ದುಬೈನಿಂದ ಭಾರತದಲ್ಲಿರೋ ಮನೆ ನಿಯಂತ್ರಣ: ಪಾಲಿಕಾಬ್ HOHM ಅಟೋಮೇಶನ್‌ನಿಂದ ಸಾಕಾರ!

By Suvarna NewsFirst Published Aug 13, 2021, 12:36 PM IST
Highlights

ಫಾರಿನ್‌ನಲ್ಲಿ ಕೆಲಸ ಮಾಡೋ ಕನಸು ಬಹುತೇಕ ಭಾರತೀಯರಿದ್ದು. ಆದರೆ, ಭಾರತದಲ್ಲಿ ಕಷ್ಟಪಟ್ಟು ಕಟ್ಟಿರುವ ಮನೆಯನ್ನು ಅನಾಥ ಮಾಡಲು ಮನಸ್ಸು ಇರುವುದಿಲ್ಲ. ಇದಕ್ಕೆ ಪರಿಹಾರವೆಂಬಂತೆ, ಅನ್ಯ ದೇಶದಲ್ಲಿಯೇ ಇದ್ದುಕೊಂಡು ಮನೆಯನ್ನು ನಿಯಂತ್ರಿಸುವ ಸೌಲಭ್ಯವನ್ನು HOHM ಪಾಲಿಕ್ಯಾಬ್ ಒದಗಿಸುತ್ತಿದೆ. 

ವಿದೇಶದಲ್ಲಿ ಕೈತುಂಬ ಸಂಬಳದ ಉದ್ಯೋಗ ಬಹುತೇಕರ ಕನಸು. ಈ ಕನಸು ಸಾಕಾರಗೊಳಿಸಲು ವಿದೇಶಕ್ಕೆ ತೆರಳಿದಾಗ ಎದುರಾಗವುದು ಬಹು ದೊಡ್ಡ ಸಮಸ್ಯೆ ಹಾಗೂ ಸವಾಲು ತಮ್ಮ ಊರಿನಲ್ಲಿರುವ ಮನೆಯ ನಿರ್ವಹಣೆ. ಭಾರತದಲ್ಲಿರುವ ಮನೆ ಹಾಗೂ ಮನೆಯಲ್ಲಿರುವ ವಸ್ತುಗಳು ಸರಿಯಾದ ಆರೈಕೆ ಹಾಗೂ ನಿರ್ವಹಣೆ ಇಲ್ಲದೆ ಸಮಸ್ಯೆಗಳು ಉದ್ಬವಿಸುತ್ತವೆ. ಅದರಲ್ಲೂ ಪ್ರಮುಖವಾಗಿ ಮನೆಯಲ್ಲಿ ಅಳವಡಿಸಿರುವ ಫ್ಯಾನ್, ಲೈಟ್, ಸ್ವಿಚ್, ವಾಟರ್ ಹೀಟರ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಹೆಚ್ಚು ದಿನ ಬಳಕೆ ಮಾಡದಿದ್ದರೆ, ಕೆಟ್ಟು ಹೋಗಲಿದೆ.

ಈ ಸಮಸ್ಯೆ ಪರಿಹರಿಸಲು ಇದೀಗ ಸ್ಮಾರ್ಟ್ ತಂತ್ರಜ್ಞಾನ ಪರಿಚಯಿಸಲಾಗಿದೆ. ಇದು ಸ್ಮಾರ್ಟ್ ಹೋಮ್ ಆಟೊಮೇಷನ್ ಪರಿಕಲ್ಪನೆ.  ಇದರಿಂದ ಯಾವುದೇ ಚಿಂತೆ ಇಲ್ಲದೆಯೂ ವಿದೇಶದ ಯಾವ ಮೂಲೆಯಿಂದಲೂ ಭಾರತದಲ್ಲಿರುವ ಮನೆ ನಿರ್ವಹಣೆ ಹಾಗೂ ನಿಯಂತ್ರಣ ಸಾಧ್ಯ. IoT ಎಂದು ಜನಪ್ರಿಯವಾಗಿ ವರ್ಗೀಕರಿಸಲಾದ ಸಂಪರ್ಕಿತ ಸಾಧನಗಳನ್ನು ಅಳವಡಿಸಿರುವ ಸಂವೇದಕಗಳಿಂದ ಈ ಸ್ಮಾರ್ಟ್ ಹೋಮ್ ಆಟೋಮೇಶನ್ ಕಾರ್ಯನಿರ್ವಹಿಸುತ್ತದೆ. ಮೊಬೈಲ್ ಆ್ಯಪ್ ಯೂಸರ್ ಇಂಟರ್ಫೇಸ್ ಮೂಲಕ ಸರಳ ಹಾಗೂ ಸುಲಭವಾಗಿ ಯಾರ ನೆರವೂ ಇಲ್ಲದೇ ಮನೆ ನಿರ್ವಹಣೆ ಸಾಧ್ಯವಿದೆ.

ವಿಶ್ವದ ಯಾವುದೇ ಮೂಲೆಯಿಂದ ಭಾರತದಲ್ಲಿರುವ ಮನೆ ನಿಯಂತ್ರಣ ಹಾಗೂ ವಸ್ತುಗಳ ನಿರ್ವಹಿಸಲು ಸಾಧ್ಯವಾಗಿರುವುದು ಪಾಲಿಕ್ಯಾಬ್  HOHM ಅಟೋಮೇಶನ್‌ ತಂತ್ರಜ್ಞಾನದಿಂದ. HOHM ಸ್ಮಾರ್ಟ್ ಅಟೋಮೇಶನ್‌ ಪಾಲಿಕ್ಯಾಬ್‌ನ ಕೊಡುಗೆ. ಈ ತಂತ್ರಜ್ಞಾನ ನೀವು ನೀಡುವ ಆಜ್ಞೆಯನ್ನು ಪಾಲಿಸುತ್ತದೆ. ನೀವು ಯಾವುದೇ ದೇಶದಿಂದ ನಿಮ್ಮ ಮನೆಯ ಕೋಣೆ, ಮನರಂಜನೆಗಳ ಅನುಭವ ಪಡೆಯಬಹುದು. ಫ್ಯಾನ್ಸ್, ಲೈಟಿಂಗ್, ಸ್ವಿಚ್‌ಗಳು, ವಾಟರ್ ಹೀಟರ್‌ಗಳು ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು HOHM ನ ಆಟೊಮೇಷನ್ ಸಾಮರ್ಥ್ಯದ ಮೂಲಕ ನಿರ್ವಹಣೆಯಾಗಲಿದೆ. ಮೊಬೈಲ್ ಆ್ಯಪ್ ಹಾಗೂ ವಾಯ್ಸ್ ಕಂಟ್ರೋಲ್ ಮೂಲಕ ನಿಮ್ಮ ಮನೆಯ ಆನಂದವನ್ನು ಅನುಭವಿಸಬಹುದು. ಈ ಮೂಲಕ ಜೀವನವನ್ನು ಆರಾಮದಾಯಕ ಹಾಗೂ ಮನೆಯನ್ನು ಸುರಕ್ಷಿತವಾಗಿಸಬಹುದು.

ಪಾಲಿಕಾಬ್ HOHM ಅಟೋಮೇಶನ್‌ ಫೀಚರ್ಸ್
*ಎಲ್ಲಾ HOHM ಉತ್ಪನ್ನಗಳು ಒಂದಕ್ಕೊಂದು ಸಂಪರ್ಕ ಸಾಧಿಸಿ ಸಂವಹನ ಸಾಧಿಸುತ್ತದೆ. ಇದರಿಂದ ಮನೆ ನಿರ್ವಹಣೆ ಅತ್ಯಂತ ಸುಲಭ ಹಾಗೂ ಸರಳವಾಗಲಿದೆ
*HOHM ಆಟೋಮೇಶನ್ ಮೂಲಕ ಎಲ್ಲಾ ಸ್ಮಾರ್ಟ್ ಉತ್ಪನ್ನ ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದಕ್ಕೆ ಒಂದೇ ಆ್ಯಪ್ಲಿಕೇಶನ್ ಮತ್ತು AI ಸಕ್ರಿಯಗೊಳಿಸಿದ ಸ್ಪೀಕರ್‌ ನೆರವಾಗುತ್ತದೆ.
*ನಿಮಗೆ ದಿನದ 24 ಗಂಟೆ ಸೇವೆ ಒದಗಿಸಲು ಈ ಕಂಪನಿಯ ಗ್ರಾಹಕ ಸೇವಾ ತಂಡ ಸದಾ ಸಿದ್ಧವಿರಲಿದೆ.
*ಯಾವುದೇ ಚಿಂತೆ ಇಲ್ಲದೆ ಸ್ಮಾರ್ಟ್ HOHM ಆನಂದಿಸಲು ಸಾಧ್ಯವಿದೆ. ನಮ್ಮ ಗ್ರಾಹಕ ಸೇವಾ ತಂಡ ವಾರೆಂಟಿ ಮುಗಿದ ಬಳಿಕವೂ ಕಡಿಮೆ ಬೆಲೆಯಲ್ಲಿ ಸೇವೆ ನೀಡಲಿದೆ.
*ಈ ತಂತ್ರಜ್ಞಾನದಿಂದ ಮನೆಯ ನಿಯಂತ್ರಣ, ಸ್ವಿಚ್ ಬದಲಾವಣೆ ಸುಲಭ ಸಾಧ್ಯ. ಇದಕ್ಕೆ ವೈರ್ ಮೂಲಕ ಕಾರ್ಯಸಾಧನೆಯ ಅವಶ್ಯಕತೆ ಇಲ್ಲ.
*ಹೋಮ್ ಸ್ವಿಚ್‌ಬೋರ್ಡ್ ಮತ್ತು ಸ್ಮಾರ್ಟ್ ಇಂಟಿಗ್ರೇಟೆಡ್ ಪ್ಯಾನೆಲ್ ವಿನ್ಯಾಸಗಳನ್ನು ನಿಮ್ಮ ಒಳಾಂಗಣದೊಂದಿಗೆ ನೀಡಲಾಗುತ್ತದೆ. ಕಾಂಕ್ರಿಟ್, ಬ್ರಿಕ್, ಮಾರ್ಬಲ್ , ಗ್ಲಾಸ್ , ಕೊರಿಯನ್ ಮತ್ತು ವುಡನ್‌ನಂತಹ ವಿವಿದ ವಿನ್ಯಾಸಗಳಲ್ಲಿ ನೀಡಲು ಸಾಧ್ಯ.
*ಎಲ್ಲಾ HOHM ಸಾಧನಗಳನ್ನು ಮತ್ತೆ ಅಳವಡಿಸಲು ಸಾಧ್ಯವಿದೆ. ಇದರಿಂದ ಯಾವುದೇ ರಿವೈರಿಂಗ್ ಅಗತ್ಯವಿಲ್ಲ

ಪಾಲಿಕಾಬ್ HOHM ತಂತ್ರಜ್ಞಾನದ ಅಡಿಯಲ್ಲಿ ಕೆಲವು ಜನಪ್ರಿಯ ಸ್ಮಾರ್ಟ್ ಹೋಮ್ ಸ್ವಯಂಚಾಲಿತ ಉಪಕರಣಗಳು ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ ಫ್ಯಾನ್‌ಗಳು, ಸ್ಮಾರ್ಟ್ ಲೈಟಿಂಗ್, ಸ್ಮಾರ್ಟ್ ಸ್ವಿಚ್‌ಗಳು, ಸ್ಮಾರ್ಟ್ ವಾಟರ್ ಹೀಟರ್‌ಗಳು, IR ಬ್ಲಾಸ್ಟರ್ ಮತ್ತು ಸ್ಮಾರ್ಟ್ ಪ್ಲಗ್‌ಗಳು  ಈ ಎಲ್ಲಾ ಸ್ಮಾರ್ಟ್ ಹೋಮ್ ಸಾಧನಗಳ ಮೇಲೆ ರಿಮೋಟ್ ಕಂಟ್ರೋಲ್‌ನಿಂದ ನಿಯಂತ್ರಿಸಬಲ್ಲ ಐಆರ್ ಬ್ಲಾಸ್ಟರ್ ಆಗಿದೆ.
 

ಸ್ಮಾರ್ಟ್ ಹೋಮ್ ವಿದೇಶಗಳಲ್ಲಿ ಸಾಮಾನ್ಯ. ಅದರಲ್ಲೂ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದರ ಬಳಕೆ ಹೆಚ್ಚಿದೆ. ಇದೀಗ ಭಾರತದಲ್ಲೂ ಸ್ಮಾರ್ಟ್ HOHM ಎಲ್ಲರ  ಗಮನ ಸೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಈ ಹಾದಿ ಅತ್ಯಂತ ರೋಚವಾಗಿದೆ. ಇಷ್ಟೇ ಅಲ್ಲ ಪಾಲಿಕ್ಯಾಬ್ HOHM ಈ ವಿಭಾಗದಲ್ಲಿ ಅಗ್ರಜನಾಗಲಿದೆ.

click me!