಇಬ್ಬರು ಸೊಸೆಯಂದಿರ ಮೇಲೆ ಇಡೀ ವಿಶ್ವದ ಕಣ್ಣಿದೆ. ನೀತಾ ಅಂಬಾನಿ (Nita Ambani) ಜೊತೆ ಅವ್ರ ಇಬ್ಬರು ಸೊಸೆಯಂದಿರಾದ ಶ್ಲೋಕಾ ಮೆಹ್ತಾ (Shloka Mehta,) ಹಾಗೂ ರಾಧಿಕಾ ಮರ್ಚೆಂಟ್ (Radhika Merchant) ಏನೇ ಮಾಡಿದ್ರೂ ಸುದ್ದಿಯಾಗ್ತಾರೆ. ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಮೂರೂ ಮಕ್ಕಳಿಗೆ ಮದುವೆ ಆಗಿದೆ. ಶ್ಲೋಕಾ ಮೆಹ್ತಾ, ಆಕಾಶ್ ಅಂಬಾನಿ ಕೈ ಹಿಡಿದಿದ್ದಾರೆ. ಇನ್ನು ರಾಧಿಕಾ ಮರ್ಚೆಂಟ್ ಅನಂತ್ ಅಂಬಾನಿ ಪತ್ನಿಯಾಗಿದ್ದಾರೆ. ಇಬ್ರೂ ಶ್ರೀಮಂತ ಮನೆತನದಿಂದ ಬಂದವರು. ಉನ್ನತ ಶಿಕ್ಷಣ ಮುಗಿಸಿರುವ ಮುಖೇಶ್ ಅಂಬಾನಿ ಸೊಸೆಯಂದಿರುವ, ದುಬಾರಿ ಬೆಲೆಯ ಡ್ರೆಸ್ ಧರಿಸಿ, ಅತ್ತಿಂದಿತ್ತ ಓಡಾಡೋದಿಲ್ಲ. ಎಷ್ಟೇ ಆಸ್ತಿ, ಹಣವಿದ್ರೂ ದುಡಿಮೆ ಬಿಟ್ಟಿಲ್ಲ. ಶ್ಲೋಕಾ ಮೆಹ್ತಾ ಹಾಗೂ ರಾಧಿಕಾ ತಮ್ಮದೇ ಕೆಲ್ಸ ಮಾಡಿ ಹಣ ಸಂಪಾದನೆ ಮಾಡ್ತಿದ್ದಾರೆ. ಜನರಿಗೆ ಸ್ವಾಭಿಮಾನದ ಪಾಠ ಮಾಡ್ತಿದ್ದಾರೆ.

ಶ್ಲೋಹಾ ಮೆಹ್ತಾ – ರಾಧಿಕಾರಲ್ಲಿ ಯಾರು ಶ್ರೀಮಂತರು? : 

ಶ್ಲೋಕಾ ಮೆಹ್ತಾ, ಆಕಾಶ್ ಅಂಬಾನಿ ಮದುವೆಯಾಗಿ ಆರು ವರ್ಷ ಕಳೆದಿದೆ. ರಾಧಿಕಾ ಮರ್ಚೆಂಟ್ ವರ್ಷದ ಹಿಂದಷ್ಟೆ ಅನಂತ್ ಅಂಬಾನಿ ಮದುವೆಯಾಗಿದ್ದಾರೆ. ನೀತಾ ಅಂಬಾನಿ ಸೊಸೆಯಾಗಿ ರಾಧಿಕಾಗೆ ಕಡಿಮೆ ಎಕ್ಸ್ ಪೀರಿಯನ್ಸ್ ಇದ್ರೂ ಶ್ಲೋಕಾಗಿಂತ ರಾಧಿಕಾ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಮುಖೇಶ್ ಅಂಬಾನಿ ಮನೆ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗ್ತಿರುವ ರಾಧಿಕಾ ಮರ್ಚೆಂಟ್, ನೀತಾ ಅಂಬಾನಿ ಅಚ್ಚುಮೆಚ್ಚಿನ ಸೊಸೆ ಎಂದೇ ಹೇಳಲಾಗುತ್ತೆ. ಶ್ರೀಮಂತೆಯರಾದ್ರೂ ತುಂಬಾ ಸಿಂಪಲ್ ಆಗಿರುವ ಈ ಸೊಸೆಯಂದಿರಲ್ಲಿ ಯಾರು ಶ್ರೀಮಂತರು ಗೊತ್ತಾ?.

ಶುರುವಾಗಿದೆ ಸೀರೆ ಬ್ಯುಸಿನೆಸ್ ಟ್ರೆಂಡ್, ಆಕ್ಟಿಂಗ್ ಜೊತೆ ಸೀರೆ ಮಾರಾಟಕ್ಕಿಳಿದ ನಟಿಯರು

ಮುಖೇಶ್ ಅಂಬಾನಿ ದೊಡ್ಡ ಸೊಸೆ ಶ್ಲೋಕಾ ಮೆಹ್ತಾ, ರಸೆಲ್ ಮೆಹ್ತಾ ಮತ್ತು ಮೋನಾ ಮೆಹ್ತಾ ಅವರ ಪುತ್ರಿ. 2019ರಲ್ಲಿ ಆಕಾಶ್ ಅಂಬಾನಿ ಮದುವೆಯಾಗಿ ಅಂಬಾನಿ ಕುಟುಂಬದ ಸೊಸೆಯಾಗಿದ್ದಾರೆ. ಆಕಾಶ್ ಅಂಬಾನಿ ಮತ್ತು ಶ್ಲೋಕ ಮೆಹ್ತಾ ಅವರಿಗೆ ಪೃಥ್ವಿ ಎಂಬ ಮಗ ಮತ್ತು ವೇದ ಎಂಬ ಮಗಳಿದ್ದಾರೆ. ಧೀರೂಭಾಯಿ ಅಂಬಾನಿ ಇಂಟರ್ನ್ಯಾಷನಲ್ ಶಾಲೆಯಲ್ಲಿ ಅಧ್ಯಯನ ಮಾಡಿದ ಶ್ಲೋಕಾ, ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಮಾನವಶಾಸ್ತ್ರದಲ್ಲಿ ಪದವಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಕಾನೂನು ಪದವಿ ಪಡೆದಿದ್ದಾರೆ. ಬಿಡಿ ಸೋಮಾನಿ ಇಂಟರ್ನ್ಯಾಷನಲ್ ಸ್ಕೂಲ್ನಿಂದ ಇಂಟರ್ನ್ಯಾಷನಲ್ ಬ್ಯಾಕಲೌರಿಯೇಟ್ ಡಿಪ್ಲೊಮಾ ಪಡೆದಿದ್ದಾರೆ. ಪ್ರಸ್ತುತ ರೋಸಿ ಬ್ಲೂ ಇಂಡಿಯಾದಲ್ಲಿ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲಿವುಡ್ಶಾಡಿ.ಕಾಮ್ ಪ್ರಕಾರ, ಶ್ಲೋಕ ಮೆಹ್ತಾ149 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಮಾಲೀಕರು.

ಇನ್ನು ರಾಧಿಕಾ ಮರ್ಚೆಂಟ್, ವೀರೆನ್ ಮರ್ಚೆಂಟ್ ಮತ್ತು ಶೈಲಾ ಮರ್ಚೆಂಟ್ ಪುತ್ರಿ. ತಮ್ಮ ವ್ಯಕ್ತಿತ್ವದಿಂದಲೇ ಎಲ್ಲರ ಗಮನ ಸೆಳೆದಿರುವ ರಾಧಿಕಾ ಮರ್ಚೆಂಟ್ ಮುಂಬೈನ ಕ್ಯಾಥೆಡ್ರಲ್ & ಜಾನ್ ಕಾನನ್ ಸ್ಕೂಲ್ ಮತ್ತು ಎಕೋಲ್ ಮೊಂಡಿಯೇಲ್ ವರ್ಲ್ಡ್ ಸ್ಕೂಲ್ನಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಅವರು ಬಿಡಿ ಸೋಮಾನಿ ಇಂಟರ್ನ್ಯಾಷನಲ್ ಸ್ಕೂಲ್ನಿಂದ ಇಂಟರ್ನ್ಯಾಷನಲ್ ಬ್ಯಾಕಲೌರಿಯೇಟ್ ಡಿಪ್ಲೊಮಾವನ್ನು ಪಡೆದಿದ್ದಾರೆ. ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದು, ಪ್ರಸ್ತುತ ಎನ್ಕೋರ್ ಹೆಲ್ತ್ಕೇರ್ನಲ್ಲಿ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಧಿಕಾ ಮರ್ಚೆಂಟ್, ಆಸ್ತಿ ವಿಚಾರದಲ್ಲಿ ಶ್ಲೋಕಾ ಮೆಹ್ತಾಗಿಂತ ಹಿಂದಿದ್ದಾರೆ. ಅಂಬಾನಿ ಕಿರಿ ಸೊಸೆಗಿಂತ ಹಿರಿ ಸೊಸೆ ಶ್ರೀಮಂತರು. ಮಾಹಿತಿ ಪ್ರಕಾರ, ರಾಧಿಕಾ ಮರ್ಚೆಂಟ್ 10 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

 ಎಲ್‌ಜಿ ಎಲೆಕ್ಟ್ರಾನಿಕ್ಸ್ IPO: ₹30 ಕೋಟಿ ಮೌಲ್ಯದ ಕಂಪನಿಯಿಂದ ₹748 ಕೋಟಿ ಷೇರುಗಳಿಗೆ ಬಿಡ್!

ದೀಪಾವಳಿ ಪಾರ್ಟಿಯಲ್ಲಿ ಮಿಂಚಿದ ರಾಧಿಕಾ ಮರ್ಚೆಂಟ್ : ದೀಪಾವಳಿ ಹತ್ತಿರ ಬರ್ತಿದ್ದು, ಬಾಲಿವುಡ್ ಸೆಲೆಬ್ರಿಟಿಗಳ ಪಾರ್ಟಿ ಶುರುವಾಗಿದೆ. ಮನೀಶ್ ಅವ್ರ ದೀಪಾವಳಿ ಪಾರ್ಟಿಗೆ ಅತ್ತೆ ಜೊತೆ ರಾಧಿಕಾ ಸೀರೆಯುಟ್ಟು ಬಂದಿದ್ದು, ಅವ್ರ ಸ್ಟೈಲ್ ವೈರಲ್ ಆಗಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ
ಒಂದು ರಷ್ಯನ್‌ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್‌, ಯಾವುದರ ಮೌಲ್ಯ ಜಾಸ್ತಿ?