Post Office: ಅಂಚೆ ಕಚೇರಿ ಉಳಿತಾಯ ಖಾತೆಗಳಿಗೆ ಶೀಘ್ರದಲ್ಲಿ ನೆಟ್ ಬ್ಯಾಂಕಿಂಗ್, ಎಟಿಎಂ ಸೌಲಭ್ಯ!

By Suvarna News  |  First Published Feb 14, 2022, 1:32 PM IST

*ಸುಮಾರು 1.5ಲಕ್ಷ ಅಂಚೆ ಕಚೇರಿಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ಬರೋ ಸಾಧ್ಯತೆ
*ಈ ಬಗ್ಗೆ ಕೇಂದ್ರ ಬಜೆಟ್ ಮಂಡನೆ ಸಂದರ್ಭದಲ್ಲಿ ಮಾಹಿತಿ ನೀಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
* ಅಂಚೆ ಕಚೇರಿ ಉಳಿತಾಯ ಖಾತೆಗಳು ಹಾಗೂ ಬ್ಯಾಂಕ್ ಖಾತೆಗಳ ನಡುವೆ ಹಣದ ಆನ್ ಲೈನ್ ವರ್ಗಾವಣೆಗೆ ಸಿಗಲಿದೆ ಅವಕಾಶ 


Business Desk: 2022ನೇ ಸಾಲಿನ ಕೇಂದ್ರ ಬಜೆಟ್  (Central Budget) ಮಂಡನೆ ಸಂದರ್ಭದಲ್ಲಿ ವಿತ್ತ ಸಚಿವೆ (Finance Minister)  ನಿರ್ಮಲಾ ಸೀತಾರಾಮನ್ (Nirmala Sitharaman) ಸುಮಾರು 1.5ಲಕ್ಷ ಅಂಚೆ ಕಚೇರಿಗಳು (Post offices) ಕೋರ್ ಬ್ಯಾಂಕಿಂಗ್ (Core banking) ವ್ಯವಸ್ಥೆಯೊಳಗೆ ಬರುತ್ತವೆ ಎಂದು ಘೋಷಿಸಿದ್ದರು.ಸರ್ಕಾರದ ಈ ನಿರ್ಧಾರದಿಂದ ಸಾವಿರಾರು ಗ್ರಾಹಕರಿಗೆ (Customers) ಅಂಚೆ ಕಚೇರಿ (Post Office) ಶಾಖೆಗಳಲ್ಲಿರೋ ಖಾತೆಗಳಿಗೆ ನೆಟ್ ಬ್ಯಾಂಕಿಂಗ್ (Net Bankig), ಮೊಬೈಲ್ ಬ್ಯಾಂಕಿಂಗ್ (Mobile banking) ಹಾಗೂ ಎಟಿಎಂ  (ATM) ಸೌಲಭ್ಯ ಲಭಿಸಲಿದೆ. 
ಪ್ರಸ್ತುತ ಅಂಚೆ ಕಚೇರಿ  (Post Office) ಉಳಿತಾಯ ಖಾತೆ ಹಾಗೂ ಪಾವತಿ ಬ್ಯಾಂಕಿಂಗ್ ಸೇವೆಗಳನ್ನು ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ಮೂಲಕ ನಿರ್ವಹಿಸಲಾಗುತ್ತಿದೆ. ಬ್ಯಾಂಕಿಂಗ್ ನೆಟ್ ವರ್ಕ್ ಮೂಲಕ ಪೋಸ್ಟಲ್ ನೆಟ್ ವರ್ಕ್ ಸಂಪರ್ಕ ಅಂಚೆ ಕಚೇರಿ ಉಳಿತಾಯ ಖಾತೆಗಳು  ಹಾಗೂ ಬ್ಯಾಂಕ್ ಖಾತೆಗಳ ನಡುವೆ ಹಣದ ಆನ್ ಲೈನ್ ವರ್ಗಾವಣೆಗೆ ಅವಕಾಶ ಕಲ್ಪಿಸುತ್ತದೆ. 

'2022ರಲ್ಲಿ ಶೇ.100ರಷ್ಟು ಅಂದ್ರೆ 1.5ಲಕ್ಷ ಅಂಚೆ ಕಚೇರಿಗಳು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೊಳಪಡಲಿವೆ. ಇದ್ರಿಂದ ಆರ್ಥಿಕ  ಒಳಗೊಳ್ಳುವಿಕೆ ಜೊತೆಗೆ ನೆಟ್ ಬ್ಯಾಂಕಿಂಗ್ (Net Bankig), ಮೊಬೈಲ್ ಬ್ಯಾಂಕಿಂಗ್ (Mobile banking) , ಎಟಿಎಂ (ATM) ಮೂಲಕ ಖಾತೆಗಳಲ್ಲಿನ ಹಣವನ್ನು ನಿರ್ವಹಣೆ ಮಾಡಬಹುದಾಗಿದೆ. ಅಷ್ಟೇ ಅಲ್ಲದೆ, ಅಂಚೆ ಕಚೇರಿ ಖಾತೆಗಳು ಹಾಗೂ ಬ್ಯಾಂಕ್ ಖಾತೆಗಳ ನಡುವೆ ಹಣದ ಆನ್ ಲೈನ್ ವರ್ಗಾವಣೆಗೆ ಕೂಡ ಅವಕಾಶ ಕಲ್ಪಿಸಲಾಗೋದು' ಎಂದು ಬಜೆಟ್ ಮಂಡನೆ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಹೇಳಿದ್ದರು.

Tap to resize

Latest Videos

ಕ್ರಿಪ್ಟೋಕರೆನ್ಸಿ ಪ್ರಸ್ತುತ ಕಾನೂನುಬದ್ಧವಲ್ಲ: ಕೇಂದ್ರ ಸಚಿವ ಭಗವತ್ ಕರದ್ ಸ್ಪಷ್ಟನೆ

75 ಜಿಲ್ಲೆಗಳಲ್ಲಿ ಷೆಡ್ಯುಲ್ಡ್ ವಾಣಿಜ್ಯ ಬ್ಯಾಂಕುಗಳ ಮೂಲಕ  75 ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಗಳ ಪರಿಚಯದಿಂದ ಜನರನ್ನು ಗ್ರಾಹಕಸ್ನೇಹಿ ವಿಧಾನದಿಂದ ಡಿಜಿಟಲ್ ಸಶಕ್ತಿಕರಣಗೊಳಿಸಲು ಸಾಧ್ಯವಾಗಲಿದೆ. ಖಾತೆಗಳ ನಡುವೆ ಹಣದ ವರ್ಗಾವಣೆ ಹಾಗೂ ಆರ್ಥಿಕ ಒಳಗೊಳ್ಳುವಿಕೆಗೆ ಇದು ನೆರವು ನೀಡಲಿದೆ. ಅಷ್ಟೇ ಅಲ್ಲ, ಅನೇಕ ಗ್ರಾಹಕರಿಗೆ ಇದೇ ಮೊದಲ ಬಾರಿಗೆ ಡಿಜಿಟಲ್ ಬ್ಯಾಂಕಿಂಗ್ ಅನುಭವ ಪಡೆಯಲು ಸಹಾಯ ಮಾಡಲಿದೆ ಎಂದು ಕ್ರೆಡಿಟಸ್ ಸಲ್ಯೂಷನ್  ಸಹಸಂಸ್ಥಾಪಕ ಅನುಷ್ಮನ್ ಪನ್ವರ್ ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ನೀವು ಅಂಚೆ ಕಚೇರಿಯಲ್ಲಿ ಖಾತೆಗಳನ್ನು ಹೊಂದಿದ್ರೆ ಶೀಘ್ರವಾಗಿ ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಎಟಿಎಂ ಸೌಲಭ್ಯ ಪಡೆಯಲಿದ್ದೀರಿ. ಇದ್ರಿಂದ ನೀವು ಅಂಚೆ ಕಚೇರಿ ಖಾತೆಯಲ್ಲಿರೋ ಹಣವನ್ನು ಭಾರತೀಯ ಅಂಚೆ ಪಾವತಿಗಳ ಬ್ಯಾಂಕ್ ಖಾತೆ ಅಥವಾ ಇತರ ಯಾವುದೇ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲು ಸಾಧ್ಯವಾಗುತ್ತದೆ. ಈ ನಿರ್ಧಾರವು ದೇಶದಲ್ಲಿ ಆರ್ಥಿಕ ಒಳಗೊಳ್ಳುವಿಕೆಯನ್ನು ಹೆಚ್ಚಿಸಬೇಕೆಂಬ ಕೇಂದ್ರ ಸರ್ಕಾರದ ನಿಲುವಿನ ಭಾಗವೇ ಆಗಿದೆ.

Floating Rate Savings Bonds: RBI ಈ ಬಾಂಡ್ ನಲ್ಲಿ ಹೂಡಿಕೆ ಮಾಡಿದ್ರೆ ಅಪಾಯ ಕಡಿಮೆ, ಬಡ್ಡಿ ಅಧಿಕ!

ಈ ನಿರ್ಧಾರ ಬ್ಯಾಂಕುಗಳಿಗೆ ಹೇಗೆ ನೆರವಾಗಲಿದೆ?
ಅಂಚೆ ಕಚೇರಿಗಳನ್ನು ಕೋರ್ ಬ್ಯಾಂಕಿಂಗ್ ವ್ಯವಸ್ಥೆಗೊಳಪಡಿಸೋ ಕ್ರಮ ಹೊಸ ಡಿಜಿಟಲ್ ಬ್ಯಾಂಕಿಂಗ್ ಮಾದರಿಗಳ ನಿರ್ಮಾಣಕ್ಕೆ ರಹದಾರಿಯಾಗಲಿದೆ. ಈ ಬದಲಾವಣೆಯಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕುಗಳಿಗೆ ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯ ಖಾತೆಗಳನ್ನು ತೆರೆಯಲು ಹಾಗೂ ಗ್ರಾಹಕರನ್ನು ಹೊಂದಲು ಅವಕಾಶ ಸಿಗಲಿದೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯ ವಿಸ್ತರಣೆಗೆ ಇದು ನೆರವು ನೀಡಲಿದೆ.

ಸರ್ಕಾರಕ್ಕೂ ಅನುಕೂಲ
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿದ್ದಾರೆ. ಅಲ್ಲದೆ, ಅಂಚೆ ಕಚೇರಿಗಳಲ್ಲಿ ಖಾತೆ ಹೊಂದಿದ್ದಾರೆ. ಹೀಗಾಗಿ ಅಂಚೆ ಕಚೇರಿಗಳಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಕೆಯಾಗಿದ್ರೆ  ವಿವಿಧ ಕಲ್ಯಾಣ ಯೋಜನೆಗಳ ಸಹಾಯಧನ ಫಲಾನುಭವಿಗಳಿಗೆ ವರ್ಗಾಯಿಸೋವಾಗ ಆ ಪ್ರಕ್ರಿಯೆ ಯಾವ ಹಂತದಲ್ಲಿದೆ ಎಂದು ಪರಿಶೀಲಿಸಲು ಸರ್ಕಾರಕ್ಕೆ ನೆರವಾಗಲಿದೆ. ಅಲ್ಲದೆ, ಸಹಾಯಧನವನ್ನು ಫಲಾನುಭವಿಗಳಿಗೆ ಸರಿಯಾದ ಸಮಯಕ್ಕೆ ತಲುಪಿಸಲು ಕೂಡ ಇದು ಸಹಾಯ ಮಾಡಲಿದೆ.


 

click me!