ಗ್ರಾಚ್ಯುಟಿ ಲೆಕ್ಕ ಹಾಕೋದು ಹೇಗೆ? ಇಲ್ಲಿದೆ ನೋಡಿ ಸರಳ ಸೂತ್ರ…

By Suvarna News  |  First Published Aug 11, 2021, 5:07 PM IST

ಗ್ರಾಚ್ಯುಟಿ ಅನ್ನೋದು ಕೇವಲ ಒಂದು ಮೊತ್ತವಷ್ಟೇ ಅಲ್ಲ,ಅದು ಆ ಸಂಸ್ಥೆಗೆ ಉದ್ಯೋಗಿ ನೀಡಿರೋ ಸೇವೆಗೆ ಸಿಗೋ ಬಹುಮಾನವೂ ಹೌದು. ಹೀಗಾಗಿ ಗ್ರ್ಯಾಚುಟಿ ಬಗ್ಗೆ ಪ್ರತಿ ಉದ್ಯೋಗಿ ಮಾಹಿತಿ ಹೊಂದಿರೋದು ಅಗತ್ಯ.


ಪ್ರತಿ ಉದ್ಯೋಗಿಯೂ ಗ್ರಾಚ್ಯುಟಿ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಗ್ರಾಚ್ಯುಟಿ ವೇತನದ ಒಂದು ಭಾಗವೇ ಆಗಿದ್ದು,ಇದನ್ನು ಉದ್ಯೋಗಿಗೆ ಉದ್ಯೋಗದಾತ ಸಂಸ್ಥೆ ಆತ ಸಲ್ಲಿಸಿರೋ ಸೇವೆ ಅಥವಾ ಕಾರ್ಯವನ್ನು ಪರಿಗಣಿಸಿ ನೀಡೋ ಕೊಡುಗೆಯಾಗಿದೆ. ಉದ್ಯೋಗ ತ್ಯಜಿಸಿದ ಬಳಿಕ ಉದ್ಯೋಗದಾತ ಸಂಸ್ಥೆಯಿಂದ ಉದ್ಯೋಗಿ ಪಡೆಯೋ ಅತಿದೊಡ್ಡ ಪ್ರೋತ್ಸಾಹಧನವೇ ಗ್ರಾಚ್ಯುಟಿ ಎನ್ನಬಹುದು. 

ತಿಂಗಳಿಗೆ 42 ರೂ. ಪಾವತಿಸಿದ್ರೆ ಸಾಕು, ನೆಮ್ಮದಿಯ ನಿವೃತ್ತಿ ಬದುಕು ನಿಮ್ಮದು!

Tap to resize

Latest Videos

undefined

ಯಾರು ಅರ್ಹರು?
ಗ್ರಾಚ್ಯುಟಿ ಪಾವತಿ ಕಾಯ್ದೆ 1972ರ ಅನ್ವಯ 10 ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರೋ ಸಂಸ್ಥೆ ತನ್ನ ನೌಕರರಿಗೆ ಗ್ರಾಚ್ಯುಟಿ ಪಾವತಿಸಬೇಕು. ಉದ್ಯೋಗಿ ಒಂದು ಸಂಸ್ಥೆಯಲ್ಲಿ ನಿರಂತರ 5 ವರ್ಷ ಕಾರ್ಯನಿರ್ವಹಿಸಿದ್ರೆ ಮಾತ್ರ ಆತ ಗ್ರಾಚ್ಯುಟಿ ಪಡೆಯಲು ಅರ್ಹನಾಗಿರುತ್ತಾನೆ. ಆದ್ರೆ ಹೊಸ ವೇತನ ಸಂಹಿತೆ ಮಸೂದೆ 2021ರ ಅನ್ವಯ ಉದ್ಯೋಗಿ ಒಂದು ಸಂಸ್ಥೆಯಲ್ಲಿ ನಿರಂತರ ಒಂದು ವರ್ಷ ಸೇವೆ ಪೂರ್ಣಗೊಳಿಸಿದ್ರೂ ಗ್ರಾಚ್ಯುಟಿ ಪಡೆಯಲು ಅರ್ಹನಾಗಿರುತ್ತಾನೆ. ಆದ್ರೆ ಇದನ್ನು ಕಾಯ್ದೆಯಾಗಿ ಬಂದಿಲ್ಲವಾದ್ರಿಂದ ಸದ್ಯ 5 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಉದ್ಯೋಗಿ ಮಾತ್ರ ಗ್ರಾಚ್ಯುಟಿ ಪಡೆಯಲು ಅರ್ಹನಾಗಿದ್ದಾನೆ. ಉದ್ಯೋಗಿ ನಿಧನ ಹೊಂದಿದ್ರೆ, ಅಪಘಾತ ಅಥವಾ ಅನಾರೋಗ್ಯದಿಂದ ಅಂಗವೈಕಲ್ಯಕ್ಕೆ ತುತ್ತಾದ್ರೆ ಗ್ರಾಚ್ಯುಟಿ ಕಾಯ್ದೆ ಅನ್ವಯ ಆತ ಅಥವಾ ಆಕೆ 5 ವರ್ಷ ಸೇವೆ ಸಲ್ಲಿಸದಿದ್ರೂ ಗ್ರಾಚ್ಯುಟಿ ನೀಡಬೇಕು. ಒಂದೇ ಸಂಸ್ಥೆಯಲ್ಲಿ 4.6 ವರ್ಷ ನಿರಂತರ ಸೇವೆ ಸಲ್ಲಿಸಿದ್ರೂ ಅದನ್ನು 5 ವರ್ಷವೆಂದೇ ಪರಿಗಣಿಸೋ ಕಾರಣ ಅಂಥ ಉದ್ಯೋಗಿ ಕೂಡ ಗ್ರಾಚ್ಯುಟಿ ಪಡೆಯಲು ಅರ್ಹನಾಗಿದ್ದಾನೆ.

ಕಂಡಿದ್ದೆಲ್ಲ ಕೊಳ್ಳೋ ಅಭ್ಯಾಸನಾ? ಒಮ್ಮೆ ಇಲ್ಲಿ ಕಣ್ಣು ಹಾಯಿಸಿ

ಗ್ರಾಚ್ಯುಟಿ ಲೆಕ್ಕ ಹಾಕೋದು ಹೇಗೆ?
ಗ್ರಾಚ್ಯುಟಿ ಲೆಕ್ಕ ಹಾಕಲು ಆನ್ಲೈನ್ನಲ್ಲಿ ಕ್ಯಾಲ್ಕುಲೇಟರ್ಗಳು ಲಭ್ಯವಿವೆ. ಅವನ್ನು ಬಳಸಿ ಲೆಕ್ಕ ಹಾಕಬಹುದು. ನೀವು ಕೆಲಸ ನಿರ್ವಹಿಸುತ್ತಿರೋ ಸಂಸ್ಥೆಯ ಎಚ್ಆರ್ ಬಳಿ ಕೂಡ ಈ ಬಗ್ಗೆ ನಿಖರವಾದ ಮಾಹಿತಿಯಿರುತ್ತದೆ. ಹೀಗಾಗಿ ಅವರನ್ನು ಕೂಡ ವಿಚಾರಿಸಬಹುದು. ಇದ್ಯಾವುದೂ ಬೇಡವೆಂದ್ರೆ ನೀವೇ ಲೆಕ್ಕ ಹಾಕಬಹುದು. ಗ್ರಾಚ್ಯುಟಿ ಲೆಕ್ಕ ಹಾಕಲು ಒಂದು ಸೂತ್ರವಿದೆ. 
ಗ್ರಾಚ್ಯುಟಿ = ಕೊನೆಯದಾಗಿ ಲಭಿಸಿದ ವೇತನ ಘಿಸೇವೆ ಸಲ್ಲಿಸಿದ ಒಟ್ಟು ವರ್ಷ15  /26
ಉದಾಹರಣೆಗೆ ಒಬ್ಬ ವ್ಯಕ್ತಿ ಒಂದು ಸಂಸ್ಥೆಯಲ್ಲಿ 11 ವರ್ಷ ಕಾರ್ಯನಿರ್ವಹಿಸಿರುತ್ತಾನೆ. ಆತನ ಮಾಸಿಕ ವೇತನ 50,000 ರೂ. ಈಗ ಆತನ ಗ್ರಾಚ್ಯುಟಿ ಲೆಕ್ಕಾಚಾರ ಹೀಗಿರುತ್ತದೆ:
ಗ್ರಾಚ್ಯುಟಿ ಮೊತ್ತ:15 x 50,000 x 11/ 26= 3.17 ಲಕ್ಷ ರೂ. 

ನೋಟಿಸ್ ಅವಧಿಯನ್ನೂ ಪರಿಗಣಿಸುತ್ತಾರಾ?
ಹೌದು, ಗ್ರಾಚ್ಯುಟಿ ಲೆಕ್ಕ ಹಾಕೋವಾಗ ಕೆಲಸದ ಕೊನೆಯ ದಿನವನ್ನು ಕೂಡ ಪರಿಗಣಿಸುತ್ತಾರೆ. ಹೀಗಾಗಿ ನೋಟಿಸ್ ಅವಧಿಯಲ್ಲಿ ನೀವು ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರೋ ಕಾರಣ ಆ ಅವಧಿ ಕೂಡ ಗ್ರಾಚ್ಯುಟಿ ಲೆಕ್ಕ ಹಾಕೋವಾಗ ಪರಿಗಣಿಸಲ್ಪಡುತ್ತದೆ.
 

ರಾಜೀನಾಮೆ ನೀಡದಿದ್ರೂ ಸಿಗುತ್ತಾ?
ಒಂದೇ ಸಂಸ್ಥೆಯಲ್ಲಿ ಐದು ವರ್ಷ ಪೂರೈಸಿದ ಉದ್ಯೋಗಿ ರಾಜೀನಾಮೆ ನೀಡಿದ ಬಳಿಕವಷ್ಟೇ ಆತ ಗ್ರಾಚ್ಯುಟಿ ಪಡೆಯಲು ಅರ್ಹನಾಗಿರುತ್ತಾನೆ. ಹೀಗಾಗಿ ಅದೇ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರೋ ಸಮಯದಲ್ಲಿ ಗ್ರಾಚ್ಯುಟಿ ಪಡೆಯಲು ಸಾಧ್ಯವಿಲ್ಲ.

ಮಗು ನಿರೀಕ್ಷೆಯಲ್ಲಿರೋ ದಂಪತಿ ಫೈನಾನ್ಷಿಯಲ್‌ ಪ್ಲ್ಯಾನ್‌ ಹೇಗಿರಬೇಕು?

ಗ್ರಾಚ್ಯುಟಿ ನೀಡದಿದ್ರೆ ಏನ್ ಮಾಡ್ಬೇಕು?
ಒಂದು ವೇಳೆ ಉದ್ಯೋಗಿ ರಾಜೀನಾಮೆ ನೀಡಿದ ಬಳಿಕ ಆತ ಕಾರ್ಯನಿರ್ವಹಿಸುತ್ತಿದ್ದ ಸಂಸ್ಥೆ ಗ್ರಾಚ್ಯುಟಿ ಹಣ ನೀಡಲು ನಿರಾಕರಿಸಿದ್ರೆ ಗ್ರಾಚ್ಯುಟಿ ಕಾಯ್ದೆಯ ಸೆಕ್ಷನ್ 8ರಡಿಯಲ್ಲಿಉದ್ಯೋಗಿ ಆ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಬಹುದು. ಆದ್ರೆ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸೋ ಸಿಬ್ಬಂದಿಗೆ ಈ ಗ್ರಾಚ್ಯುಟಿ ಸೌಲಭ್ಯ ಸಿಗೋದಿಲ್ಲ. ಖಾಸಗಿ ಉದ್ಯೋಗಿಯೊಬ್ಬರು ತಾನು ಕಾರ್ಯನಿರ್ವಹಿಸಿದ ಎರಡು ಸಂಸ್ಥೆಗಳು ಗ್ರಾಚ್ಯುಟಿ ನೀಡಿಲ್ಲ ಎಂದು ಆರೋಪಿಸಿ ಸಂಸ್ಥೆ ವಿರುದ್ಧ ಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣವನ್ನು ಪರಿಶೀಲಿಸಿದ ಕರ್ನಾಟಕ ಹೈಕೋರ್ಟ್, ಯಾವುದೇ ಸಂಸ್ಥೆ ನೌಕರ ಉದ್ಯೋಗ ತ್ಯಜಿಸಿದ 30 ದಿನಗಳಲ್ಲಿ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಬೇಕೆಂದು ಸಲಹೆ ನೀಡಿದೆ. ಹೀಗಾಗಿ ಗ್ರಾಚ್ಯುಟಿ ಹಣ ಪಡೆಯೋದು ನೌಕರನ ಹಕ್ಕು. 

ತೆರಿಗೆ ವಿನಾಯ್ತಿ ಇದೆಯಾ?
ಕೇಂದ್ರ ಸರ್ಕಾರ ಗ್ರಾಚ್ಯುಟಿ ಕಾಯ್ದೆಗೆ ಮಾಡಿರೋ ಹೊಸ ತಿದ್ದುಪಡಿ ಪ್ರಕಾರ 20 ಲಕ್ಷ ರೂ. ತನಕದ ಗ್ರಾಚ್ಯುಟಿ ಮೊತ್ತಕ್ಕೆ ಸಂಪೂರ್ಣ ಆದಾಯ ತೆರಿಗೆ ವಿನಾಯ್ತಿ ಇದೆ. ಈ ಹಿಂದೆ ಗ್ರಾಚ್ಯುಟಿ ಮೊತ್ತಕ್ಕೆ ಆದಾಯ ತೆರಿಗೆ ವಿನಾಯ್ತಿ ಮಿತಿ 10 ಲಕ್ಷ ರೂ. ಆಗಿತ್ತು. 
 

click me!