Reliance IPO:ಭಾರತದ ಅತೀದೊಡ್ಡ ಐಪಿಒಗೆ ಮುಖೇಶ್ ಅಂಬಾನಿ ಸಿದ್ಧತೆ; ಎಲ್ಐಸಿಯನ್ನೂ ಹಿಂದಿಕ್ಕಲಿದೆಯಾ ರಿಲಾಯನ್ಸ್ ಐಪಿಒ?

By Suvarna NewsFirst Published Apr 29, 2022, 11:11 PM IST
Highlights

*ಜಿಯೋ, ರಿಲಾಯನ್ಸ್ ರಿಟೇಲ್ ಐಪಿಒಗಳನ್ನು ನಡೆಸಲು ಪ್ಲ್ಯಾನ್
*2 ಪ್ರತ್ಯೇಕ ಐಪಿಒ ಮೂಲಕ ತಲಾ 50,000 ಕೋಟಿ ರೂ.ನಿಂದ 75,000 ಕೋಟಿ ರೂ. ಸಂಗ್ರಹಿಸುವ ಗುರಿ 
*ಈ ವರ್ಷದ ಡಿಸೆಂಬರ್ ನಲ್ಲಿ ರಿಲಾಯನ್ಸ್ ಐಪಿಒ ನಡೆಯುವ ಸಾಧ್ಯತೆ
 

ನವದೆಹಲಿ (ಏ.29): ರಿಲಾಯನ್ಸ್ ಜಿಯೋ ಹಾಗೂ ರಿಲಾಯನ್ಸ್ ರಿಟೇಲ್ ವೆಂಚರ್ಸ್ ಗಳ  ಐಪಿಒ (IPOs) ನಡೆಸಲು ಮುಖೇಶ್ ಅಂಬಾನಿ ಸಿದ್ಧತೆ ನಡೆಸುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಕಂಪೆನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (AGM) ಈ ಬಗ್ಗೆ ರಿಲಾಯನ್ಸ್ ಇಂಡಸ್ಟ್ರೀಸ್ ಲಿ. (RIL) ಮುಖ್ಯಸ್ಥರು ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ. 

ಭಾರತದ ಅತೀದೊಡ್ಡ ಐಪಿಒ
ರಿಲಾಯನ್ಸ್ ಜಿಯೋ ಫ್ಲ್ಯಾಟ್ ಫಾರ್ಮ್ (RJPL) ಹಾಗೂ ರಿಲಾಯನ್ಸ್ ರಿಟೇಲ್ ವೆಂಚರ್ಸ್ ಲಿ.ಗೆ (RRVL) ಪ್ರತ್ಯೇಕ ಐಪಿಒ ನಡೆಸಲು ಮುಖೇಶ್ ಅಂಬಾನಿ ದೊಡ್ಡ ಯೋಜನೆ ರೂಪಿಸಿದ್ದಾರೆ ಎಂದು ಹೇಳಲಾಗಿದೆ. ಉಭಯ ಕಂಪೆನಿಗಳು ಐಪಿಒ ಮೂಲಕ ತಲಾ  50,000 ಕೋಟಿ ರೂ.ನಿಂದ 75,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿವೆ ಎಂದು ಹಿಂದೂ ಬ್ಯುಸಿನೆಸ್  ಲೈನ್ ವರದಿ ಹೇಳಿದೆ. ರಿಲಾಯನ್ಸ್ ಸಂಸ್ಥೆಯ ಈ ಗುರಿಗಳು ಎರಡೂ ಐಪಿಒಗಳನ್ನು ಭಾರತದ ಅತೀದೊಡ್ಡ ಐಪಿಒಗಳನ್ನಾಗಿ ನಿರೂಪಿಸಲಿವೆ. 

Latest Videos

LIC IPO:ಮೇ 4-9ರ ತನಕ ಎಲ್ಐಸಿ ಐಪಿಒ; ಪ್ರತಿ ಷೇರಿನ ಬೆಲೆ ಎಷ್ಟು ಗೊತ್ತಾ? ಪಾಲಿಸಿದಾರರಿಗೆ ಡಿಸ್ಕೌಂಟ್ ಆಫರ್!

ಕಳೆದ ವರ್ಷ ನಡೆದ 18,300 ಕೋಟಿ ರೂ. ಗಾತ್ರದ ಪೇಟಿಎಂ (Paytm) ಐಪಿಒ ಈ ತನಕದ ಭಾರತದ ಅತೀದೊಡ್ಡ ಇನಿಷಿಯಲ್ ಪಬ್ಲಿಕ್ ಆಫರಿಂಗ್ ಆಗಿದೆ. ಇದರ ನಂತರದ ಸ್ಥಾನಗಳಲ್ಲಿ 2010ರಲ್ಲಿ ನಡೆದ 15,500 ಕೋಟಿ ರೂ. ಮೊತ್ತದ ಕೋಲಾ ಇಂಡಿಯಾ ಹಾಗೂ 2008ರಲ್ಲಿ 11,700 ಕೋಟಿ ರೂ.ಗೆ ನಡೆದ ರಿಲಾಯನ್ಸ್ ಪವರ್ ಐಪಿಒಗಳಿವೆ. ಈ ನಡುವೆ ಭಾರತೀಯ ಜೀವ ವಿಮಾ ನಿಗಮ ಪೇಟಿಎಂ ಅನ್ನು ಹಿಂದಿಕ್ಕೆ ದೇಶದ ಅತೀದೊಡ್ಡ ಐಪಿಒ ನಡೆಸಲು ಅಂತಿಮ ಸಿದ್ಧತೆಯಲ್ಲಿ ತೊಡಗಿದೆ. ಎಲ್ಐಸಿ ಐಪಿಒ (IPO) ಮೇ 4ರಂದು ಪ್ರಾರಂಭವಾಗಿ ಮೇ 9ರಂದು ಮುಕ್ತಾಯವಾಗಲಿದ್ದು, ಸರ್ಕಾರ ಶೇ.3.5 ಷೇರುಗಳನ್ನು ಮಾರಾಟ ಮಾಡಿ ಸುಮಾರು 21,000 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಿದೆ. ಎಲ್ ಐಸಿ ಐಪಿಒ ಗಾತ್ರವನ್ನು 21,000 ಕೋಟಿ ರೂ.ಗೆ ತಗ್ಗಿಸಿದ ಮೇಲೂ ದೇಶದ ಅತೀದೊಡ್ಡ ಐಪಿಒ ಆಗಲಿದೆ.

ಎಲ್ಐಸಿ ಐಪಿಒ ಮೇ 4 ಕ್ಕೆ ಪ್ರಾರಂಭವಾಗಿ ಮೇ 9ರ ತನಕ ನಡೆಯಲಿದೆ. ಆಂಕರ್ ಹೂಡಿಕೆದಾರರಿಗೆ (anchor investor) ಮೇ 2ಕ್ಕೆ ಪ್ರಾರಂಭವಾಗಲಿದೆ. ಷೇರುಗಳನ್ನು ಮೇ 16ಕ್ಕೆ ಡಿಮ್ಯಾಟ್ (Demate) ಖಾತೆಗಳಿಗೆ ಹಂಚಿಕೆ ಮಾಡಲಾಗುತ್ತದೆ. ಮೇ 17ರಂದು  ವಿನಿಮಯ ಕೇಂದ್ರಗಳಲ್ಲಿ ಷೇರುಗಳನ್ನು ಲಿಸ್ಟ್ ಮಾಡಲಾಗುವುದು. 
ಎಲ್ಐಸಿ ಐಪಿಒನಲ್ಲಿ ಪ್ರತಿ ಷೇರಿನ ಬೆಲೆಯನ್ನು  902ರೂ.-949ರೂ. ನಿಗದಿಪಡಿಸಲಾಗಿದೆ. ಎಲ್ ಐಸಿ ಪಾಲಿಸಿದಾರರಿಗೆ (Policyholders) ಪ್ರತಿ ಷೇರಿನ ಮೇಲೆ  60ರೂ. ಡಿಸ್ಕೌಂಟ್ (Discount) ನೀಡಲಾಗಿದೆ. ಇನ್ನು ಎಲ್ಐಸಿ ಸಿಬ್ಬಂದಿ (employees) ಹಾಗೂ ರಿಟೇಲ್ ಹೂಡಿಕೆದಾರರಿಗೆ (Retail Investors) ಪ್ರತಿ ಷೇರಿನ ಮೇಲೆ 45ರೂ. ಡಿಸ್ಕೌಂಟ್ ನೀಡಲಾಗಿದೆ. 

LIC IPO ದಿನಾಂಕ ಘೋಷಣೆ ಆಗುತ್ತಿದ್ದಂತೆ GMP ಭರ್ಜರಿ ಏರಿಕೆ!

ರಿಲಾಯನ್ಸ್ ಜಿಯೋ ಐಪಿಒ
ರಿಲಾಯನ್ಸ್ ಜಿಯೋ ಅಮೆರಿಕದ ಸ್ಟಾಕ್ ಮಾರ್ಕೆಟ್ ನಸ್ದಕ್ ನಲ್ಲಿ (Nasdaq) ಕೂಡ ಲಿಸ್ಟ್ ಆಗೋ ಸಾಧ್ಯತೆಯಿದೆ. ಟೆಕ್ ಸಂಸ್ಥೆಗಳಿಗೆ ನಸ್ದಕ್ ಜಗತ್ತಿನ ಅತೀದೊಡ್ಡ ಷೇರು ಮಾರುಕಟ್ಟೆ ಆಗಿದೆ. ರಿಲಾಯನ್ಸ್ ರಿಟೇಲ್ ವೆಂಚರ್ಸ್ ಲಿ.ರಿಲಾಯನ್ಸ್ ರಿಟೇಲ್ ವೆಂಚರ್ಸ್ ಲಿ.ಷೇರುಗಳು ಮಾರುಕಟ್ಟೆಗೆ ಪ್ರವೇಶಿಸಿದ ಬಳಿಕ ರಿಲಾಯನ್ಸ್ ಜಿಯೋ ಐಪಿಒ ನಡೆಯುವ ಸಾಧ್ಯತೆಯಿದೆ. 2022ರ ಡಿಸೆಂಬರ್ ನಲ್ಲಿ ಈ ಐಪಿಒ ನಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗಿದೆ. 

click me!