
ನವದೆಹಲಿ[ಜು.17] ದೇಶದ ಅತೀ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೋಟು ನಿಷೇಧದ ಸಮಯದಲ್ಲಿ ಓವರ್ ಟೈಮ್ ಕೆಲಸ ಮಾಡಿ ಹೆಚ್ಚುವರಿಯಾಗಿ ಪಡೆದಿದ್ದ ಸಂಬಳವನ್ನು ಹಿಂದಿರುಗಿಸುವಂತೆ ನೋಟು ನಿಷೇಧಕ್ಕೂ ಮುನ್ನ ವಿಲೀನಗೊಂಡಿದ್ದ ಬ್ಯಾಂಕ್ ಗಳ 70 ಸಾವಿರ ಉದ್ಯೋಗಿಗಳಿಗೆ ಸೂಚಿಸಿದೆ.
2016ರ ನವೆಂಬರ್ 14ರಿಂದ 2016ರ ಡಿಸೆಂಬರ್ 30ರವರೆಗೆ ಅಧಿಕ ಕೆಲಸ ಮಾಡಿದ್ದಕ್ಕೆ ಉದ್ಯೋಗಿಗಳಿಗೆ ಹೆಚ್ಚುವರಿಯಾಗಿ ಸಂಬಳ ನೀಡಲಾಗಿತ್ತು. ಉದ್ಯೋಗಿಗಳ ಪೋಸ್ಟ್ ಗೆ ಅನುಗುಣವಾಗಿ 15 ಸಾವಿರದಿಂದ 30 ಸಾವಿರ ರುಪಾಯಿವರೆಗೂ ಹೆಚ್ಚುವರಿಯಾಗಿ ಸಂಬಳ ನೀಡಲಾಗಿದ್ದು ಅದನ್ನು ಹಿಂದಕ್ಕೆ ಪಡೆಯಬೇಕು ಎಂದು ಹೇಳಲಾಗಿದೆ.
ನೋಟು ನಿಷೇಧಕ್ಕೂ ಮುನ್ನ 2017ರ ಏಪ್ರಿಲ್ 1ರಂದು ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಟ್ರವನ್ಕೋರೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ ಬ್ಯಾಂಕ್ ಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜತೆ ವಿಲೀನವಾಗಿದ್ದವು.ಆದರೆ ಸಿಬ್ಬಂದಿಯಲ್ಲಿ ಎರಡು ಪ್ರಕಾರ ಮಾಡಿಕೊಂಡಿರುವ ಎಸ್ ಬಿಐ ಮೂಲ ಸಿಬ್ಬಂದಿ ಮಾತ್ರ ಹೆಚ್ಚುವರಿ ವೇತನಕ್ಕೆ ಅರ್ಹರಾಗುತ್ತಾರೆ ಎಂದು ಹೇಳಿರುವುದು ವಿಲೀನಗೊಂಡ ಬ್ಯಾಂಕ್ ಸಿಬ್ಬಂದಿ ಆಕ್ರೋಶಕ್ಕೆ ಕಾರಣವಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.