ಈ ಯೋಜನೆಯಲ್ಲಿ ಹೂಡಿಕೆ ಮಾಡಿ ತಿಂಗಳಿಗೆ ಪಡೆಯಿರಿ 61,000 ರೂ ತೆರಿಗೆ ರಹಿತ ಪಿಂಚಣಿ!

By Chethan Kumar  |  First Published Nov 6, 2024, 5:01 PM IST

ನಿವೃತ್ತಿ ವೇಳೆಗೆ ತಿಂಗಳ ಆದಾಯಕ್ಕೆ ಹಲವು ಮಾರ್ಗಗಳಿವೆ. ಈ ಪೈಕಿ ಪಿಪಿಎಫ್ ಯೋಜನೆಯಲ್ಲಿ ಸುದೀರ್ಘ ಕಾಲಕ್ಕೆ ಹೂಡಿಕೆ ಮಾಡಿದರೆ ನಿವೃತ್ತಿ ವೇಳೆ ಪ್ರತಿ ತಿಂಗಳು 61,000 ರೂಪಾಯಿ ರಿಟರ್ನ್ಸ್ ಪಡೆಯಬಹುದು. ಇದಕ್ಕೆ ಟ್ಯಾಕ್ಸ್ ಕಟ್ಟಬೇಕಿಲ್ಲ.


ನವದೆಹಲಿ(ನ.06)  ಉದ್ಯೋಗದಲ್ಲಿರುವಾಗ ಅಥವಾ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರೆ ಭವಿಷ್ಯದ ಬಗ್ಗೆ, ನಿವೃತ್ತಿ ವೇಳೆ ಆದಾಯಕ್ಕೆ ಮಾರ್ಗ ಹುಡುಕಿಕೊಳ್ಳುವುದು ಅತ್ಯವಶ್ಯಕ. ಸದ್ಯದ ಆರೋಗ್ಯ ಪರಿಸ್ಥಿತಿ, ಜೀವನ ಪದ್ಧತಿ, ಆಹಾರಗಳ ಕಾರಣದಿಂದ ಹೆಚ್ಚು ದಿನಗಳ ಕಾಲ ಕೆಲಸ ಮಾಡುವುದು, ಅಥವಾ ಉದ್ಯಮದಲ್ಲಿ ಸಕ್ರೀಯವಾಗಿರುವುದು ಕಷ್ಟ. ಹೀಗಾಗಿ  ನಿವೃತ್ತಿ ಪ್ಲಾನ್ ಬೇಕೆ ಬೇಕು. ಹಲವು ಪ್ಲಾನ್ ಪೈಕಿ ಪಿಪಿಎಫ್(ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಉತ್ತಮ ಆಯ್ಕೆಯಾಗಿದೆ. ಸುದೀರ್ಘ ಕಾಲಕ್ಕೆ ಹೂಡಿಕೆ ಮಾಡಿದರೆ ನಿವೃತ್ತಿ ವೇಳೆ ಪ್ರತಿ ತಿಂಗಳು 61,000ರೂಪಾಯಿ ಪಿಂಚಣಿ ಪಡೆಯಲು ಸಾಧ್ಯವಿದೆ. ಇದು ಸಂಪೂರ್ಣ ಟ್ಯಾಕ್ಸ್ ಫ್ರಿ ಮೊತ್ತವಾಗಿದೆ.

ಇದು ಸರ್ಕಾರ ಬೆಂಬಲಿತ ಯೋಜನೆಯಾಗಿದೆ. ಹೀಗಾಗಿ ಇಲ್ಲಿ ಹೂಡಿಕೆಯಲ್ಲಿ ಮಾರುಕಟ್ಟೆ ಏರಿಳಿತಗಳ ಆತಂಕವಿಲ್ಲ. ಜೊತೆಗೆ ತೆರಿಗೆ ವಿನಾಯಿತಿ ಸೌಲಭ್ಯಗಳು ಈ ಯೋಜನೆಯಲ್ಲಿ ಸಿಗಲಿದೆ. ಇದು ಸುದೀರ್ಘ ಹೂಡಿಕೆ ಯೋಜನೆಯಾಗಿದ್ದು ಸದ್ಯ ಹೂಡಿಕೆ ಮೇಲೆ 7.1 ಶೇಕಡಾ ಬಡ್ಡಿ ನೀಡಲಾಗುತ್ತದೆ. ಬಡ್ಡಿಯಲ್ಲಿ ಆರ್ಥಿಕ ವರ್ಷದಿಂದ ವರ್ಷಕ್ಕೆ ಕೆಲ ವ್ಯತ್ಯಾಸಗಳಾಗಲಿದೆ. ಪ್ರತಿ ವರ್ಷ ಗರಿಷ್ಠ 1,50,000 ಲಕ್ಷ ರೂಪಾಯಿ ಇಲ್ಲಿ ಹೂಡಿಕೆ ಮಾಡಲು ಸಾಧ್ಯವಿದೆ. ಈ ಮೂಲಕ ನಿವೃತ್ತಿ ವೇಳಗೆ ಉತ್ತಮ ಮೊತ್ತ ಕೈಸೇರಲಿದೆ. ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ 61,000 ರೂಪಾಯಿ ಸಿಗಲಿದೆ.

Latest Videos

ಟಾಟಾ ಪಪರ್ ಸೇರಿ ಈ 5 ಷೇರುಗಳ ಮೇಲೆ ಹೂಡಿಕೆ ಮಾಡಿದರೆ ಭರ್ಜರಿ ಆದಾಯ!

ಪಿಪಿಎಫ್ ಹೂಡಿಕೆಯಲ್ಲಿ ಶಿಸ್ತು ಮುಖ್ಯ. ಜೊತೆಗೆ ತಾಳ್ಮೆಯೂ ಅಗತ್ಯ. ಸುದೀರ್ಘ ದಿನಗಳ ಕಾಲ ಹೂಡಿಕೆ ಮಾಡಿದರೆ ನಿವೃತ್ತಿ ಕಾಲದಲ್ಲಿ ಯಾವುದೇ ಚಿಂತೆ ಇಲ್ಲದೆ ಸಾಗಬಹುದು. ಉದಾಹರಣೆಗೆ 35 ವರ್ಷಕ್ಕೆ ಪಿಪಿಎಫ್ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ ನಿವೃತ್ತಿ ವೇಳೆ ಚಿಂತೆ ದೂರವಾಗಲಿದೆ. ಪ್ರತಿ ವರ್ಷ 1,50,000 ರೂಪಾಯಿ ಹೂಡಿಕೆ ಮಾಡಿದರೆ ಮುಂದಿನ 15 ವರ್ಷದಲ್ಲಿ ಹೂಡಿಕೆ ಹಾಗೂ ಬಡ್ಡಿ ಒಟ್ಟು ಮೊತ್ತ 40,68,209 ರೂಪಾಯಿ ಆಗಲಿದೆ. ಇದಕ್ಕೆ ಸದ್ಯ ಇರುವ ಶೇಕಡಾ 7.1ರ ಬಡ್ಡಿದರದಂತೆ ಲೆಕ್ಕಾಚಾರ ಮಾಡಲಾಗಿದೆ. ಇದರಲ್ಲಿ 22,50,000 ರೂಪಾಯಿ ಹೂಡಿಕೆಯಾಗಿದ್ದರೆ, 18,18,209 ರೂಪಾಯಿ ಬಡ್ಡಿ.

50ನೇ ವಯಸ್ಸಿಗೆ 40,68,209 ರೂಪಾಯಿ ಮೊತ್ತ ಪಿಪಿಎಫ್‌ನಲ್ಲಿ ಹೂಡಿಕೆಯಾಗಲಿದೆ. ಈ ಯೋಜನೆಯನ್ನು ಮುಂದಿನ 5 ವರ್ಷಕ್ಕೆ ವಿಸ್ತರಿಸಬೇಕು. ಆಧರೆ ಯಾವುದೇ ಮೊತ್ತ ಪಾವತಿಸುವ ಅಗತ್ಯವಿಲ್ಲ.60 ವರ್ಷದ ವರೆಗೆ ವಿಸ್ತರಿಸಿದರೆ ಪಿಪಿಎಫ್ ಮೊತ್ತಕ್ಕೆ ಸಿಗುವ ಬಡ್ಡಿ ಸೇರಿದಂತೆ ಒಟ್ಟು ಮೊತ್ತ 1 ಕೋಟಿ ರೂಪಾಯಿ ದಾಟಲಿದೆ.

ನಿವೃತ್ತಿ ವೇಳೆಗೆ ನಿಮ್ಮ ಪಿಪಿಎಫ್ ಮೊತ್ತಕ್ಕೆ ವಾರ್ಷಿಕವಾಗಿ ಸಿಗುವ ಬಡ್ಡಿ 7,31,869 ರೂಪಾಯಿ. ಇದನ್ನು 12 ತಿಂಗಳಿಗೆ ಲೆಕ್ಕ ಹಾಕಿದರೆ ಪ್ರತಿ ತಿಂಗಳು 60,989 ರೂಪಾಯಿ ಸಿಗಲಿದೆ. ಇದು ತೆರಿಗೆ ರಹಿತ ಹಣವಾಗಿದೆ. ಮತ್ತೊಂದು ವಿಶೇಷ ಅಂದರೆ ನಿಮ್ಮ ಹೂಡಿಕೆ ಮೊತ್ತ ಹಾಗೇ ಉಳಿಯಲಿದೆ. ಕೇವಲ ಬಡ್ಡಿ ಹಣ ಮಾತ್ರ ನಿಮ್ಮ ತಿಂಗಳ ಪಿಂಚಣಿ ರೂಪದಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ. ವಾರ್ಷಿಕ ಬಡ್ಡಿಯನ್ನು ತಿಂಗಳಿಗೆ ಹಂಚುವ ಈ ಲೆಕ್ಕಾಚಾರ ನಿವೃತ್ತಿ ವೇಳೆ ಪಿಂಚಣಿ ರೂಪದಲ್ಲಿ ಕೈಸೇರಲಿದೆ.

ಮ್ಯೂಚ್ಯುಯಲ್ ಫಂಡ್ಸ್‌ನಲ್ಲಿ ಮಹಿಳೆಯರು ಹೂಡಿಕೆ ಮಾಡುವುದು ಯಾಕೆ ಮುಖ್ಯ? ಇದೆ ಹಲವು ಲಾಭ!

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಡ್ಡಿದರ ಕಾಲಕ್ಕೆ ತಕ್ಕಂತೆ ಬದಲಾಗುತ್ತದೆ. ಈ ವೇಳೆ ಒಟ್ಟು ಬಡ್ಡಿ ಮೊತ್ತ, ನಿವೃತ್ತಿ ಬಳಿಕ ತಿಂಗಳಿಗೆ ಪಡೆಯುವ ಮೊತ್ತದಲ್ಲಿ ಕೆಲ ವ್ಯತ್ಯಾಸಗಳಾಗುವ ಸಾಧ್ಯತೆ ಇದೆ. ಬಡ್ಡಿ ದರ ಕಡಿಮೆಯಾದರೆ ಮೊತ್ತದಲ್ಲಿ ಕೊಂಚ ಏರುಪೇರಾಗುವ ಸಾಧ್ಯತೆ ಇದೆ. ಇದು ಸುದೀರ್ಘ ದಿನಗಳ ಹೂಡಿಕೆ ಯೋಜನೆಯಾಗಿದೆ. ಹೀಗಾಗಿ ತಾಳ್ಮೆ ಕೂಡ ಅತ್ಯಗತ್ಯ.

click me!