ಸರ್ಕಾರಿ ಬ್ಯಾಂಕ್‌ಗಳಲ್ಲಿನ ಎಫ್‌ಡಿಐ ಮಿತಿ ಶೇ.49ಕ್ಕೇರಿಸಲು ಚಿಂತನೆ

Kannadaprabha News   | Kannada Prabha
Published : Feb 03, 2026, 04:56 AM IST
Bank

ಸಾರಾಂಶ

ಸಾರ್ವಜನಿಕ ವಲಯದ ಬ್ಯಾಂಕುಗಳ ಬಂಡವಾಳ ಮೂಲವನ್ನು ಹೆಚ್ಚಿಸಲು ಹಣಕಾಸು ಸಚಿವಾಲಯವು ಅವುಗಳಲ್ಲಿನ ವಿದೇಶಿ ನೇರ ಬಂಡವಾಳವನ್ನು (ಎಫ್‌ಡಿಐ) ಪ್ರಸ್ತುತ ಶೇ. 20 ರಿಂದ ಶೇ.49ಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ನವದೆಹಲಿ : ಸಾರ್ವಜನಿಕ ವಲಯದ ಬ್ಯಾಂಕುಗಳ ಬಂಡವಾಳ ಮೂಲವನ್ನು ಹೆಚ್ಚಿಸಲು ಹಣಕಾಸು ಸಚಿವಾಲಯವು ಅವುಗಳಲ್ಲಿನ ವಿದೇಶಿ ನೇರ ಬಂಡವಾಳವನ್ನು (ಎಫ್‌ಡಿಐ) ಪ್ರಸ್ತುತ ಶೇ. 20 ರಿಂದ ಶೇ.49ಕ್ಕೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ.

ವಿಷಯ ತಿಳಿಸಿದ ಹಣಕಾಸು ಸೇವೆಗಳ ಕಾರ್ಯದರ್ಶಿ

ಸೋಮವಾರ ಈ ವಿಷಯ ತಿಳಿಸಿದ ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ.ನಾಗರಾಜು, ‘ಎಫ್‌ಡಿಐ ಮಿತಿಯನ್ನು ಶೇ.49 ಕ್ಕೆ ಹೆಚ್ಚಿಸಲು ಅಂತರ ಸಚಿವಾಲಯದ ಸಮಾಲೋಚನೆ ನಡೆಯುತ್ತಿದೆ. ಭಾರತದಂಥ ಬೃಹತ್‌ ದೇಶಕ್ಕೆ 3-4 ದೊಡ್ಡ ಬ್ಯಾಂಕುಗಳು ಬೇಕಾಗುತ್ತವೆ. ಹೀಗಾಗಿ ಬ್ಯಾಂಕುಗಳಿಗೆ ಬಂಡವಾಳ ಅಗತ್ಯವಾಗಿದೆ’ ಎಂದರು.

ಎಫ್‌ಡಿಐ ಮಿತಿ ಕ್ರಮವಾಗಿ ಶೇ.20 ಮತ್ತು ಶೇ.74 ರಷ್ಟಿದೆ.

ಪ್ರಸ್ತುತ ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿ) ಮತ್ತು ಖಾಸಗಿ ವಲಯದ ಬ್ಯಾಂಕುಗಳಲ್ಲಿ ಎಫ್‌ಡಿಐ ಮಿತಿ ಕ್ರಮವಾಗಿ ಶೇ.20 ಮತ್ತು ಶೇ.74 ರಷ್ಟಿದೆ.

ಖಾಸಗಿ ವಲಯದ ಬ್ಯಾಂಕುಗಳಲ್ಲಿ, ಶೇ.49 ರಷ್ಟು ಎಫ್‌ಡಿಐ ಅನ್ನು ಸ್ವಯಂಚಾಲಿತ ಮಾರ್ಗದ ಮೂಲಕ ಅನುಮತಿಸಲಾಗಿದೆ ಮತ್ತು ಶೇ.49ಕ್ಕಿಂತ ಹೆಚ್ಚು ಮತ್ತು ಶೇ.74ರವರೆಗಿನ ಎಫ್‌ಡಿಐಗೆ ಸರ್ಕಾರದ ಅನುಮತಿ ಬೇಕಾಗುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

140 ಕೋಟಿ ಭಾರತೀಯರ ಪರವಾಗಿ ಟ್ರಂಪ್‌ಗೆ ಥ್ಯಾಂಕ್ಸ್ ಹೇಳಿದ ಮೋದಿ; ಭಾರತೀಯ ರಫ್ತು ವಲಯಕ್ಕೆ ಇನ್ಮುಂದೆ 'ಅಚ್ಛೇ ದಿನ್'
Breaking: ಅಮೆರಿಕದ ಜೊತೆಗಿನ ಟ್ರೇಡ್‌ ಡೀಲ್‌ಗೆ ಒಪ್ಪಿದ ಭಾರತ, ಶೇ.25 ರಿಂದ ಶೇ. 18ಕ್ಕೆ ಇಳಿಯಲಿದೆ ತೆರಿಗೆ!