ಅಂಚೆ ಕಚೇರಿಯ ಗ್ರಾಮ್ ಸುರಕ್ಷಾ ಯೋಜನೆ ಸುರಕ್ಷಿತ ಹಾಗೂ ಉತ್ತಮ ರಿಟರ್ನ್ಸ್ ನೀಡುವ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಲ್ಲಿ ದಿನಕ್ಕೆ ಕೇವಲ 50 ರೂ. ಅಂದ್ರೆ ತಿಂಗಳಿಗೆ 1515ರೂ.ಹೂಡಿಕೆ ಮಾಡಿದ್ರೆ 35 ಲಕ್ಷ ರೂ. ರಿಟರ್ನ್ಸ್ ಗಳಿಸಲು ಸಾಧ್ಯವಿದೆ. ಅದು ಹೇಗೆ? ಇಲ್ಲಿದೆ ಮಾಹಿತಿ.
Business Desk:ಭಾರತದ ಗ್ರಾಮೀಣ ಭಾಗದ ಜನರಿಗೆ ಇಂದಿಗೂ ಉಳಿತಾಯಕ್ಕೆ ಅಂಚೆ ಕಚೇರಿಗಳು ಅಚ್ಚುಮೆಚ್ಚು. ಅಂಚೆ ಕಚೇರಿಯ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಜೊತೆಗೆ ಉತ್ತಮ ರಿಟರ್ನ್ ಕೂಡ ಸಿಗುತ್ತಿರೋದು ಇದಕ್ಕೆ ಮುಖ್ಯಕಾರಣ. ಇತ್ತೀಚಿನ ದಿನಗಳಲ್ಲಿ ಅಂಚೆ ಇಲಾಖೆಯ ವಿವಿಧ ಉಳಿತಾಯ ಯೋಜನೆಗಳಿಗೆ ಉತ್ತಮ ಬಡ್ಡಿದರ ಕೂಡ ಸಿಗುತ್ತಿದೆ. ದೇಶದ ಅಭಿವೃದ್ಧಿ ಹೊಂದದ ಭಾಗದ ಜನರ ಅಗತ್ಯಗಳನ್ನು ಪೂರೈಸಲು ಭಾರತೀಯ ಅಂಚೆ ಇಲಾಖೆ ಅನೇಕ ಅಪಾಯರಹಿತ ಉಳಿತಾಯ ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಉತ್ತಮ ರಿಟರ್ನ್ಸ್ ಕೂಡ ನೀಡುತ್ತಿವೆ. ಇಂಥ ಯೋಜನೆಗಳಲ್ಲಿ ಅಂಚೆ ಕಚೇರಿ ಗ್ರಾಮ್ ಸುರಕ್ಷಾ ಯೋಜನೆ ಕೂಡ ಒಂದು. ಇದು ಜೀವ ವಿಮಾ ಯೋಜನೆಯಾಗಿದ್ದು, ಕಡಿಮೆ ಅಪಾಯ ಹಾಗೂ ಹೆಚ್ಚಿನ ಲಾಭ ತರೋ ಅಂಚೆ ಇಲಾಖೆಯ ಯೋಜನೆಗೆ ಇದು ಒಂದು ಅತ್ಯುತ್ತಮ ನಿದರ್ಶನವಾಗಿದೆ. ಇನ್ನು ಈ ವಿಮಾ ಯೋಜನೆಯನ್ನು ಐದು ವರ್ಷಗಳ ಕವರೇಜ್ ಬಳಿಕ ಎಂಡೋಮೆಂಟ್ ಪಾಲಿಸಿಯಾಗಿ ಪರಿವರ್ತಿಸಬಹುದು. ಪ್ರೀಮಿಯಂ ಮೊತ್ತ ಕೂಡ ಕಡಿಮೆಯಿದೆ.
ಈ ಪಾಲಿಸಿ ಪಡೆಯಲು ವಯೋಮಿತಿ ಎಷ್ಟು?
ಈ ಪಾಲಿಸಿ ಖರೀದಿಗೆ ಕನಿಷ್ಠ ವಯಸ್ಸು 19 ವರ್ಷ ಹಾಗೂ ಗರಿಷ್ಠ ವಯೋಮಿತಿ 55 ವರ್ಷಗಳು. ಈ ಪಾಲಿಸಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ 10,000ರೂ. ಹಾಗೂ ಗರಿಷ್ಠ ಮೊತ್ತ 10 ಲಕ್ಷ ರೂ. ನಾಲ್ಕು ವರ್ಷಗಳ ಕವರೇಜ್ ಬಳಿಕ ಪಾಲಿಸಿದಾರರು ಸಾಲ ಸೌಲಭ್ಯ ಕೂಡ ಪಡೆಯಬಹುದು. ಒಂದು ವೇಳೆ ಈ ಪಾಲಿಸಿಯನ್ನು ಐದು ವರ್ಷಕ್ಕೂ ಮೊದಲೇ ಸ್ಥಗಿತಗೊಳಿಸಿದ್ರೆ ಬೋನಸ್ ಸೌಲಭ್ಯ ಸಿಗೋದಿಲ್ಲ.
Insurance Trap: ವಿಮಾ ಕಂಪನಿಗಳು ಹೇಗೆಲ್ಲ ನಿಮ್ಮನ್ನು ಯಾಮಾರಿಸುತ್ತವೆ ಗೊತ್ತಾ? ಇಲ್ಲಿದೆ ಮಾಹಿತಿ
ತಿಂಗಳಿಗೆ ಎಷ್ಟು ಹೂಡಿಕೆ ಮಾಡ್ಬೇಕು?
ಗ್ರಾಮ್ ಸುರಕ್ಷಾ ಯೋಜನೆ ಖಾತೆಗೆ(Account) ನೀವು ಪ್ರತಿ ತಿಂಗಳು 1500ರೂ. ಜಮೆ ಮಾಡೋದು ಕಡ್ಡಾಯ. ನೀವು ನಿರ್ದಿಷ್ಟ ಅವಧಿಗೆ ನಿರಂತರವಾಗಿ ಇಷ್ಟು ಮೊತ್ತವನ್ನು ಜಮೆ ಮಾಡಿದ್ರೆ 31ಲಕ್ಷ ರೂ.ನಿಂದ 35ಲಕ್ಷ ರೂ. ತನಕ ರಿಟರ್ನ್ಸ್ ಗಳಿಸಬಹುದು.
ಯಾವಾಗ ಎಂಡೋಮೆಂಟ್ ಪಾಲಿಸಿಯಾಗಿ ಪರಿವರ್ತಿಸಬಹುದು?
ಪಾಲಿಸಿದಾರರು ಈ ಪಾಲಿಸಿಯನ್ನು 59 ವರ್ಷ ವಯಸ್ಸಿನ ತನಕ ಎಂಡೋಮೆಂಟ್ ಪಾಲಿಸಿಯಾಗಿ ಪರಿವರ್ತಿಸಲು ಅವಕಾಶವಿದೆ. ಆದರೆ, ಈ ಮಾರ್ಪಾಡು ದಿನಾಂಕ ಮೆಚ್ಯುರಿಟಿ ಅವಧಿಯ ಒಂದು ವರ್ಷದೊಳಗೆ ಬರಬಾರದು. ಇನ್ನು ಎಂಡೋಮೆಂಟ್ ಪಾಲಿಸಿಗೆ ಪ್ರೀಮಿಯಂ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಬಹುದು. 55, 58, ಅಥವಾ 60ನೇ ವಯಸ್ಸಿನಲ್ಲಿ ಒಂದು ಪ್ರೀಮಿಯಂ ಪಾವತಿಸಬಹುದು. ಒಂದು ವೇಳೆ ಪಾಲಿಸಿ ಸರೆಂಡರ್ ಮಾಡಿದ್ರೆ ಭರವಸೆ ನೀಡಿರುವ ಕನಿಷ್ಠ ಮೊತ್ತದ ಮೇಲೆ ಬೋನಸ್ ನೀಡಲಾಗುತ್ತದೆ. ಇದು 1000ರೂ.ಮೇಲೆ ವಾರ್ಷಿಕ 60 ರೂ. ಆಗಿದೆ.
ನೀವು ಡಿಮ್ಯಾಟ್ ಖಾತೆ ಹೊಂದಿದ್ದೀರಾ? ಮಾ.31 ರೊಳಗೆ ನಾಮಿನಿ ವಿವರ ಸಲ್ಲಿಸದಿದ್ರೆ ಖಾತೆ ಸ್ಥಗಿತ
35ಲಕ್ಷ ರೂ. ಗಳಿಸಲು ಹೀಗೆ ಮಾಡಿ
ಒಬ್ಬ ವ್ಯಕ್ತಿ ಈ ಯೋಜನೆಯಲ್ಲಿ 19ನೇ ವಯಸ್ಸಿಗೆ ಹೂಡಿಕೆ ಮಾಡಲು ಪ್ರಾರಂಭಿಸುತ್ತಾನೆ ಎಂದು ಭಾವಿಸಿ. ಆತ 10ಲಕ್ಷ ರೂಪಾಯಿ ಪಾಲಿಸಿ ಕೊಳ್ಳುತ್ತಾನೆ. ಈ ಪಾಲಿಸಿಯ ಮಾಸಿಕ ಪ್ರೀಮಿಯಂ 55ವರ್ಷಕ್ಕೆ 1515ರೂ., 58 ವರ್ಷಕ್ಕೆ 1463ರೂ. ಹಾಗೂ 60 ವರ್ಷಕ್ಕೆ 1411ರೂ. ಆಗಿದೆ. ಈ ರೀತಿ ನೀವು ಹೂಡಿಕೆ ಮಾಡಿದ್ರೆ 55ನೇ ವಯಸ್ಸಿನಲ್ಲಿ ನಿಮಗೆ 31.60ಲಕ್ಷ ರೂ. ಸಿಗುತ್ತದೆ. 58 ವಯಸ್ಸಿನಲ್ಲಿ 33.40ಲಕ್ಷ ರೂ. ಹಾಗೂ 60ನೇ ವಯಸ್ಸಿನಲ್ಲಿ 34.60ಲಕ್ಷ ರೂ. ಸಿಗುತ್ತದೆ. ಅಂದ್ರೆ ದಿನಕ್ಕೆ ಬರೀ 50ರೂ. ಅಥವಾ ತಿಂಗಳಿಗೆ 1515ರೂ.ಹೂಡಿಕೆ ಮಾಡಿದ್ರೆ ನಿಮಗೆ 34.60ಲಕ್ಷ ರೂ. ಸಿಗುತ್ತದೆ.