ಬಿಬಿಎಂಪಿ ಬಜೆಟ್‌ ಮುಂದೂಡಿಕೆ: ಏಕಾಏಕಿ ನಿರ್ಧಾರಕ್ಕೆ ಸರ್ಕಾರದ ಕಿಡಿ

Published : Mar 30, 2022, 05:22 AM IST
ಬಿಬಿಎಂಪಿ ಬಜೆಟ್‌ ಮುಂದೂಡಿಕೆ: ಏಕಾಏಕಿ ನಿರ್ಧಾರಕ್ಕೆ ಸರ್ಕಾರದ ಕಿಡಿ

ಸಾರಾಂಶ

*  ಪೂರ್ವ ಚರ್ಚೆ ಇಲ್ಲದೇ ಏಕಾಏಕಿ ಬಜೆಟ್‌ ಮಂಡನೆ *  ಬಿಬಿಎಂಪಿ ಅಧಿಕಾರಿಗಳ ನಡೆಗೆ ಬೇಸರ *  ಕೆಲ ಬದಲಾವಣೆ ಕಾರಣ ತಡೆ  

ಬೆಂಗಳೂರು(ಮಾ.30):   ಪೂರ್ವ ಚರ್ಚೆ ಇಲ್ಲದೇ ಏಕಾಏಕಿ ಬಜೆಟ್‌(Budget) ಮಂಡನೆಗೆ ಅನುಮತಿ ಪಡೆಯಲು ಮುಂದಾಗಿದ್ದ ಬಿಬಿಎಂಪಿ(BBMP) ಅಧಿಕಾರಿಗಳು ಸರ್ಕಾರದ(Government of Karnataka) ಕೆಂಗಣ್ಣಿ ಗುರಿಯಾಗಿದ್ದಾರೆ. ಹೀಗಾಗಿ, ಇಂದು (ಮಾ.30) ಮಂಡನೆಯಾಗಬೇಕಿದ್ದ ಬಿಬಿಎಂಪಿ ಬಜೆಟ್‌ಗೆ ತಾತ್ಕಾಲಿಕವಾಗಿ ತಡೆಯೊಡ್ಡಲಾಗಿದೆ.

ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಕಾಯ್ದೆ-2021ರ ಕಾಯ್ದೆ ಅನ್ವಯ ಸುಮಾರು 9 ಸಾವಿರ ಕೋಟಿ ರು. ಮೊತ್ತದ ಬಜೆಟ್‌ ಮಂಡನೆಗೆ ಬಿಬಿಎಂಪಿ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಈ ಸಂಬಂಧ ಬಜೆಟ್‌ ಮಂಡನೆಗೆ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ಸೇರಿದಂತೆ ಇತರೆ ಅಧಿಕಾರಿಗಳು ಮುಖ್ಯಮಂತ್ರಿಗಳ ಅನುಮೋದನೆಯನ್ನು ಪಡೆದಿದ್ದರು. ಆದರೆ, ಬಜೆಟ್‌ನಲ್ಲಿ ಕೆಲ ಬದಲಾವಣೆಗಳು ಮಾಡಬೇಕಾದ ಕಾರಣ ಬಜೆಟ್‌ ಅನ್ನು ಮುಂದೂಡಲಾಯಿತು ಎಂದು ಬಿಬಿಎಂಪಿ ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

Bengaluru: ಮಿನರ್ವ ಟು ಹಡ್ಸನ್‌ ವೃತ್ತಕ್ಕೆ ಫ್ಲೈಓವರ್‌: ಬಿಬಿಎಂಪಿ ಸಿದ್ಧತೆ

ಎರಡು ಗಂಟೆ ಗುಪ್ತ ಸಭೆ:

ಕಂದಾಯ ಸಚಿವ ಆರ್‌.ಅಶೋಕ್‌(R Ashok) ಅವರು ಬಿಬಿಎಂಪಿ ಆಯವ್ಯಯಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಆಡಳಿತಾಧಿಕಾರಿ, ಮುಖ್ಯ ಆಯುಕ್ತ ಹಾಗೂ ಹಣಕಾಸು ವಿಶೇಷ ಆಯುಕ್ತರು ಒಳಗೊಂಡಂತೆ ಇತರೆ ಅಧಿಕಾರಿಗಳೊಂದಿಗೆ ಮಂಗಳವಾರ ಸುಮಾರು 2 ಗಂಟೆಗಳ ಕಾಲ ಸಭೆ ನಡೆಸಿದರು. ಈ ವೇಳೆ ಬಜೆಟ್‌ನಲ್ಲಿ ಕೆಲವು ಮಹತ್ವದ ಬದಲಾವಣೆಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಬುಧವಾರ ಮಂಡನೆಯಾಗಬೇಕಿದ್ದ ಆಯವ್ಯಯವನ್ನು ಮುಂದೂಡಿಕೆ ಕಂಡಿದೆ ಎಂದು ಮೂಲಗಳು ಹೇಳಿವೆ.

ಅಧಿಕಾರಿಗಳಿಗೆ ತೀವ್ರ ತರಾಟೆ:

ವಾಡಿಕೆ ಪ್ರಕಾರ ಬಿಬಿಎಂಪಿ ಮೇಯರ್‌ ಸೇರಿದಂತೆ ಅಧಿಕಾರಿಗಳು ಬೆಂಗಳೂರು ನಗರಾಭಿವೃದ್ಧಿ ಸಚಿವರ ಬಳಿ ಬಜೆಟ್‌ ಮಂಡನೆಗೂ ಒಂದು ವಾರ ಮುನ್ನ ಚರ್ಚಿಸಲಾಗುತ್ತಿತ್ತು. ಈ ವೇಳೆ ಸಚಿವರ ಸಲಹೆ ಸೂಚನೆಯಂತೆ ವಿವಿಧ ಯೋಜನೆ ಮತ್ತು ವಾರ್ಡ್‌ ಮತ್ತು ವಿಧಾನಸಭಾ ಕ್ಷೇತ್ರವಾರು ಅನುದಾನ(Grants) ಹಂಚಿಕೆ ಮಾಡಿ ಬಜೆಟ್‌ ರೂಪಿಸಲಾಗುತ್ತಿತ್ತು. ಆದರೆ, ಈ ಬಾರಿ ಅಧಿಕಾರಿಗಳು ಪೂರ್ವ ಚರ್ಚೆ ಇಲ್ಲದೇ ಏಕಾಏಕಿ ಬಜೆಟ್‌ ಮಂಡನೆಗೆ ಅನುಮತಿ ಪಡೆಯುವುದಕ್ಕೆ ಹೋಗಿದ್ದಕ್ಕೆ ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎಂದು ಮೂಲಗಳು ಹೇಳಿವೆ.

ಚುನಾವಣೆಗೆ ಮಹತ್ವದ ಬಜೆಟ್‌

ವಿಧಾನಸಭೆಗೆ ಇನ್ನೊಂದು ವರ್ಷ ಬಾಕಿದೆ. ಜತೆಗೆ ಬಿಬಿಎಂಪಿ ಚುನಾವಣೆ(BBMP Election) ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಬಿಬಿಎಂಪಿ ಆಯವ್ಯಯ ಮಹತ್ವದ ಪಾತ್ರ ವಹಿಸಲಿದೆ. ಪಾಲಿಕೆ ಅಧಿಕಾರಿಗಳು ಇದ್ಯಾವುದನ್ನೂ ಗಮನಿಸದೇ ಬಜೆಟ್‌ ರೂಪಿಸಲಾಗಿದೆ. ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರಕ್ಕೆ ಪಾಲಿಕೆ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ. ಇದು ಸಹ ಬಜೆಟ್‌ ಮುಂದೂಡಲು ಮತ್ತೊಂದು ಕಾರಣವಾಗಿದೆ ಎನ್ನಲಾಗಿದೆ.
ಬಜೆಟ್‌ ಮಂಡನೆಗೆ ಸಾಕಷ್ಟುಸಿದ್ಧತೆ ಮಾಡಿಕೊಳ್ಳಲಾಗಿದೆ. ಅಧಿವೇಶನ(Assembly Session) ಇರುವುದರಿಂದ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲು ಸಾಧ್ಯವಾಗಿಲ್ಲ. ಹಾಗಾಗಿ, ಬುಧವಾರ ಬಜೆಟ್‌ ಮಂಡನೆ ಮಾಡುತ್ತಿಲ್ಲ ಅಂತ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌ ತಿಳಿಸಿದ್ದಾರೆ.  

ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ ಮಾಲೀಕರಿಗೆ ನೋಟಿಸ್‌ ಬೇಡ: ರೆಡ್ಡಿ

ಬಿಬಿಎಂಪಿ ಹೆಸರನ್ನು ‘ಬೃಹತ್‌ ಬಿಜೆಪಿ ಪಾಲಿಕೆ’ ಎಂದು ಬದಲಿಸಿ: ಸೌಮ್ಯಾರೆಡ್ಡಿ

ಜಯನಗರ ಕ್ಷೇತ್ರದ ಬಿಬಿಎಂಪಿ(BBMP) ಕಂದಾಯ ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ಕಚೇರಿಯಲ್ಲಿ ಕೆಲಸ ಮಾಡದೆ ಬಿಜೆಪಿ(BJP) ಕಾರ್ಯಕರ್ತರೊಬ್ಬರ ಮನೆಯಲ್ಲಿ ಮತದಾರರ ಪರಿಷ್ಕರಣೆ ಮಾಡುತ್ತಿರುವಾಗ ಪ್ರತ್ಯಕ್ಷವಾಗಿ ಸಿಕ್ಕಿಬಿದ್ದಿದ್ದಾರೆ. ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಬದಲು ಬಿಬಿಎಂಪಿ ಕಚೇರಿ ಹೆಸರನ್ನು ‘ಬೃಹತ್‌ ಬಿಜೆಪಿ ಮಹಾನಗರ ಪಾಲಿಕೆ’ ಎಂದು ಮರು ನಾಮಕರಣ ಮಾಡಿ ಎಂದು ಕಾಂಗ್ರೆಸ್‌ ಸದಸ್ಯ ಸೌಮ್ಯಾರೆಡ್ಡಿ(Sowmya Reddy) ಆಕ್ರೋಶ ವ್ಯಕ್ತಪಡಿಸಿದ್ದರು. 

ಇದೇ ವೇಳೆ ಬಿಬಿಎಂಪಿ ಆಯುಕ್ತರು, ಅಧಿಕಾರಿಗಳು ಸಿಕ್ಕಿಬಿದ್ದಿದ್ದು ಒಂದೇ ಬಾರಿ ಅಲ್ಲವೇ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಬಿಬಿಎಂಪಿಯ ಮುಖ್ಯ ಆಯುಕ್ತರು ಪಕ್ಷಾತೀತವಾಗಿ ಕೆಲಸ ಮಾಡದೆ ಬಿಜೆಪಿ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದರು. 
 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌