ಹೊಸದಾಗಿ ಆವಿಷ್ಕಾರಗೊಂಡಿರುವ ಚಾಟ್ ಜಿಪಿಟಿ ಸಮಾಜಕ್ಕೆ ಹೊಸ ರೂಪ ನೀಡುತ್ತದೆ. ಆದರೆ ಇದೇ ವೇಳೆ ಬಹಳಷ್ಟು ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂದು ಚಾಟ್ ಜಿಪಿಟಿ ಸೃಷಿಸಿರುವ ಓಪನ್ ಎಐ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್‌ಮ್ಯಾನ್ ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋ: ಹೊಸದಾಗಿ ಆವಿಷ್ಕಾರಗೊಂಡಿರುವ ಚಾಟ್ ಜಿಪಿಟಿ ಸಮಾಜಕ್ಕೆ ಹೊಸ ರೂಪ ನೀಡುತ್ತದೆ. ಆದರೆ ಇದೇ ವೇಳೆ ಬಹಳಷ್ಟು ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂದು ಚಾಟ್ ಜಿಪಿಟಿ ಸೃಷಿಸಿರುವ ಓಪನ್ ಎಐ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಯಾಮ್ ಆಲ್ಟ್‌ಮ್ಯಾನ್ ಆತಂಕ ವ್ಯಕ್ತಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು, ಚಾಟ್ ಜಿಪಿಟಿ ಹಲವು ಅಪಾಯಗಳನ್ನು ಹೊಂದಿದೆ. ಆದರೆ ಮಾನವರು ಅಭಿವೃದ್ಧಿಪಡಿಸಿದ ಅತ್ಯಂತ ಶ್ರೇಷ್ಠ ತಂತ್ರಜ್ಞಾನವಿದು ಎಂದು ಹೇಳಿದ್ದಾರೆ. ನಾವು ಇಲ್ಲಿ ಜಾಗರೂಕರಾಗಿರಬೇಕು. ಆದಾಗ್ಯೂ ನಮಗೆ ಆಗುವ ಭಯ ಅಲ್ಪ ಮಾತ್ರ ಎಂದು ಜನರು ಸಂತೋಷಪಡಬೇಕು ಎಂದಿದ್ದಾರೆ. ಇದು ಪ್ರಸ್ತುತ ಬಹಳಷ್ಟುಉದ್ಯೋಗಗಳನ್ನು ತೊಡೆದುಹಾಕಲಿದೆ, ಅದು ನಿಜ. ನಾವು ಹೆಚ್ಚು ಉತ್ತಮವಾದವುಗಳನ್ನು ಮಾಡಬಹುದು. ಜನಜೀವನ ಸುಧಾರಣೆಗೆ ಕೃತಕ ಬುದ್ಧಿಮತ್ತೆ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದ್ದಾರೆ.
Chat GPT corner: ಚಾಟ್ಸ್ ಸ್ಟಾಲ್ ಫೋಟೋ ಆನಂದ್ ಮಹೀಂದ್ರಾ ಶೇರ್ ಮಾಡಿದ್ಯಾಕೆ ?
ಗೂಗಲ್ ಇಂಜಿನಿಯರ್ ಸಾಹಸ, ಭಗವದ್ಗೀತೆಯ ಜ್ಞಾನಕ್ಕಾಗಿ ಗೀತಾ ಜಿಪಿಟಿ!
ತಲೆತಿನ್ನುವ ಅಸೈನ್‌ಮೆಂಟ್‌ಗಳು, ಮೂವಿ ಸ್ಕ್ರಿಪ್ಟ್‌ಗಳು ಅಥವಾ ಲವ್ ಲೆಟರ್‌ಗಳ ಕಾರಣಕ್ಕಾಗಿ ತಲೆಕೆಡಿಸಿಕೊಂಡಿದ್ದೀರಾ? ಅದಕ್ಕಾಗಿ ಚಾಟ್ ಜಿಪಿಟಿ ಅನ್ನೋ ಎಐ ತಂತ್ರಜ್ಞಾನ ಆಧರಿಸಿ ಬಾಟ್ ಈಗಾಗಲೇ ಜನಪ್ರಿಯವಾಗಿದೆ. ನೀವು ಇಂಥದ್ದನ್ನು ಬರೀ ಎಂದರೆ ಸಾಕು, ಮನುಷ್ಯರ ಯೋಚನೆಗೂ ನಿಲುಕದಂತೆ ಅಷ್ಟು ಅದ್ಬುತವಾಗಿ ನಿಮ್ಮ ಕೆಲಸವನ್ನು ಮಾಡಿ ಮುಗಿಸುತ್ತದೆ. ಅದನ್ನೇ ಎತ್ತಿ ಕಾಪಿ ಪೇಸ್ಟ್ ಮಾಡಿದರೆ, ನಿಮ್ಮ ಎಸೈನ್‌ಮೆಂಟ್, ಮೂವಿ ಸ್ಕ್ರಿಪ್ಟ್, ಲವ್ ಲೆಟರ್ ಎಲ್ಲವೂ ಸಿದ್ಧವಾಗುತ್ತದೆ. ಇದರ ಮೇಲೆ ಮೈಕ್ರೋಸಾಫ್ಟ್ ಕಂಪನಿ 80 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿದೆ ಎನ್ನುವ ಸುದ್ದಿ ಇದೆ. ಭವಿಷ್ಯದ ದಿನಗಳಲ್ಲಿ ಗೂಗಲ್ ಮೇಲಿನ ಅವಲಂಬನೆಯನ್ನೇ ಕಡಿಮೆ ಮಾಡುವ ಉದ್ದೇಶ ಇದರಲ್ಲಿರುವ ಕಾರಣ,ಗೂಗಲ್ ಕೂಡ ಕಾರ್ಯಪ್ರವೃತ್ತವಾಗಿದ್ದು, ತನ್ನದೇ ಎಐ ಆಧರಿತ ಬಾಟ್ 'ಬಾರ್ಡ್' ಅನ್ನು ಅನಾವರಣ ಮಾಡಿದೆ.
ಈಗ ಚಾಟ್ ಜಿಪಿಟಿ ಹಾಗೂ ಬಾರ್ಡ್ ರೀತಿಯಲ್ಲಿಯೇ ಇರುವ ಇನ್ನೊಂದು ವೇದಿಕೆ ಅನಾವರಣವಾಗಿದೆ. ಇದು ಆಧ್ಯಾತ್ಮಕ ಜ್ಞಾನವನ್ನು ನೀಡುವ ವೇದಿಕೆಯಾಗಿದೆ. ಹೊಸ ರೀತಿಯ ಎಐ ಚಾಟ್‌ಬಾಟ್ ಸದ್ಯ ಸುದ್ದಿಯಲ್ಲಿದ್ದು ಅದರ ಹೆಸರು ಗೀತಾ ಜಿಪಿಟಿ. ಇದು ನಿಮ್ಮ ಆಧ್ಯಾತ್ಮಿಕ ಪ್ರಶ್ನೆಗಳಿಗೆ ನೇರವಾಗಿ ಭಗವದ್ಗೀತೆಯನ್ನು ಅಧರಿಸಿಕೊಂಡು ಉತ್ತರವನ್ನು ನೀಡಲಿದೆ.
ಗೂಗಲ್‌ನಲ್ಲಿ (Google) ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸುಕುರು ಸಾಯಿ ವಿನೀತ್ ಈ ಗೀತಾ ಜಿಪಿಟಿಯನ್ನು ರಚನೆ ಮಾಡಿದ್ದಾರೆ. 700 ಶ್ಲೋಕಗಳನ್ನು ಹೊಂದಿರುವ ಹಿಂದುಗಳ ಪವಿತ್ರ ಧರ್ಮಗ್ರಂಥವಾದ ಭಗವದ್ಗೀತೆಯ ಮೇಲೆ ಆಧಾರಿತವಾದ ಜಿಪಿಟಿ-3 ಭಾಷಾ ಮಾದರಿಯನ್ನು ಆಧರಿಸಿ ಇದು ಉತ್ತರ ನೀಡಲಿದೆ. 'ಗೀತಾ ಜಿಪಿಟಿ ಎನ್ನುವುದು ಜಿಪಿಟಿ-3 ಚಾಲಿತ ಅಪ್ಲಿಕೇಶನ್ ಆಗಿದೆ. ಇದು ಭಗವದ್ಗೀತೆಯಿಂದ ನಿಮ್ಮ ಜೀವನದ ಸಮಸ್ಯೆಗಳಿಗೆ ಉತ್ತರಗಳನ್ನು ನೀಡುತ್ತದೆ' ಎಂದು ಇದರಲ್ಲಿ ವಿವರಣೆ ನೀಡಲಾಗಿದೆ.
ಎಐ ಬಾಟ್ ಆಗಿರುವ ಇದನ್ನು ಗೀತಾ ಜಿಪಿಟಿ (geeta GPT) ಎನ್ನುವ ಹೆಸರಿನಿಂದ ಕರೆಯಲಾಗಿದೆ. ಇದು ಹಿಂದುಗಳ ಅತ್ಯಂತ ಪುರಾತನ ಧರ್ಮಗ್ರಂಥವಾದ ಭಗವದ್ಗೀತೆಯ ಜ್ಞಾನ ಹಾಗೂ ಆಧ್ಯಾತ್ಮವನ್ನು ಬಳಸಿಕೊಂಡು, ಜಿಟಪಿಯ ಬಳಕೆದಾರನ ಜೀವನದ ನಿರ್ಧಾರಗಳಿಗೆ ಮಾರ್ಗದರ್ಶನ ಹಾಗೂ ಸ್ಪಷ್ಟ ಜ್ಞಾನವನ್ನು ನೀಡುತ್ತದೆ. ಭಗವದ್ಗೀತೆಯ ಅಪಾರ ಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ಗೀತಾ ಜಿಪಿಟಿ ಬಳಕೆದಾರರಿಗೆ ಒಂದು ಅನನ್ಯ ದೃಷ್ಟಿಕೋನವನ್ನು ಮತ್ತು ಅವರ ಪ್ರಶ್ನೆಗಳ ಬಗ್ಗೆ ಹೆಚ್ಚು ಆಳವಾದ ಜ್ಞಾನವನ್ನು ನೀಡುತ್ತದೆ. ಇದು ಜೀವನದ ಉದ್ದೇಶ, ನೈತಿಕ ಸಂದಿಗ್ಧತೆಗಳು ಅಥವಾ ಯಾವುದೇ ಇತರ ಅಸ್ತಿತ್ವವಾದದ ಪ್ರಶ್ನೆಯಾಗಿರಲಿ, ವ್ಯಕ್ತಿಗಳು ತಮ್ಮ ಜೀವನವನ್ನು ನ್ಯಾವಿಗೇಟ್ ಮಾಡಲು ಸಹಾಯ ಮಾಡಲು ಗೀತಾ ಜಿಪಿಟಿ ನಿಮಗೆ ಭಗವದ್ಗೀತೆಗೆ ಒಳನೋಟವುಳ್ಳ ಮತ್ತು ಅರ್ಥಪೂರ್ಣ ಉತ್ತರಗಳನ್ನು ನೀಡುತ್ತದೆ.