ಗ್ರಾಹಕ ಬ್ಯಾಂಕಿಂಗ್‌ ವಹಿವಾಟು ಕ್ಷೇತ್ರದಿಂದ ಈ ಬ್ಯಾಂಕ್‌ ಹೊರಕ್ಕೆ

Kannadaprabha News   | Asianet News
Published : Apr 16, 2021, 09:48 AM IST
ಗ್ರಾಹಕ ಬ್ಯಾಂಕಿಂಗ್‌ ವಹಿವಾಟು ಕ್ಷೇತ್ರದಿಂದ ಈ ಬ್ಯಾಂಕ್‌ ಹೊರಕ್ಕೆ

ಸಾರಾಂಶ

3 ದಶಕಗಳ ಸೇವೆ ಬಳಿಕ ಬ್ಯಾಂಕೊಂದು ಗ್ರಾಹಕ ಬ್ಯಾಂಕಿಂಗ್‌ ವಹಿವಾಟು ಕ್ಷೇತ್ರದಿಂದ  ಹೊರ ನಡೆಯುತ್ತಿದೆ. ಭಾರತ ಸೇರಿದಂತೆ 13 ದೇಶಗಳಲ್ಲಿನ ವಹಿವಾಟಿನಿಂದ ಮುಕ್ತವಾಗುತ್ತಿದೆ. 

ಮುಂಬೈ (ಏ.16): ಅಮೆರಿಕ ಮೂಲದ ಸಿಟಿಬ್ಯಾಂಕ್‌, ಭಾರತ ಸೇರಿದಂತೆ 13 ದೇಶಗಳಲ್ಲಿನ ತನ್ನ ಗ್ರಾಹಕ (ಚಿಲ್ಲರೆ) ಬ್ಯಾಂಕಿಂಗ್‌ ವ್ಯವಹಾರವನ್ನು ಮುಕ್ತಾಯಗೊಳಿಸಲು ನಿರ್ಧರಿಸಿದೆ. 

1902ರಲ್ಲೇ ಭಾರತಕ್ಕೆ ಕಾಲಿಟ್ಟಿದ್ದ ಬ್ಯಾಂಕ್‌, 1985ರಲ್ಲಿ ಚಿಲ್ಲರೆ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಕಾಲಿಟ್ಟಿತ್ತು. ಹೀಗೆ 3 ದಶಕಗಳ ಸೇವೆ ನೀಡಿದ ಬಳಿಕ ಇಂಥದ್ದೊಂದು ನಿರ್ಧಾರವನ್ನು ಅದು ಕೈಗೊಂಡಿದೆ. 

SBI ಗ್ರಾಹಕರಿಗೆ ಬಿಗ್‌ನ್ಯೂಸ್: ನಿಮ್ಮ ಖರೀದಿಗೆ 52 ರೂ.ನಿಂದ EMI ಆರಂಭ ..

ಗ್ರಾಹಕ ಬ್ಯಾಂಕಿಂಗ್‌ ವಲಯವು ಕ್ರೆಡಿಟ್‌ ಕಾರ್ಡ್‌, ಚಿಲ್ಲರೆ ವಹಿವಾಟು, ಗೃಹ ಸಾಲ ಸೇರಿದಂತೆ ಇತರೆ ವ್ಯವಹಾರಗಳನ್ನು ಒಳಗೊಂಡಿದೆ.

ಬ್ಯಾಂಕ್‌ ಭಾರತದಲ್ಲಿ 35 ಶಾಖೆಗಳನ್ನು ಹೊಂದಿದ್ದು, 4000ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಒಳಗೊಂಡಿದೆ. ಆದರೆ ಬ್ಯಾಂಕ್‌ನ ಈ ನಿರ್ಧಾರವು ಆರ್‌ಬಿಐ ಅನುಮತಿ ಸಿಕ್ಕ ಬಳಿಕವಷ್ಟೇ ಜಾರಿಗೆ ಬರಲಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!