Deadline extended:ರೈತರಿಗೆ ನೆಮ್ಮದಿಯ ಸುದ್ದಿ; ಪಿಎಂ ಕಿಸಾನ್ ಇ-ಕೆವೈಸಿ ಗಡುವು ಮೇ 22ಕ್ಕೆ ವಿಸ್ತರಣೆ

Published : Mar 31, 2022, 07:45 PM ISTUpdated : Apr 01, 2022, 08:10 AM IST
Deadline extended:ರೈತರಿಗೆ ನೆಮ್ಮದಿಯ ಸುದ್ದಿ; ಪಿಎಂ ಕಿಸಾನ್ ಇ-ಕೆವೈಸಿ ಗಡುವು ಮೇ 22ಕ್ಕೆ ವಿಸ್ತರಣೆ

ಸಾರಾಂಶ

*ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿಗೊಂಡಿರೋ ರೈತರಿಗೆ ಇ-ಕೆವೈಸಿ ಕಡ್ಡಾಯ *ಈ ಹಿಂದೆ ಮಾ.31ಕ್ಕೆ ಇ-ಕೆವೈಸಿ ಪೂರ್ಣಗೊಳಿಸಲು ಗಡುವು ನೀಡಲಾಗಿತ್ತು *ಈ ಯೋಜನೆಯಡಿಯಲ್ಲಿ ಭೂ ಹಿಡುವಳಿ ಹೊಂದಿರೋ ಎಲ್ಲ ರೈತ ಕುಟುಂಬಗಳಿಗೆ ವಾರ್ಷಿಕ 6,000ರೂ. ಆರ್ಥಿಕ ಪ್ರಯೋಜನ 

ನವದೆಹಲಿ (ಮಾ.31): ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ಸಂಪೂರ್ಣ ಪ್ರಯೋಜನ ಪಡೆಯಲು ರೈತರು ಮಾರ್ಚ್ 31ರೊಳಗೆ ಇ-ಕೆವೈಸಿ  (eKYC) ಪ್ರಕ್ರಿಯೆ ಪೂರ್ಣಗೊಳಿಸೋದು ಕಡ್ಡಾಯ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ಆದ್ರೆ ಈ ಗಡುವನ್ನು (Deadline) ಈಗ 2022ರ ಮೇ 22ಕ್ಕೆ ಮುಂದೂಡಲಾಗಿದೆ. ಹೀಗಾಗಿ ರೈತರು ಚಿಂತೆ ಮಾಡಬೇಕಾದ ಅಗತ್ಯವಿಲ್ಲ, ಮೇ 22ರೊಳಗೆ ಇ-ಕೆವೈಸಿ (eKYC) ಪೂರ್ಣಗೊಳಿಸಿದರೆ ಸಾಕು. 

ಪಿಎಂ ಕಿಸಾನ್  (PM-KISAN) ಸಮ್ಮಾನ್ ನಿಧಿ ಯೋಜನೆಯಲ್ಲಿ ನೋಂದಣಿಗೊಂಡಿರೋ ರೈತರಿಗೆ ಇ-ಕೆವೈಸಿ ಕಡ್ಡಾಯ. ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸೋ ಗಡುವನ್ನು ಮೇ 22ಕ್ಕೆ ಮುಂದೂಡಿರೋ ಬಗ್ಗೆ ಪಿಎಂ ಕಿಸಾನ್ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದ್ದು,' ಪಿಎಂ ಕಿಸಾನ್ ಯೋಜನೆಯ ಎಲ್ಲ ಫಲಾನುಭವಿಗಳಿಗೆ ಇ-ಕೆವೈಸಿ ಗಡುವನ್ನು 2022ರ ಮೇ 22ಕ್ಕೆ ವಿಸ್ತರಿಸಲಾಗಿದೆ' ಎಂದು ತಿಳಿಸಲಾಗಿದೆ. 

Varnika ನೋಟಿಗೆ ಬೇಕಾದ ಇಂಕ್ ಇನ್ಮುಂದೆ ನಮ್ಮಲ್ಲೇ ಸಿಗುತ್ತೆ!

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2019ರಲ್ಲಿ ಜಾರಿಗೊಳಿಸಲಾಗಿತ್ತು. ಈ ಯೋಜನೆ ಕೃಷಿ ಭೂಮಿ ಹೊಂದಿರೋ ದೇಶದ ಎಲ್ಲ ಭೂ ಹಿಡುವಳಿ ರೈತ ಕುಟುಂಬಗಳಿಗೆ ಆದಾಯದ ಬೆಂಬಲ ನೀಡೋ ಗುರಿ ಹೊಂದಿದೆ. ಈ ಯೋಜನೆಯಡಿಯಲ್ಲಿ ಭೂ ಹಿಡುವಳಿ ಹೊಂದಿರೋ ಎಲ್ಲ ರೈತ ಕುಟುಂಬಗಳು ವಾರ್ಷಿಕ 6,000ರೂ. ಆರ್ಥಿಕ ಪ್ರಯೋಜನ ಪಡೆಯಬಹುದಾಗಿದೆ. ಈ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2000 ರೂ.ನಂತೆ ಮೂರು ಕಂತುಗಳಲ್ಲಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ (Bank account) ನೇರವಾಗಿ ಜಮಾ (Deposit) ಮಾಡಲಾಗುತ್ತದೆ. ಒಂದು ಆರ್ಥಿಕ ಸಾಲಿನಲ್ಲಿ ಪಿಎಂ ಕಿಸಾನ್ ಯೋಜನೆ ಕಂತುಗಳನ್ನು ಮೂರು ಬಾರಿ ಪಾವತಿಸಲಾಗುತ್ತದೆ. ಮೊದಲನೇ ಕಂತಿನ ಅವಧಿ ಏಪ್ರಿಲ್-ಜುಲೈ.ಎರಡನೇ ಕಂತಿನ ಅವಧಿ ಆಗಸ್ಟ್-ನವೆಂಬರ್ ಹಾಗೂ ಮೂರನೇ ಕಂತಿನ ಅವಧಿ ಡಿಸೆಂಬರ್ ನಿಂದ ಮಾರ್ಚ್. 

ಪಿಎಂ ಕಿಸಾನ್ ಯೋಜನೆ ಪ್ರಾರಂಭಿಸಿದ ದಿನಗಳಲ್ಲಿ ಇದರ ಪ್ರಯೋಜನ ಕೇವಲ ಸಣ್ಣ ಹಾಗೂ ಮಧ್ಯಮ ವರ್ಗದ ರೈತರ ಕುಟುಂಬಗಳಿಗೆ ಮೀಸಲಾಗಿತ್ತು. ಅಂದ್ರೆ 2 ಹೆಕ್ಟೇರ್ ಭೂಮಿ ಹೊಂದಿರೋರಿಗೆ ಮಾತ್ರ ಈ ಪ್ರಯೋಜನ ಸಿಗುತ್ತಿತ್ತು. ಆದ್ರೆ ಈ ಯೋಜನೆಯನ್ನು 2019ರ ಜೂನ್ ನಲ್ಲಿ ಪರಿಷ್ಕರಿಸಲಾಯಿತು ಹಾಗೂ ಭೂ ಹಿಡುವಳಿ ಗಾತ್ರದ ಹೊರತಾಗಿಯೂ ಎಲ್ಲ ರೈತ ಕುಟುಂಬಗಳಿಗೆ ವಿಸ್ತರಿಸಲಾಯಿತು.

ಪಿಎಂ ಕಿಸಾನ್ ಇ-ಕೆವೈಸಿ ಪೂರ್ಣಗೊಳಿಸೋದು ಹೇಗೆ?
-ಮೊದಲಿಗೆ ಪಿಎಂ ಕಿಸಾನ್ ಅಧಿಕೃತ ವೆಬ್ ಸೈಟ್ https://pmkisan.gov.in ಭೇಟಿ ನೀಡಿ.
-ಈಗ ಬಲ ಭಾಗದಲ್ಲಿ ಹೋಮ್ ಪೇಜ್ ಕೆಳಗೆ ನಿಮಗೆ ಫಾರ್ಮರ್ಸ್ ಕಾರ್ನರ್ ಕಾಣಿಸುತ್ತದೆ.
-ಫಾರ್ಮರ್ಸ್ ಕಾರ್ನರ್ ಕೆಳಗೆ ಒಂದು ಬಾಕ್ಸ್ ಇದ್ದು, ಅದ್ರಲ್ಲಿ ಇ-ಕೆವೈಸಿ ಎಂದಿದೆ.
-ಈಗ ಇ-ಕೆವೈಸಿ ಮೇಲೆ ಕ್ಲಿಕ್ ಮಾಡಿ.
-ಒಂದು ಪುಟ ತೆರೆದುಕೊಳ್ಳುತ್ತದೆ. ಅದ್ರಲ್ಲಿ ಆಧಾರ್ ಇ-ಕೆವೈಸಿ ಭರ್ತಿ ಮಾಡಬಹುದು.
-ಈಗ ನೀವು ಆಧಾರ್ ಸಂಖ್ಯೆ ಹಾಗೂ ಕಾಪ್ಚ ಕೋಡ್ ನಮೂದಿಸಬೇಕು. ಆ ಬಳಿಕ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
-ಆ ಬಳಿಕ ನೀವು ಆಧಾರ್ ಸಂಖ್ಯೆಗೆ ಲಿಂಕ್ ಆಗಿರೋ ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಬೇಕು. ಆ ಬಳಿಕ OTP ಬಟನ್ ಮೇಲೆ ಕ್ಲಿಕ್ ಮಾಡಬೇಕು.

PAN Aadhaar Link: ಪ್ಯಾನ್ ಗೆ ಆಧಾರ್ ಲಿಂಕ್ ಮಾಡಿಲ್ಲವೆಂದ್ರೆ ಹೂಡಿಕೆ ಅಸಾಧ್ಯ!

-ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
-OTP ನೋಂದಾಯಿಸಿ ಸಬ್ಮಿಟ್ ಮಾಡಲು  Authentication button ಮೇಲೆ ಕ್ಲಿಕ್ ಮಾಡಿ.
- Submit ಬಟನ್ ಮೇಲೆ ಕ್ಲಿಕ್ ಮಾಡಿದ ಬಳಿಕ e-KYC ಪೂರ್ಣಗೊಳ್ಳುತ್ತದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು
Gold Silver Price Today: ಚಿನ್ನದ ದರದಲ್ಲಿ ಏರಿಕೆನಾ? ಇಳಿಕೆನಾ?