ಒರಿಜಿನಲ್‌ ಚಾಯ್ಸ್‌ ವಿಸ್ಕಿ ಮಾಲೀಕರಿಂದ ಕರ್ನಾಟಕದಲ್ಲಿ 600 ಕೋಟಿ ವೆಚ್ಚದ ಹೊಸ ಪ್ಲ್ಯಾಂಟ್‌!

By Santosh Naik  |  First Published Nov 6, 2024, 4:39 PM IST

ಕಂಪನಿಯು 2025 ರ ಆರ್ಥಿಕ ವರ್ಷದ ಅಂತ್ಯದ ವೇಳೆಗೆ 150 ಸಿಂಗಲ್ ಮಾಲ್ಟ್ ಕೇಸ್‌ ಮತ್ತು ಎಲ್ಲಾ ಇತರ ಬ್ರಾಂಡ್‌ಗಳ 2.3 ಕೋಟಿ ಕೇಸ್‌ಗಳನ್ನು ಒಟ್ಟಾಗಿ ಗುರಿ ಇರಿಸಿಕೊಂಡಿದೆ.


ಬೆಂಗಳೂರು (ನ.6): ರಾಜಧಾನಿ ಬೆಂಗಳೂರು ಮೂಲದ ಜಾನ್‌ ಡಿಸ್ಟಿಲ್ಲರೀಸ್‌ ಲಿಮಿಟೆಡದ್ (ಜೆಡಿಎಲ್‌) ಕರ್ನಾಟಕದಲ್ಲಿ ಮತ್ತೊಂದು ಹೊಸ ಪ್ಲ್ಯಾಂಟ್‌ ತೆರೆಯಲು ಸಿದ್ಧವಾಗಿದೆ. 30 ಎಕರೆಯ ದೊಡ್ಡ ಪ್ರದೇಶದಲ್ಲಿ ಹೊಸ ಪ್ಲ್ಯಾಂಟ್‌ ನಿರ್ಮಾಣ ಮಾಡುವುದಾಗಿ ತಿಳಿಸಿದ್ದು, ಇದಕ್ಕಾಗಿ 600 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿಸಿದೆ. 2025ರ ಹಣಕಾಸು ವರ್ಷದ ಅಂತ್ಯದ ವೇಳೆ ಕಂಪನಿ 150 ಕೇಸ್‌ಗಳ ಸಿಂಗಲ್‌ ಮಾಲ್ಟ್‌ ಹಾಗೂ 2.3 ಕೋಟಿ ಕೇಸ್‌ಗಳ ಎಲ್ಲಾ ಇತರ ಬ್ರ್ಯಾಂಡ್‌ಗಳ ಮದ್ಯವನ್ನು ಗುರಿಯಾಗಿರಿಸಿಕೊಂಡಿದೆ ಎಂದು ವರದಿಯಾಗಿದೆ. ಜೆಡಿಎಲ್ ಅಧ್ಯಕ್ಷ ಪೌಲ್ ಪಿ ಜಾನ್ ಅವರು ಕರ್ನಾಟಕ ಪ್ಲ್ಯಾಂಟ್‌ಅನ್ನು ಗ್ರೀನ್‌ಫೀಲ್ಡ್ ಯೋಜನೆಯಾಗಿ ರೂಪಿಸಿದ್ದು, ಸುಮಾರು 500-600 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಪ್ಲ್ಯಾಂಟ್‌ಗಾಗಿ ಕರ್ನಾಟಕ ಮಾತ್ರವಲ್ಲ ಇತರ ರಾಜ್ಯಗಳ ಜೊತೆಯಲ್ಲೂ ಚರ್ಚೆಗೆ ಮುಕ್ತವಾಗಿದ್ದೇವೆ. ಯಾವ ರಾಜ್ಯ ನಮಗೆ ಅನುಕೂಲಕರವಾದ ಪ್ರೋತ್ಸಾಹವನ್ನು ನೀಡುತ್ತದೆಯೋ ಆ ರಾಜ್ಯಕ್ಕೆ ನಾವು ಶಿಫ್ಟ್‌ ಆಗಲಿದ್ದೇವೆ. ಮುಂದಿನ 3-4 ವರ್ಷಗಳಲ್ಲಿ, ನಾವು ದಿನಕ್ಕೆ ಕನಿಷ್ಠ 12,000 ಲೀಟರ್ ಸಾಮರ್ಥ್ಯದ ಮತ್ತೊಂದು ಪ್ಲ್ಯಾಂಟ್‌ಅನ್ನು ಸ್ಥಾಪಿಸಬೇಕಾಗಿದೆ" ಎಂದು ತಿಳಿಸಿದ್ದಾರೆ.
ಜೆಡಿಎಲ್‌ ಹೆಚ್ಚು ಬೇಡಿಕೆಯಿರುವ ವೆಲ್ಲರ್ ಬೌರ್ಬನ್ ವಿಸ್ಕಿ ವೇರಿಯಂಟ್‌ಗಳನ್ನು ಬಿಡುಗಡೆ ಮಾಡಲು ಯೋಜಿಸಿದೆ. 12 ವರ್ಷದ ಸ್ಪೆಷಲ್‌ ರಿಸರ್ವ್‌ ನವೆಂಬರ್‌ನಲ್ಲಿ  ಬಿಡುಗಡೆ ಮಾಡಲಿದೆ. ಸಜೆರಾಕ್ ಸಹಭಾಗಿತ್ವದಲ್ಲಿ ಇರುವ ಈ ಬ್ರ್ಯಾಂಡ್‌ನ ಬಾಟಲಿಯ ಮದ್ಯ ಅಂದಾಜು 4,500 ಮತ್ತು 8,500 ರೂಪಾಯಿವರೆಗೆ ಇದೆ.

Tap to resize

Latest Videos

undefined

ಇದರೊಂದಿಗೆ ಶೀಘ್ರದಲ್ಲಿಯೇ ಕಂಪನಿ ಎರಡು ವೋಡ್ಕಾ ವೇರಿಯಂಟ್‌ಗಳನ್ನು ಹೊರತರುವ ಬಗ್ಗೆ ಯೋಚನೆ ಮಾಡುತ್ತಿದೆ ಎಂದು ಪೌಲ್‌ ಪಿ ಜಾನ್‌ ತಿಳಿಸಿದ್ದಾರೆ. ಒರಿಜಿನಲ್ ಚಾಯ್ಸ್ ಪೋರ್ಟ್‌ಫೋಲಿಯೊದಂತೆಯೇ ಒಂದರ ಬೆಲೆ ಕಡಿಮೆ ಇರುತ್ತದೆ. ಮುಂದಿನ ಆರು ತಿಂಗಳೊಳಗೆ ಇದನ್ನು ನಿರೀಕ್ಷೆ ಮಾಡಬಹುದಾಗಿದೆ. ಇನ್ನೊಂದು ಮುಂದಿನ ವರ್ಷದ ಹೊತ್ತಿಗೆ ನಿರೀಕ್ಷಿತ ಉನ್ನತ-ಮಟ್ಟದ ವಿಭಾಗವನ್ನು ಗುರಿಯಾಗಿಸುತ್ತದೆ. ಜೆಡಿಎಲ್ ಶೀಘ್ರದಲ್ಲೇ ತನ್ನ ರೂಲೆಟ್ ಪೋರ್ಟ್ಫೋಲಿಯೊಗೆ ಮತ್ತೊಂದು ಜಿನ್ ಅನ್ನು ಸೇರಿಸಲಿದೆ ಎಂದು ವರದಿ ಸೇರಿಸಲಾಗಿದೆ.

ವಿಸ್ಕಿ ವರ್ಲ್ಡ್‌ ಅವಾರ್ಡ್‌ನಲ್ಲಿ ಚಿನ್ನ ಗೆದ್ದ Indri Diwali Collector Edition 2024 ಭಾರತದಲ್ಲಿ ರಿಲೀಸ್‌, ಬೆಲೆ ಎಷ್ಟು?

ಕಳೆದ ತಿಂಗಳು ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, "ನಾವು ಬಹಳಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಅಂಚಿನಲ್ಲಿದ್ದೇವೆ. ಏಜ್ಡ್‌ ಸಿಪ್ಪಿಂಗ್ ರಮ್ ಕೆಲಸ ಪ್ರಗತಿಯಲ್ಲಿದೆ. ಆಶಾದಾಯಕವಾಗಿ ಮುಂದಿನ ಕೆಲವು ತಿಂಗಳುಗಳಲ್ಲಿ, ನಾವು ಅದನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ನಂತರ ನಾವು ಮಡೈರಾ ಫಿನಿಶ್ ಅನ್ನು ಹೊಂದಿದ್ದೇವೆ - ಶೆರ್ರಿ ಕ್ಯಾಸ್ಕ್ ಫಿನಿಶ್ - ಅದು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು." ಎಂದು ಹೇಳಿದ್ದರು.

ಪ್ರಾಚೀನ ಕಾಲದಿಂದಲೂ ಮದ್ಯಪಾನದಲ್ಲಿ ಮುಂದಿರುವ 10 ದೇಶಗಳು!

click me!