ಸುರಕ್ಷಿತ ಹಾಗೂ ಅತ್ಯಧಿಕ ಬಡ್ಡಿದರಕ್ಕೆ ಪೋಸ್ಟ್​ ಆಫೀಸ್​ನ ಹೂಡಿಕೆಯೇ ಬೆಸ್ಟ್​! ರೇಟ್​ ಹೀಗಿದೆ ನೋಡಿ

Published : Jan 30, 2026, 12:49 PM IST
Post Office Scheme

ಸಾರಾಂಶ

ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಹೋಲಿಸಿದರೆ, ಅಂಚೆ ಕಚೇರಿಯು ಇದೀಗ ಸುರಕ್ಷಿತ ಮತ್ತು ಅಧಿಕ ಬಡ್ಡಿ ದರಗಳನ್ನು ನೀಡುವ ಯೋಜನೆಗಳನ್ನು ಜಾರಿಗೆ ತಂದಿದೆ. ನಿಮ್ಮ ಹಣಕ್ಕೆ ಸಂಪೂರ್ಣ ಭದ್ರತೆ ಒದಗಿಸುವುದರ ಜೊತೆಗೆ, ಟರ್ಮ್ ಡೆಪಾಸಿಟ್, ಸುಕನ್ಯಾ ಸಮೃದ್ಧಿ, ಮತ್ತು ಹಿರಿಯ ನಾಗರಿಕರ ಯೋಜನೆಗಳ ಮಾಹಿತಿ ಇಲ್ಲಿದೆ. 

ಹಣವನ್ನು ಠೇವಣಿ ಇಡುವ ವಿಷಯ ಬಂದಾಗ ಸಾಮಾನ್ಯವಾಗಿ ಎಲ್ಲರೂ ಬ್ಯಾಂಕ್​ನತ್ತ ಮುಖ ಮಾಡುವುದು ಸಹಜ. ಇದಾಗಲೇ ಕೆಲವು ಖಾಸಗಿ ಬ್ಯಾಂಕ್​ಗಳು, ಸಹಕಾರಿ ಸಂಘಗಳು ರಾಷ್ಟ್ರೀಕೃತ ಬ್ಯಾಂಕ್​ಗಳಿಗಿಂತಲೂ ಹೆಚ್ಚುವರಿ ಬಡ್ಡಿ ನೀಡುವ ಕಾರಣ, ಅಲ್ಲಿ ತಾವು ಕಷ್ಟಪಟ್ಟು ದುಡಿದ ಹಣವನ್ನೆಲ್ಲಾ ಇಟ್ಟು ಮೋಸ ಹೋದವರು ಸಿಕ್ಕಾಪಟ್ಟೆ ಮಂದಿ ಇದ್ದಾರೆ. ಹೆಚ್ಚಿನ ಹಣದ ಆಮಿಷಕ್ಕೆ ಬಿದ್ದು, ದುಡಿದ ಹಣವನ್ನೂ ಕಳೆದುಕೊಂಡವರು ಇದ್ದಾರೆ. ಆದರೆ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಇಟ್ಟ ಹಣ ಸೇಫ್​ ಆಗಿದ್ದರೂ, ಬಡ್ಡಿದರ ಕಡಿಮೆ ಬರುವ ಕಾರಣ, ಇಷ್ಟು ಕಡಿಮೆ ಬಡ್ಡಿಹಣಕ್ಕೆ ಎಫ್​ಡಿ ಇಡಬೇಕೇ ಎಂದು ಹೇಳುವವರು ಹಲವರು.

ಆದರೆ, ಇದೀಗ ಅಂಚೆ ಕಚೇರಿ ಮುಂಚಿನಂತಿಲ್ಲ. ಕಳೆದೊಂದು ದಶಕದಲ್ಲಿ ಭಾರಿ ಬದಲಾವಣೆ ಕಂಡಿದೆ. ಪೋಸ್ಟ್​ ಆಫೀಸ್​ನಲ್ಲಿ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆಗೊಳಿಸಲಾಗಿದೆ. ಎಷ್ಟೋ ಯೋಜನೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್​​ಗಳು ನೀಡುವ ಬಡ್ಡಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಪೋಸ್ಟ್ ಆಫೀಸ್​ ಸ್ಕೀಮ್​ಗಳು ನೀಡುತ್ತಿವೆ. ಅತ್ಯಂತ ಸುರಕ್ಷಿತವಾಗಿ, ನಿಮ್ಮ ಹಣ ಸೇಫ್​ ಆಗಿ ಇರುವುದರ ಜೊತೆಗೆ, ಬ್ಯಾಂಕ್​ಗಳಿಗಿಂತಲೂ ಹೆಚ್ಚಿನ ಬಡ್ಡಿಹಣವನ್ನು ಪೋಸ್ಟ್​ ಆಫೀಸ್​ನಲ್ಲಿ ಪಡೆಯಬಹುದಾಗಿದೆ.

ಹೆಚ್ಚು ಬಡ್ಡಿ ನೀಡುವ ಸ್ಕೀಮ್​ಗಳು

ಇದಾಗಲೇ ಅಂಚೆ ಕಚೇರಿ ಹಲವು ಯೋಜನೆಗಳನ್ನು (Post Office Scheme) ಜಾರಿಗೆ ತಂದಿದೆ. ಇದರ ಪೈಕಿ ಜನರಿಗೆ ಅನುಕೂ ಆಗುವ ಹಾಗೂ ಬಡ್ಡಿದರ ಹೆಚ್ಚು ಇರುವ ಕೆಲವು ಸ್ಕೀಮ್​ಗಳ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಾಗಿದೆ. ಪೋಸ್ಟ್​ ಆಫ್​ ವೆಬ್​ಸೈಟ್​ನಲ್ಲಿ ನೀಡಿರುವಂತೆ ಅವುಗಳ ಪಟ್ಟಿಯನ್ನು ಕೂಡ ಇಲ್ಲಿ ನೀಡಲಾಗಿದೆ. ಇದರ ಮೂಲಕ, ನಿಮ್ಮ ಅರ್ಹತೆಗೆ ತಕ್ಕಂತೆ, ನೀವು ನಿಮ್ಮ ಹತ್ತಿರದ ಪೋಸ್ಟ್​ ಆಫೀಸ್​ಗೆ ಭೇಟಿ ಕೊಟ್ಟು ಅಲ್ಲಿ ಯೋಜನೆಗಳನ್ನು ಆಯ್ಕೆ ಮಾಡಿಕೊಂಡು ನಿಮ್ಮ ಹಣವನ್ನು ಸೇಫ್​ ಆಗಿ ಇಡಬಹುದಾಗಿದೆ.

ಬಡ್ಡಿದರದ ಮಾಹಿತಿ ಇಲ್ಲಿದೆ

ಬ್ಯಾಂಕ್​ ಮತ್ತು ಅಂಚೆ ಕಚೇರಿಗಳ ಬಡ್ಡಿದರದಲ್ಲಿ ಪರಿಷ್ಕರಣೆ ಮಾಡಲಾಗುತ್ತದೆ. ಅದೇ ರೀತಿ ಸದ್ಯ ಯಾವ ರೀತಿಯಲ್ಲಿ ಬಡ್ಡಿದರ ಇದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

 

  • ಸೇವಿಂಗ್ಸ್ ಡೆಪಾಸಿಟ್ (Post Office Saving Deposit): ಶೇ. 4 ಬಡ್ಡಿ
     
  • ಟರ್ಮ್ ಡೆಪಾಸಿಟ್ (Post Office Term Depisit ) 1 ವರ್ಷ: ಶೇ. 6.90 ಬಡ್ಡಿ
     
  • ಟರ್ಮ್ ಡೆಪಾಸಿಟ್ 2 ವರ್ಷ: ಶೇ. 7 ಬಡ್ಡಿ
     
  • ಟರ್ಮ್ ಡೆಪಾಸಿಟ್ 3 ವರ್ಷ: ಶೇ. 7.10 ಬಡ್ಡಿ
     
  • ಟರ್ಮ್ ಡೆಪಾಸಿಟ್ 5 ವರ್ಷ: ಶೇ. 7.50 ಬಡ್ಡಿ
     
  • ಪೋಸ್ಟ್ ಆಫೀಸ್ ಆರ್​ಡಿ (Post Office RD) 5 ವರ್ಷ: ಶೇ. 6.70 ಬಡ್ಡಿ
     
  • ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ (National Saving Certificate) 5 ವರ್ಷ: ಶೇ. 6.70 ಬಡ್ಡಿ
     
  • ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ: ಶೇ. 7.40 ಬಡ್ಡಿ
     
  • ಪಬ್ಲಿಕ್ ಪ್ರಾವಿಡೆಂಟ್ ಫಂಡ್ PPF: ಶೇ. 7.10 ಬಡ್ಡಿ
     
  • ಕಿಸಾನ್ ವಿಕಾಸ್ ಪತ್ರ: ಶೇ. 7.50 ಬಡ್ಡಿ
     
  • ಸುಕನ್ಯಾ ಸಮೃದ್ಧಿ ಯೋಜನೆ: ಶೇ. 8.20 ಬಡ್ಡಿ
     
  • ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್​ಸಿಎಸ್​ಎಸ್): ಶೇ. 8.20 ಬಡ್ಡಿ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

30 ಸಾವಿರ ನೌಕರರನ್ನು ಮನೆಗೆ ಕಳುಹಿಸಿದ ಬೃಹತ್​ ಕಂಪೆನಿ! ರಾಜ್ಯದಲ್ಲಿ ಯಾರ ಕೆಲಸಕ್ಕೆ ಬಿತ್ತು ಕತ್ತರಿ?
ವಿಶ್ವ ಬಿಕ್ಕಟ್ಟು ಎದುರಿಸುತ್ತಿದ್ರೂ ಭಾರತದ ಆರ್ಥಿಕತೆ ಗಟ್ಟಿ