RBI,ಸರ್ಕಾರಿ ಬ್ಯಾಂಕ್, LIC ಉದ್ಯೋಗಿಗಳ ವೇತನದಿಂದ ಪಿಎಂ ಕೇರ್ಸ್‌ಗೆ 200 ಕೋಟಿ ರೂ.!

Published : Sep 28, 2020, 04:49 PM ISTUpdated : Sep 28, 2020, 04:54 PM IST
RBI,ಸರ್ಕಾರಿ ಬ್ಯಾಂಕ್, LIC ಉದ್ಯೋಗಿಗಳ ವೇತನದಿಂದ ಪಿಎಂ ಕೇರ್ಸ್‌ಗೆ 200 ಕೋಟಿ ರೂ.!

ಸಾರಾಂಶ

ಕೊರೋನಾತಂಕ ನಡುವೆ ತುರ್ತುಪರಿಸ್ಥಿತಿಗೆಂದು ನಿರ್ಮಿಸಲಾಗಿದ್ದ ಪಿಎಂ ಕೇರ್ಸ್‌ ನಿಧಿ| ಭಾರತೀಯ ರಿಸರ್ವ್‌ ಬ್ಯಾಂಕ್, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ  ಪ್ರಮುಖ ಹಣಕಾಸು ಸಂಸ್ಥೆಗಳು ಸುಮಾರು 200 ಕೋಟಿ ರೂ. ದೇಣಿಗೆ

ನವದೆಹಲಿ(ಸೆ.28): ಕೊರೋನಾತಂಕ ನಡುವೆ ತುರ್ತು ಪರಿಸ್ಥಿತಿಗೆಂದು ನಿರ್ಮಿಸಲಾಗಿದ್ದ ಪಿಎಂ ಕೇರ್ಸ್‌ ನಿಧಿಗೆ ಭಾರತೀಯ ರಿಸರ್ವ್‌ ಬ್ಯಾಂಕ್, ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಹಾಗೂ 
ಪ್ರಮುಖ ಹಣಕಾಸು ಸಂಸ್ಥೆಗಳು ಸುಮಾರು 200 ಕೋಟಿ ರೂ. ದೇಣಿಗೆ ನೀಡಿವೆ ಎಂದು ವರದಿಗಳು ಬಹಿರಂಗಪಡಿಸಿವೆ.

ಕೇಂದ್ರ ಶಿಕ್ಷಣ ಸಂಸ್ಥೆಗಳು ತಮ್ಮ ಸಿಬ್ಬಂದಿಯ ವೇತನ ಸೇರಿಸಿ ಒಟ್ಟು 204.75 ಕೋಟಿ ರೂ ದೇಣಿಗೆ ನೀಡಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ವರದಿಯಲ್ಲಿ ಮಾಹಿತಿ ಹಕ್ಕುಗಳಡಿ ಪಡೆದ ಅಂಕಿ ಅಂಶದ ಮೇಲೆ ನೀಡಲಾಗಿದೆ.

ತಮ್ಮ ಉಳಿತಾಯದ 2.25 ಲಕ್ಷ ರೂ. ಪಿಎಂ ಕೇರ್ಸ್‌ ಫಂಡ್‌ಗೆ ದಾನ ಮಾಡಿದ ಮೋದಿ!

ವರದಿಯನ್ವಯ ಎಲ್ಐಸಿ, ಜನರಲ್ ಇನ್ಶೂರೆನ್ಸ್‌ ಕೋಆಪರೇಷನ್ ಹಾಗೂ ನ್ಯಾಷನಲ್ ಹೌಸಿಂಗ್ ಬ್ಯಾಂಕ್‌ಗಳು 144.5 ಕೋಟಿ ರೂ ದೇಣಿಗೆ ನೀಡಿವೆ.

ಇನ್ನು ಕೇವಲ ಎಲ್‌ಐಸಿಯೇ ಬರೋಬ್ಬರಿ  113.63 ಕೋ ರೂ ದೇಣಿಗೆಯನ್ನು ಪಿಎಂ ಕೇರ್ಸ್‌ ಫಂಡ್‌ಗೆ ನೀಡಿದೆ. ಇದರಲ್ಲಿ ಸಿಬ್ಬಂದಿಯ  8.64 ಕೋಟಿ ರೂ ಸಿಬ್ಬಂದಿಯ ವೇತನ ಕಡಿತದಿಂದ ನೀಡಿದ್ದರೆ, 100 ಕೋಟಿಯನ್ನು ಕಾರ್ಪೋರೇಟ್ ಕಮ್ಯುನಿಕೇಶನ್ ಹಾಗೂ  5 ಕೋಟಿ ರೂ ಗೋಲ್ಡನ್‌ ಜ್ಯುಬಿಲಿ ಫೌಂಡೇಷನ್ ಪರವಾಗಿ ನೀಡಲಾಗಿದೆ.

ಇನ್ನು ಅತಿ ಹೆಚ್ಚು ದೇಣಿಗೆ ನೀಡಿದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪಟ್ಟಿಯಲ್ಲಿ ಎಸ್‌ಬಿಐ ಮೊದಲ ಸ್ಥಾನದಲ್ಲಿದೆ. ಇದು ಸುಮಾರು 107.95 ಕೋಟಿ ರೂ ದೇಣಿಗೆ ನೀಡಿದೆ. ಪಿಎಂ ಕೇರ್ಸ್‌ಗೆ ನೀಡಿದ ಇಷ್ಟು ಮೊತ್ತ ತಮ್ಮ ಸಿಬ್ಬಂದಿಯ ವೇತನ ಕಡಿತದಿಂದ ನೀಡಲಾಗಿದೆ ಎಂದು ಎಸ್‌ಬಿಐ ಹೇಳಿದೆ ಎಂದು ಆರ್‌ಟಿಐ ಅರ್ಜಿಯಲ್ಲಿ ತಿಳಿಸಲಾಗಿದೆ.

14 ತಿಂಗಳ ಬಳಿಕ ಏಕಾಏಕಿ ಟ್ವಿಟರ್‌ನಲ್ಲಿ ನಟಿ ರಮ್ಯಾ ಪ್ರತ್ಯಕ್ಷ, ಮಾಡಿದ ಟ್ವೀಟ್‌ ಇದು!

ಇನ್ನು ಆರ್‌ಬಿಐ ನೀಡಿದ 7.34 ಕೋಟಿ ರೂ ಉದ್ಯೋಗಿಗಳು ನೀಡಿದ ದೇಣಿಗೆ ಎಂದಿದೆ. ಆದರೆ ಪ್ರಧಾನ ಮಂತ್ರಿ ಕಾರ್ಯಾಲಯ ಇದು ಆರ್‌ಟೈ ಆಕ್ಟ್‌ನಡಿ ಬರುವ ಸಾರ್ವಜನಿಕ ಪ್ರಾಧಿಕಾರವಲ್ಲ ಎಂಬ ಕಾರಣ ನೀಡಿ ಈ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದೆ. ಸದ್ಯ ಲಭ್ಯವಾಗಿರುವ ಹಣದ ಮೊತ್ತದ ಮಾಹಿತಿ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಂದ ಪಡೆದದ್ದಾಗಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಏರಿಕೆಯಾಗ್ತಿರೋ ಚಿನ್ನವನ್ನು ಲಾಭದಾಯಕವಾಗಿ ಹೇಗೆ ಖರೀದಿಸಬೇಕು? ತಜ್ಞರ ಸಲಹೆ
YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ