150 ರೂಪಾಯಿ ಆದಾಯದ ಸೈಕಲ್ ರಿಕ್ಷಾ ಚಾಲಕನಿಗೆ 3 ಕೋಟಿ ರೂ ತೆರಿಗೆ ವಿಧಿಸಿದ IT ಇಲಾಖೆ!

By Suvarna NewsFirst Published Oct 25, 2021, 6:19 PM IST
Highlights
  • ಬಡ ಸೈಕಲ್ ರಿಕ್ಷಾ ವಾಲಾಗೆ ಆದಾಯ ಇಲಾಖೆಯಿಂದ ಶಾಕ್
  • 3 ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ನೊಟೀಸ್
  • 150 ರೂಪಾಯಿ ಆದಾಯ ಪಡೆಯುವ ರಿಕ್ಷಾ ಚಾಲಕ ಕಂಗಾಲು
  • ಪೊಲೀಸ್ ಠಾಣೆ ಮೆಟ್ಟಿಲೇರಿದ ಬಡ ಸೈಕಲ್ ರಿಕ್ಷಾ ಚಾಲಕ

ಮಥುರಾ(ಅ.25): ಆದಾಯ ತೆರಿಗೆ(Income Tax Department) ಇಲಾಖೆಯಿಂದ ತಪ್ಪಾಗಿ ನೊಟೀಸ್ ನೀಡಿದ ಉದಾಹರಣಗಳು ಕಡಿಮೆ. ಅಂಕಿ ಸಂಖ್ಯೆಯಲ್ಲಿ ಆದಾಯ ತೆರಿಗೆ ಇಲಾಖೆ ಪಕ್ಕಾ. ಇತ್ತ  ಹೊಸ ವೆಬ್‌ಸೈಟ್ ಬಿಡುಗಡೆ ಮಾಡಿ ತೆರಿಗೆ ಪಾವತಿಯನ್ನು ಸರಳಗೊಳಿಸಿದೆ. ಇದರ ನಡುವೆ ಐಟಿ ಇಲಾಖೆಯಿಂದ(IT) ಅಚಾತುರ್ಯವೊಂದು ನಡೆದು ಹೋಗಿದೆ. ಬಡ ರಿಕ್ಷಾ ಚಾಲಕನಿಗೆ(Rickshaw puller) ಬಾಕಿ ಉಳಿಸಿಕೊಂಡಿರುವ 3 ಕೋಟಿ ರೂಪಾಯಿ ತೆರಿಗೆ(Tax) ಕಟ್ಟುವಂತೆ ನೊಟೀಸ್ ನೀಡಿದ ಘಟನೆ ವರದಿಯಾಗಿದೆ. 

ಆದಾಯ ತೆರಿಗೆ ಹೊಸ ಪೋರ್ಟಲ್ ಮೂಲಕ 2 ಕೋಟಿಗೂ ಅಧಿಕ ITR ಸಲ್ಲಿಕೆ!

ಉತ್ತರ ಪ್ರದೇಶದ(Uttar Pradesh) ಮಥುರಾದ ಅಮರ್ ಕಾಲೋನಿ ನಿವಾಸಿ ಪ್ರತಾಪ್ ಸಿಂಗ್ ಸೈಕಲ್ ರಿಕ್ಷಾ ಚಾಲಕನಾಗಿ ಜೀವನ ಸಾಗಿಸುತ್ತಿದ್ದಾರೆ. ಕೊರೋನಾ, ಲಾಕ್‌ಡೌನ್, ಆರ್ಥಿಕ ಹೊಡೆತ ಸೇರಿದಂತೆ ಹಲವು ಅಡೆತಡೆಗಳಿಂದ ಪ್ರತಾಪ್ ಸಿಂಗ್ ದಿನಕ್ಕೆ 150 ರೂಪಾಯಿ ಸಂಪಾದಿಸುವುದು ಕಷ್ಟವಾಗಿದೆ. 2020ರಿಂದ ಕಳೆದ ಜೂನ್ ತಿಂಗಳ ವರೆಗೆ ಆದಾಯವಿಲ್ಲದೆ ಕೇಂದ್ರ ನೀಡಿದ ಪಡಿತರ ಅಕ್ಕಿಯಲ್ಲಿ ದಿನ ದೂಡಿದ ಕುಟುಂಬ. ಆದರೆ ಈ ಬಡ ಪ್ರತಾಪ್ ಸಿಂಗ್‌ಗೆ 3 ಕೋಟಿ ರೂಪಾಯಿ ತೆರಿಗೆ ಕಟ್ಟುವಂತೆ ಆದಾಯ ತೆರಿಗೆ ಇಲಾಖೆ ನೊಟೀಸ್ ನೀಡಿದೆ. ಈ ನೊಟೀಸ್ ನೋಡಿದ ಪ್ರತಾಪ್ ಸಿಂಗ್ ಕಂಗಾಲಾಗಿದ್ದಾನೆ. ಆತಂಕಗೊಂಡು ನೇರವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

IT Raid| ಐಟಿ ದಾಳಿಯಲ್ಲಿ ಗುತ್ತಿಗೆದಾರರ 750 ಕೋಟಿ ಅಕ್ರಮ ಆಸ್ತಿ ಪತ್ತೆ!

ರಿಕ್ಷಾ ಚಾಲಕನಿಗೆ ನೊಟೀಸ್ ಹಿಂದಿನ ಸೀಕ್ರೆಟ್:
ಸೈಕಲ್ ರಿಕ್ಷಾ ಚಾಲಕನ ಬ್ಯಾಂಕ್ ಖಾತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲು ಬ್ಯಾಂಕ್ ಅಧಿಕಾರಿಗಳು ಸೂಚಿಸಿದ್ದಾರೆ. ಇದುವರೆಗೂ ಪ್ಯಾನ್ ಕಾರ್ಡ್ ಇಲ್ಲದ ಪ್ರತಾಪ್ ಸಿಂಗ್, ಹೊಸ ಪ್ಯಾನ್ ಕಾರ್ಡ್ ಮಾಡಲು ಬಕಲಪುರದಲ್ಲಿರುವ ತೇಜ್ ಪ್ರಕಾಶ್ ಉಪಾಧ್ಯಾಯ ಮಾಲೀಕತ್ವದಲ್ಲಿರುವ ಜಾನ್ ಸುವಿಧಾ ಕೇಂದ್ರಕ್ಕೆ ತೆರಳಿದ್ದಾರೆ.

ಈ ಕೇಂದ್ರದಲ್ಲಿನ ಸಿಬ್ಬಂಧಿಗಳು ಕೇಳಿದ ದಾಖಲೆ ಪತ್ರಗಳನ್ನು, ಮೊಬೈಲ್ ನಂಬರ್ ನೀಡಿದ ಬಳಿಕ ಪ್ರತಾಪ್ ಸಿಂಗ್ ತಮ್ಮ ಕಾರ್ಯಕ್ಕೆ ಮರಳಿದ್ದಾರೆ. ಕೆಲ ದಿನಗಳ ಬಳಿಕ ಮತ್ತೆ ಕೇಂದ್ರಕ್ಕೆ ತೆರಳಿದ ಪ್ರತಾಪ್ ಸಿಂಗ್‌ಗೆ ಪಾನ್‌ಕಾರ್ಡ್‌ನ ಕಲರ್ ಫೋಟೋಕಾಪಿ(ಝೆರಾಕ್ಸ್) ನೀಡಿದ್ದಾರೆ. ಪ್ಯಾನ್ ಕಾರ್ಡ್ ಕುರಿತು ಅರಿವಿಲ್ಲದ ಪ್ರತಾಪ್ ಸಿಂಗ್, ಕಲರ್ ಝೆರಾಕ್ಸ್ ಹಿಡಿದು ವಾಪಾಸ್ಸಾಗಿದ್ದಾರೆ. ಎಡವಟ್ಟಾಗಿದ್ದು ಇಲ್ಲೇ ನೋಡಿ.

ಕಪಾಟಿನ ತುಂಬಾ  ನೋಟಿನ ಕಂತೆ ಕಂತೆ... ಇವರು ಬಟ್ಟೆ ಎಲ್ಲಿ ಇಡ್ತಾರೆ!

ಪ್ರತಾಪ್ ಸಿಂಗ್ ಒರಿಜನಲ್ ಪಾನ್ ಕಾರ್ಡ್ ಎಗರಿಸಿದ ಖದೀಮರು, ಈ ಪಾನ್‌ಕಾರ್ಡ್‌ನಲ್ಲಿ ಜಿಎಸ್‌ಟಿ ನಂಬರ್ ಪಡೆದುಕೊಂಡಿದ್ದಾರೆ. ಬಳಿಕ ಕೆಲ ವಹಿವಾಟು ನಡೆಸಿದ್ದಾರೆ. ಈ ಖದೀಮರ ವಹಿಪಾಟು ಬರೋಬ್ಬರಿ 43 ಕೋಟಿ ರೂಪಾಯಿ. 2018-19ರ ಸಾಲಿನಲ್ಲಿ ಈ ಎಲ್ಲಾ ವ್ಯವಹಾರಗಳನ್ನು ಬಡ ಸೈಕಲ್ ರಿಕ್ಷಾ ಚಾಲಕನ ಪಾನ್ ಕಾರ್ಡ್ ಮೂಲಕ ನಡೆಸಲಾಗಿದೆ. 43,44,36,201 ರೂಪಾಯಿ ವಹಿವಾಟು ನಡೆಸಿರುವುದಕ್ಕೆ 3 ಕೋಟಿ ರೂಪಾಯಿ ತೆರಿಗೆ ಹಾಕಿ ನೊಟೀಸ್ ನೀಡಿದೆ.

ಪಾನ್ ಕಾರ್ಡ್ ಆಧರಿ ಆದಾಯ ತೆರಿಗೆ ಇಲಾಖೆ ನೊಟೀಸ್ ನೀಡಿದೆ. ಈ ವೇಳೆ ಇದರ ಹಿಂದಿನ ವಂಚನೆ ಸ್ಟೋರಿ ಬಯಲಾಗಿದೆ. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಪ್ರತಾಪ್ ಸಿಂಗ್ ಬಳಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಇತ್ತ ಪ್ರತಾಪ್ ಸಿಂಗ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿರುವ ಮಾಹಿತಿಯನ್ನು ಪಡೆದಿರುವ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. 

click me!