ಚಿನ್ನದ ದುಬಾರಿ, ಬೆಳ್ಳಿ ದರ ಇಳಿಕೆ: ಇಲ್ಲಿದೆ ಸೆ. 27ರ ಬೆಲೆ!

Published : Sep 27, 2020, 04:22 PM IST
ಚಿನ್ನದ ದುಬಾರಿ, ಬೆಳ್ಳಿ ದರ ಇಳಿಕೆ: ಇಲ್ಲಿದೆ ಸೆ. 27ರ ಬೆಲೆ!

ಸಾರಾಂಶ

ಇಳಿಕೆಯ ಹಾದಿಯಲ್ಲಿದ್ದ ಚಿನ್ನ ಮತ್ತೆ ಏರಿಕೆ| ಬಡಳ್ಳಿ ದರ ತುಸು ಇಳಿಕೆ| ಇಲ್ಲಿದೆ ಸೆಪ್ಟೆಂಬರ್ 27ರ ಚಿನ್ನ, ಬೆಳ್ಳಿ ದರ

ಬೆಂಗಳೂರು(ಸೆ.27): ಕೊರೋನಾ ನಡುವೆ ಚಿನ್ನದ ದರ ಏರಿಕೆ ಗ್ರಾಹಕರನ್ನ ಕಂಗಾಲು ಮಾಡಿತ್ತು. ನಿಗಧಿಯಾಗಿದ್ದ ಶುಭ ಕಾರ್ಯದ ಸಂದರ್ಭದಲ್ಲಿ ಬೆಲೆ ಏರಿಕೆ ದೊಡ್ಡ ಪೆಟ್ಟು ನೀಡಿತ್ತು. ಅಚ್ಚರಿ ಎಂಬಂತೆ ಚಿನ್ನದ ಬೇಡಿಕೆ ಭಾರೀ ಕಡಿಮೆ ಇದ್ದರೂ ಬೆಲೆ ಮಾತ್ರ ಸಾರ್ವಕಾಲಿಕ ದಾಖಲೆ ಸೃಷ್ಟಿಸಿತ್ತು. ಉದ್ಯಮಗಳು ನೆಲ ಕಚ್ಚಿದ ಹಿನ್ನೆಲೆ ಅನೇಕ ಮಂದಿ ಚಿನ್ನದಲ್ಲಿ ಹೂಡಿಕೆ ಮಾಡಿದ್ದೇ ಇದಕ್ಕೆ ಕಾರಣವಾಗಿತ್ತು. ಹೀಗಿರುವಾಗಲೇ ಚಿನ್ನ, ಬೆಳ್ಳಿ ದರ ಏರಿಕೆ, ಇಳಿಕೆ ಆಟ ಆರಂಭಸಿದ್ದು, ಗ್ರಾಹರನ್ನು ಗೊಂದಲಕ್ಕೀಡು ಮಾಡಿದೆ. ಇಲ್ಲಿದೆ ನೋಡಿ ಇಂದಿನ ಗೋಲ್ಡ್‌ ಆಂಡ್ ಸಿಲ್ವರ್ ರೇಟ್.

ಚಿನ್ನದ ದರ ಭಾರೀ ಇಳಿಕೆ, ಗ್ರಾಹಕರಿಗೆ ಖುಷಿಯೋ ಖುಷಿ: ಇಲ್ಲಿದೆ ಸೆ. 22ರ ಚಿನ್ನದ ಬೆಲೆ!

ಇಂದು ಭಾನುವಾರ ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ ದರದಲ್ಲಿ 10 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಬೆಲೆ 47,110 ರೂಪಾಯಿ ಆಗಿದೆ. ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 10 ರೂಪಾಯಿ ಏರಿಕೆ ಕಂಡಿದ್ದು, 51,390 ರೂಪಾಯಿ ಆಗಿದೆ. 

ಆದರೆ ಇತ್ತ ಬೆಳ್ಳಿ ದರದಲ್ಲಿ 300 ರೂ.. ಇಳಿಕೆಯಾಗಿದ್ದು, ಒಂದು ಕೆ. ಜಿ ಬೆಳ್ಳಿಯ ಬೆಲೆ 59000 ರೂ ಆಗಿದೆ.

ಏರಿಕೆ ಕಂಡಿದ್ದ ಚಿನ್ನದ ದರದಲ್ಲಿ ಭಾರಿ ಇಳಿಕೆ, ಇಲ್ಲಿದೆ ಸೆ. 21ರ ಬೆಲೆ!

ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ

ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದೀ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಒಂದೇ ತಿಂಗಳಲ್ಲಿ ಲಕ್ಷ ಸಂಬಳದ ಕೆಲಸದಿಂದ ವಜಾಗೊಂಡ ಆಘಾತ, ತಿಂಗಳಲ್ಲಿ 6 ಆ್ಯಪ್ ಮಾಡಿ ಪುಟಿದೆದ್ದ 21ರ ಐಐಟಿ ಯುವಕ!
ಅಡೋಬ್‌ನ ಮುಂದಿನ ಸಿಇಒ ಆಗಲಿರುವ ಬೆಂಗಳೂರಿನ ಬಸವನಗುಡಿಯ ಅನಿಲ್‌