2 ದಿನ ದೇಶವ್ಯಾಪಿ ಬ್ಯಾಂಕ್‌ ನೌಕರರ ಮುಷ್ಕರಕ್ಕೆ ಕರೆ!, ಯಾವಾಗ? ಇಲ್ಲಿದೆ ಮಾಹಿತಿ

By Suvarna News  |  First Published Jan 16, 2020, 3:10 PM IST

ಆರ್ಥಿಕ ಸಮೀಕ್ಷೆ, ಬಜೆಟ್‌ ದಿನ ದೇಶವ್ಯಾಪಿ ಬ್ಯಾಂಕ್‌ ನೌಕರರ ಮುಷ್ಕರಕ್ಕೆ ಕರೆ| ದೇಶವ್ಯಾಪಿ ಎರಡು ದಿನ  ಬ್ಯಾಂಕ್‌ ನೌಕರರ ಮುಷ್ಕರ


ಕೋಲ್ಕತಾ[ಜ.16]: ಕೇಂದ್ರ ಸರ್ಕಾರದ ಬಹು ನಿರೀಕ್ಷಿತ 2020-21ನೇ ಸಾಲಿನ ಆರ್ಥಿಕ ಸಮೀಕ್ಷೆ ಹಾಗೂ ಬಜೆಟ್‌ ಮಂಡನೆಯಾಗುವ ಜ.31 ಮತ್ತು ಫೆ.1ರ ದಿನಗಳಂದೇ ಬ್ಯಾಂಕ್‌ ನೌಕರರ ಸಂಘಟನೆಗಳು ರಾಷ್ಟಾ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ಬ್ಯಾಂಕ್‌ ನೌಕರರ ವೇತನ ಪರಿಷ್ಕರಣೆ ಮಾಡಬೇಕೆಂದು ಭಾರತೀಯ ಬ್ಯಾಂಕ್‌ಗಳ ಅಸೋಸಿಯೇಷನ್‌(ಐಬಿಎ) ಜೊತೆಗಿನ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ, ಬ್ಯಾಂಕ್‌ ಸಂಘಟನೆಗಳು ಜ.31 ಹಾಗೂ ಫೆ.1ರಂದು 2 ದಿನಗಳ ಮುಷ್ಕರಕ್ಕೆ ಕರೆ ನೀಡಿವೆ.

Latest Videos

ಕೇಂದ್ರದ ವಿರುದ್ಧ ತಿರುಗಿಬಿದ್ದ ಬ್ಯಾಂಕ್ ನೌಕರರು, ಜನವರಿಯಲ್ಲಿ ಸಾರ್ವತ್ರಿಕ ಮುಷ್ಕರ!

ಬ್ಯಾಂಕ್‌ ನೌಕರರ ವೇತನವನ್ನು ಶೇ.15ರಷ್ಟುಏರಿಕೆ ಮಾಡಬೇಕು ಎಂದು ಯುನೈಟೆಡ್‌ ಫೋರಂ ಆಫ್‌ ಬ್ಯಾಂಕ್‌ ಯೂನಿಯನ್ಸ್‌(ಯುಎಫ್‌ಬಿಯು) ಒತ್ತಾಯಿಸಿತ್ತು. ಆದರೆ, 12.25ರಷ್ಟುವೇತನ ಪರಿಷ್ಕರಣೆಗೆ ಐಬಿಎ ಒಪ್ಪಿತ್ತು. ಇದಕ್ಕೆ ಬೇಸರಗೊಂಡ ಒಟ್ಟು 9 ಬ್ಯಾಂಕ್‌ ಒಕ್ಕೂಟಗಳು, ಜ.31, ಫೆ.1, ಮಾ.11 ರಿಂದ ಮಾ.13ರವರೆಗೂ ಪ್ರತಿಭಟನೆ ಹಾಗೂ ಏ.1ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುತ್ತದೆ ಎಂದು ಬೆದರಿಕೆ ಹಾಕಿವೆ.

2017ರ ನವೆಂಬರ್‌ನಿಂದಲೂ ಬ್ಯಾಂಕ್‌ ನೌಕರರ ವೇತನ ಪರಿಷ್ಕರಣೆಯಾಗಬೇಕಿರುವುದು ಬಾಕಿ ಉಳಿದಿದೆ.

ಬ್ಯಾಂಕ್‌ ಸೇವಾ ಶುಲ್ಕದ ವಿವರ ಇಲ್ಲಿದೆ, ಗೊತ್ತು ಮಾಡ್ಕೊಂಡು ಸೇವ್ ಮಾಡಿ!

ಜನವರಿ 16ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!