
ಬೆಂಗಳೂರು[ಜು.18] ಸರಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಇದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ(ಇಪಿಎಫ್ಒ)ಅಡಿಯಲ್ಲಿ ಕಡ್ಡಾಯ ಇಪಿಎಫ್ ಮಾಸಿಕ ವೇತನದ ಮಿತಿಯನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗಿದೆ. ವೇತನ ಮಿತಿಯನ್ನು ಹೆಚ್ಚಿಸುವ ಪ್ರಸ್ತಾಪವನ್ನು ಕೆಲವು ತಿದ್ದುಪಡಿಗಳೊಂದಿಗೆ ಹಣಕಾಸು ಸಚಿವಾಲಯಕ್ಕೆ ಮರು ಕಳುಹಿಸಲಾಗಿದ್ದು ಸರಕಾರಿ ನೌಕರರಿಗೆ ಶುಭಸುದ್ದಿ ಇದೆ.
ಹೊಸ ಪ್ರಸ್ತಾಪದ ಅನುಸಾರ ರೂ. 15,000 ದಿಂದ ರೂ. 21,000 ಸಾವಿರಕ್ಕೆ ಕಡ್ಡಾಯ ಕೂಲಿ ಮಿತಿಯನ್ನು ಹೆಚ್ಚಿಸಬೇಕೆಂದು ತಿಳಿಸಿದೆ. ಹಣಕಾಸು ಸಚಿವಾಲಯವು ಈ ತಿದ್ದುಪಡಿಗಳನ್ನು ಒಪ್ಪಿದ್ದು, ಪ್ರಸ್ತಾಪವನ್ನು ಶೀಘ್ರದಲ್ಲೇ ಅಂಗೀಕರಿಸಬಹುದು.
ಪಿಎಫ್ ಖಾತೆ ಹೊಂದಿದವರಿಗೆ ಶುಭ ಸುದ್ದಿ
ಸಂಘಟಿತ ವಲಯ ನೌಕರರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಿಸಲು ಹಿಂದೆ ಚರ್ಚಿಸಲಾಗಿದೆ. ಆದರೆ ಹಣಕಾಸು ಸಚಿವಾಲಯ ಕೆಲವು ಕಾರಣಗಳಿಂದಾಗಿ ಅದನ್ನು ನಿರಾಕರಿಸಿದೆ.ಪಿಎಫ್, ಪಿಂಚಣಿ ಪ್ರಯೋಜನ ಕಡ್ಡಾಯ ವೇತನದ ಮಿತಿ (ನಿರ್ಧರಿಸಿದ ಮಿತಿ) ಅಡಿಯಲ್ಲಿ ಬರುವ ನೌಕರರು ಇಪಿಎಫ್ಓ ಅಡಿಯಲ್ಲಿ ಕಡ್ಡಾಯವಾಗಿ ಒಳಪಡಲಿದ್ದು, ಪಿಎಫ್ ಮತ್ತು ಪಿಂಚಣಿ ಎರಡನ್ನು ಆನಂದಿಸಲಿದ್ದಾರೆ. ನಿರ್ಧರಿಸಿದ ಮಿತಿಗಿಂತ ಹೆಚ್ಚು ಹಣವನ್ನು ಗಳಿಸುವವರು ಇದನ್ನು ಬೇಕಾದರೆ ಪಡೆದುಕೊಳ್ಳಬಹುದು. ಅಂದರೆ ಅವರಿಗೆ ಆಯ್ಕೆಗೆ ಅವಕಾಶ ನೀಡಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.