Pigcasso: ಪೇಂಟಿಂಗ್ ಮಾಡಿ 10 ಕೋಟಿಗೂ ಅಧಿಕ ಹಣ ಗಳಿಸಿದ ಹಂದಿ

By Suvarna NewsFirst Published Jul 29, 2023, 5:49 PM IST
Highlights

ಹಂದಿ ಕಾಯೋಕೆ ಹೋಗು ಎಂದು ಹೇಳುವ ಮೊದಲು ಸ್ವಲ್ಪ ಎಚ್ಚರವಹಿಸಿ. ಹಂದಿ ಯಾವುದಕ್ಕೂ ಲಾಯಕ್ಕಿಲ್ಲ ಎಂಬುದು ಸುಳ್ಳು. ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುವ ಹಂದಿಯೊಂದು ಇಲ್ಲಿದೆ. ಅದರ ಸಾಧನೆ ನೋಡಿದ್ರೆ ಹುಬ್ಬೇರಿಸುತ್ತೀರಿ. 
 

ಹಂದಿ ಹಂಗೆ ಇದಿಯಾ, ಯಾವ ಕೆಲಸಕ್ಕೂ ಲಾಯಕ್ಕಿಲ್ಲ ಅಂತಾ ನಾವೆಲ್ಲ ಬಯ್ತೇವೆ. ಹಿಂದಿ ಪದ ಸುವರ್ ಅನ್ನೋದನ್ನು ಬಹತೇಕರು ತಮ್ಮ ಬೈಗುಳದಲ್ಲಿ ಸೇರಿಸಿಕೊಳ್ತಾರೆ. ಕೆಸರಿನಲ್ಲಿ ಹೊರಳಾಡ್ತಾ, ತನ್ನ ಮೈ ಕೈಗಳನ್ನು ಕೊಳಕು ಮಾಡಿಕೊಂಡು ಓಡಾಡುವ ಅಸಹ್ಯಕರ ಪ್ರಾಣಿ ಹಂದಿ. ಹಾಗಂತ ಎಲ್ಲ ಹಂದಿಗಳನ್ನು ನೀವು ಈ ಪಟ್ಟಿಯಲ್ಲಿ ಸೇರಿಸಲು ಸಾಧ್ಯವಿಲ್ಲ. ತನ್ನ ಟ್ಯಾಲೆಂಟ್ ನಿಂದ ಲಕ್ಷಾಂತರ ರೂಪಾಯಿ ಗಳಿಸುವ ಹಂದಿಯೊಂದಿದೆ.
ನೀವು ಧರ್ಮೇಂದ್ರ (Dharmendra) ಅಭಿನಯದ ಯಮಲಾ ಪಗಲಾ ದಿವಾನಾ 2 ಸಿನಿಮಾ ನೋಡಿರಬಹುದು. ಅದ್ರಲ್ಲಿ ಮಂಗವೊಂದು ಪೇಟಿಂಗ್ ಮಾಡ್ತಾ ಪ್ರಸಿದ್ಧಿ ಪಡೆಯುತ್ತದೆ. ಇದೇ ರೀತಿ ಹಂದಿಯೊಂದು ತನ್ನ ಪೇಟಿಂಗ್ ಮೂಲಕ ಹೆಸರು ಮಾಡಿದೆ. ಯಾವುದು ಆ ಹಂದಿ ಹಾಗೇ ಅದ್ರ ಪೇಟಿಂಗ್ (painting) ಎಷ್ಟಕ್ಕೆ ಮಾರಾಟ ಆಗುತ್ತೆ ಅನ್ನೋದನ್ನು ನಾವು ಹೇಳ್ತೇವೆ.

ಪೇಟಿಂಗ್ ಮಾಡೋ ಹಂದಿ (Pig) ಯಾವುದು? : ಜಗತ್ತಿನಲ್ಲಿ ಪ್ರತಿ ಚಿತ್ರವನ್ನು ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುವ ಪೇಂಟರ್ಸ್ ಇದ್ದಾರೆ. ಕೆಲವು ವರ್ಣಚಿತ್ರಕಾರರ ವರ್ಣಚಿತ್ರಗಳು ಬಹಳ ವಿಚಿತ್ರವಾಗಿರುತ್ತವೆ. ಅದನ್ನು ಎಲ್ಲರಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಚಿತ್ರಕಲೆಯ ಬಗ್ಗೆ ಜ್ಞಾನ ಹೊಂದಿರುವವರಿಗೆ ಮಾತ್ರ ಇದು ಅರ್ಥವಾಗುತ್ತದೆ. ಅದನ್ನು ಅವರು  ದುಬಾರಿ ಬೆಲೆಗೆ ಖರೀದಿ ಮಾಡ್ತಾರೆ. ಪೇಂಟಿಂಗ್ ಕೂಡ ಲಕ್ಷ-ಕೋಟಿಗಳಲ್ಲಿ ಮಾರಾಟವಾಗುತ್ತದೆ. ಮನುಷ್ಯರು ಪೇಟಿಂಗ್ ಮಾಡೋದು ಮಾಮೂಲಿ. ಆದ್ರೆ ಇಲ್ಲಿ ಪೇಟಿಂಗ್ ಮಾಡುತ್ತಿರೋದು ಹಂದಿ. ಅದರ  ಹೆಸರು  ಪಿಗ್ಕಾಸೊ. ಈ ಹಂದಿ ಈಗ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ತನ್ನ ಭಿನ್ನ ಚಿತ್ರಗಳ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದೆ. ದಕ್ಷಿಣ ಆಫ್ರಿಕಾದ ನಿವಾಸಿ ಜೋನ್ನೆ ಲೆಫ್ಸನ್ ಇದನ್ನು ಸಾಕಿದ್ದಾರೆ.

Latest Videos

PM MATRITVA VANDANA YOJANA: ಈ ಯೋಜನೆಯಲ್ಲಿ ಮಹಿಳೆಯರಿಗೆ ಸಿಗುತ್ತೆ 6 ಸಾವಿರ ರೂ.

ಹಂದಿ ಚಿತ್ರಕಲೆ ಜೀವನ ಶುರುವಾಗಿದ್ದು ಹೀಗೆ : ಪಿಗ್ಕಾಸೊ ಹಂದಿಯ ಮಾಲೀಕ ದಕ್ಷಿಣ ಆಫ್ರಿಕಾದ ನಿವಾಸಿ ಜೋನ್ನೆ ಲೆಫ್ಸನ್ ಒಬ್ಬ ಕಲಾವಿದರು. ಜೋನ್ನೆ ಲೆಫ್ಸನ್ ಗೆ ಈಗ 50 ವರ್ಷ. ಜೋನ್ನೆ ಮತ್ತು ಈ ಹಂದಿ ಸುಮಾರು 7 ವರ್ಷಗಳ ಹಿಂದೆ ಅಂದರೆ 2016 ರಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಆಗ ಹಂದಿಯ ಪ್ರಾಣಕ್ಕೆ ಅಪಾಯವಿತ್ತು. ಅದನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗಲಾಗಿತ್ತು. ಈ ವೇಳೆ ಜೋನ್ನೆ ಹಂದಿಯನ್ನು ಉಳಿಸಿ ತನ್ನೊಂದಿಗೆ ತಂದಳು. ಅಂದಿನಿಂದ ಜೋನ್ನೆ ಜೊತೆಯೇ ಹಂದಿ ವಾಸವಾಗಿದೆ. ಜೋನ್ನೆ ಪೇಟಿಂಗ್ ಮಾಡ್ತಿದ್ದ ವೇಳೆ ಹಂದಿ ಬ್ರಷ್‌ನೊಂದಿಗೆ ಆಡುವುದನ್ನು ನೋಡಿದ್ದಳು. ನಂತ್ರ ಹಂದಿಗೆ ಬ್ರೆಷ್ ನೀಡಿ, ಚಿತ್ರ ಬಿಡಿಸಲು ಪ್ರೋತ್ಸಾಹಿಸಿದ್ದಳು. 

Subway Offer: ಹೀಗೆ ಮಾಡಿದ್ರೆ ಜೀವನ ಪರ್ಯಂತ ಸಿಗುತ್ತೆ ಉಚಿತ ಸ್ಯಾಂಡ್ವಿಚ್!

ಹಂದಿಗೆ ಕಲೆ ಮೇಲೆ ಆಸಕ್ತಿಯನ್ನು ಎಂಬುದನ್ನು ಅರಿತ ಜೋನ್ನೆ ಮಾರುಕಟ್ಟೆಯಿಂದ ಕ್ಯಾನ್ವಾಸ್ ತಂದಿದ್ದಳು. ಅದ್ರಲ್ಲಿಯೇ  ಚಿತ್ರ ಬಿಡಿಸುವಂತೆ ಜೋನ್ನೆ ಸೂಚಿಸಿದ್ದಳು. ನಂತ್ರ ಹಂದಿ ಬರೆದ ಚಿತ್ರಗಳನ್ನು ಮಾರುವ ನಿರ್ಧಾರಕ್ಕೆ ಜೋನ್ನೆ ಬಂದಿದ್ದಳು. ಹಂದಿ ಬಿಡಿಸಿದ ಚಿತ್ರಗಳಲ್ಲಿ ಯಾವುದೇ ಅರ್ಥವಿರೋದಿಲ್ಲ. ಬಣ್ಣದ ಬ್ರೆಷ್ ಹಿಡಿದು ಹಂದಿ ಕಂಡಿದ್ದನ್ನು ಗೀಚುತ್ತದೆ. ತನ್ನ ಮುಖಕ್ಕೆ ಪೇಟಿಂಗ್ ಮೆತ್ತಿಕೊಂಡು ಅದನ್ನು ಕ್ಯಾನ್ವಾಸ್ ಗೆ ಹಚ್ಚಿ ಪೇಟಿಂಗ್ ಮಾಡುತ್ತದೆ.

ದುಬಾರಿ ಬೆಲೆಗೆ ಪೇಟಿಂಗ್ ಮಾರಾಟ : ಪಿಗ್ಕಾಸೋ ಈವರೆಗೆ 400ಕ್ಕೂ ಹೆಚ್ಚು ಪೇಟಿಂಗ್ ರಚಿಸಿದೆ. ಸಾಮಾಜಿಕ ಜಾಲತಾಣದಲ್ಲೂ ಪಿಗ್ಕಾಸೋ ಮಾಡಿದ ಪೇಟಿಂಗ್ ವಿಡಿಯೋ ವೈರಲ್ ಆಗ್ತಿರುತ್ತವೆ. ಅದನ್ನು ನೋಡಿದ ಜನರು ಬೆಲೆ ಕಟ್ಟುತ್ತಾರೆ. ಕೆಲವೊಂದು ಪೇಟಿಂಗ್ 20 ಲಕ್ಷಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗ್ತಿದೆ. ಪಿಗ್ಕಾಸೋ ಈವರೆಗೆ ತಯಾರಿಸಿದ ಒಟ್ಟೂ ಪೇಟಿಂಗ್ ನಿಂದ ಸುಮಾರು 10 ಕೋಟಿಗೂ ಹೆಚ್ಚು ಹಣವನ್ನು ಸಂಪಾದಿಸಿದ್ದಾನೆ.

 
 
 
 
 
 
 
 
 
 
 
 
 
 
 

A post shared by Pigcasso (@pigcassohoghero)

click me!