ಸೆಮಿಕಂಡಕ್ಟರ್‌ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

By Girish Goudar  |  First Published Apr 30, 2022, 6:55 AM IST

*   ಅರೆವಾಹಕ ಉದ್ಯಮದಲ್ಲಿ ಭಾರತ ಮುಂಚೂಣಿ ರಾಷ್ಟ್ರವಾಗಲಿದೆ
*  ಬೆಂಗಳೂರಲ್ಲಿ ಸೆಮಿಕಾನ್‌ ಸಮ್ಮೇಳನ ಆರಂಭ
*  ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಸೆಮಿಕಂಡಕ್ಟರ್‌ ಉದ್ಯಮಕ್ಕೂ ಸಿಕ್ಕಿದ ಆದ್ಯತೆ
 


ಬೆಂಗಳೂರು(ಏ.30):  ಸೆಮಿ ಕಂಡಕ್ಟರ್‌ (Semi Conductor Industry) ಉತ್ಪಾದನಾ ವಲಯದಲ್ಲಿ ಭಾರತವು ಭವಿಷ್ಯದಲ್ಲಿ ಮುಂಚೂಣಿ ರಾಷ್ಟ್ರವಾಗಿ ಬೆಳೆಯಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ದಶಕಗಳ ದೂರದೃಷ್ಟಿಇಟ್ಟುಕೊಂಡು ಸೆಮಿಕಂಡಕ್ಟರ್‌ ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ, ಸಂವಹನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌(Rajeev Chandrasekhar) ತಿಳಿಸಿದ್ದಾರೆ.

ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ, ಸಂವಹನ ಇಲಾಖೆಯು ಅರೆ ವಾಹಕ ಉದ್ಯಮ ವಲಯ ಉತ್ತೇಜಿಸಲು ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿರುವ ಮೂರು ದಿನಗಳ ದೇಶದ ಮೊದಲ ‘ಸೆಮಿಕಾನ್‌ ಇಂಡಿಯಾ 2022’(Semicon India 2022) ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಂಡು ಅವರು ಮಾತನಾಡಿದರು.

Tap to resize

Latest Videos

Semicon India 2022: ಭಾರತ ಸೆಮಿ ಕಂಡಕ್ಟರ್‌ ಹಬ್‌: ಮೋದಿ ಗುರಿ

ಸೆಮಿಕಂಡಕ್ಟರ್‌ ಉದ್ಯಮ ಅಭಿವೃದ್ಧಿಗೆ ಭಾರತ ಮಹತ್ವದ ಪಾತ್ರ ವಹಿಸುತ್ತಿದೆ. ಭವಿಷ್ಯದಲ್ಲಿ ಈ ಕ್ಷೇತ್ರದ ಮುಂಚೂಣಿ ರಾಷ್ಟ್ರವಾಗಲಿದೆ. ಹಾಗಾಗಿ ಈ ಕ್ಷೇತ್ರದ ಎಲ್ಲ ಉದ್ಯಮದಾರರು, ಸಂಶೋಧಕರು, ಶಿಕ್ಷಣ ಸಂಸ್ಥೆಗಳನ್ನು ಒಟ್ಟುಗೂಡಿಸಿ ಈ ಕ್ಷೇತ್ರದ ಬೆಳವಣಿಗೆಗೆ ಅಗತ್ಯ ಸಲಹೆ, ಸೂಚನೆಗಳನ್ನು ಪಡೆದು ಸರ್ಕಾರದಿಂದ ಎಲ್ಲ ರೀತಿಯ ಪ್ರೋತ್ಸಾಹ, ಸಹಕಾರ ನೀಡುವುದು ‘ಸೆಮಿಕಂಡಕ್ಟರ್‌ ಇಂಡಿಯಾ 2022’ರ ಉದ್ದೇಶವಾಗಿದೆ ಎಂದರು.

ರಾಜಕೀಯ ದೂರದೃಷ್ಟಿ ಕೊರತೆಯಿಂದ ಈ ಕ್ಷೇತ್ರಕ್ಕೆ ಸರಿಯಾಗಿ ಆದ್ಯತೆ ಸಿಕ್ಕಿರಲಿಲ್ಲ. ಪ್ರಧಾನಿ ಮೋದಿ(Narendra Modi) ಅವರ ನೇತೃತ್ವದ ಸರ್ಕಾರ ಬಂದ ಮೇಲೆ ಡಿಜಿಟಲ್‌ ಇಂಡಿಯಾ(Digital India) ಮಾದರಿಯಲ್ಲಿ ಸೆಮಿಕಂಡಕ್ಟರ್‌ ಉದ್ಯಮಕ್ಕೂ ಆದ್ಯತೆ ಸಿಕ್ಕಿತು. ಈ ಕ್ಷೇತ್ರದಲ್ಲಿ ಹಿಂದೆ 6 ಲಕ್ಷ ಕೋಟಿ ಮೊತ್ತದ ವ್ಯವಹಾರ ನಡೆಯುತ್ತಿತ್ತು. ಆದರೆ, ಇಂದು 25 ಲಕ್ಷ ಕೋಟಿಗೆ ಏರಿಕೆಯಾಗಿದೆ. ಅಂದರೆ ಐದು ಪಟ್ಟು ಹೆಚ್ಚಳವಾಗಿದೆ. ಹಾಗಾಗಿ ಈ ಕ್ಷೇತ್ರವನ್ನು ಮ್ಯಾರಥಾನ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.

Elon Musk Twitter ಮಾಲೀಕ ಬದಲಾದರೂ ನಿಯಮದಲ್ಲಿ ಬದಲಾವಣೆ ಇಲ್ಲ, ಎಲಾನ್ ಮಸ್ಕ್‌ ಟ್ವಿಟರ್ ಖರೀದಿಗೆ ಭಾರತದ ಸ್ಪಷ್ಟನೆ!

ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ, ಸಂವಹನ ಸಚಿವ ಅಶ್ವಿನಿ ವೈಷ್ಣವ್‌ ಮಾತನಾಡಿ, ಅರೆವಾಹಕ ಉದ್ಯಮದ ನಿರಂತರ ಅಭಿವೃದ್ಧಿ, ಬಂಡವಾಳ ಹೂಡಿಕೆಗೆ ಅಗತ್ಯವಿರುವ ಉದ್ಯಮ, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಶೋಧನೆಗಳ ನಡುವಿನ ಪ್ರಾಮಾಣಿಕ ಪಾಲುದಾರಿಕೆಗೆ ಸರ್ಕಾರ ಸಿದ್ಧವಿದೆ. ಮುಂದಿನ 10 ವರ್ಷಗಳಲ್ಲಿ 85,000 ಸೆಮಿಕಂಡಕ್ಟರ್‌ ವೃತ್ತಿಪರಿಗೆ ಅವಕಾಶ ದೊರಕಿಸುವ ಗುರಿ ಇದೆ. ಈ ನಿಟ್ಟಿನಲ್ಲಿ ಸುಮಾರು 100 ಶೈಕ್ಷಣಿಕ ಸಂಸ್ಥೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು 5,000 ವೃತ್ತಿಪರರು, 30,000 ಎಂಜಿನಿಯರ್‌ಗಳು ಮತ್ತು 50,000 ಕೆಳಹಂತದಲ್ಲಿ ವೃತ್ತಿಪರರನ್ನು ಹುಟ್ಟುಹಾಕುವ ಕಾರ್ಯದಲ್ಲಿ ತೊಡಗಿವೆ ಎಂದರು.

"

click me!