6ನೇ ದಿನವೂ ಇಳಿಯಿತು ಪೆಟ್ರೋಲ್, ಡೀಸೆಲ್ ದರ

By Web DeskFirst Published Oct 23, 2018, 1:45 PM IST
Highlights

ಕಳೆದ ಐದು ದಿನಗಳಿಂದ ಏರಿಕೆ ಗತಿಯಲ್ಲಿ ಸಾಗುತ್ತಿದ್ದ ಪೆಟ್ರೋಲ್ ಡೀಸೆಲ್ ದರ ಇದೀಗ 6ನೇ ದಿನವೂ ಕೂಡ ಇಳಿದಿದೆ. 

ನವದೆಹಲಿ :  ನಿರಂತರವಾಗಿ ಏರಿಕೆಯತ್ತ ಸಾಗಿದ್ದ ಪೆಟ್ರೋಲ್, ಡೀಸೆಲ್ ದರ ಇದೀಗ ನಿರಂತರವಾಗಿ ಇಳಿಕೆಯಾಗುತ್ತಿದೆ. 5 ದಿನಗಳಿಂದ ನಿರಂತರವಾಗಿ ಇಳಿದ ಪೆಟ್ರೋಲ್ ದರದಲ್ಲಿ 6ನೇ ದಿನವೂ ಕೂಡ ಇಳಿದಿದೆ. 

ಇದರಿಂದ ಗ್ರಾಹಕರಿಗೆ ಮತ್ತಷ್ಟು ರಿಲೀಫ್ ದೊರಕಿದಂತಾಗಿದೆ. ದಿಲ್ಲಿಯಲ್ಲಿ ಪ್ರತೀ ಲೀಟರ್  ಪೆಟ್ರೋಲ್ ದರದ ಮೇಲೆ 10 ಪೈಸೆಯಷ್ಟು ಇಳಿಕೆಯಾಗಿದ್ದು ಇದರಿಂದ ಪ್ರತೀ ಲೀಟರ್ ಪೆಟ್ರೋಲ್ ಬೆಲೆ 81.34 ರು.ನಷ್ಟಾಗಿದೆ. ಇನ್ನು ಮುಂಬೈನಲ್ಲಿ ಪೆಟ್ರೋಲ್ ದರವು 10 ಪೈಸೆ ಇಳಿಕೆ ಬಳಿಕ 86.81 ರು.ಗಳಾಗಿದೆ. 

ಇನ್ನು ಡೀಸೆಲ್ ದರದ ಮೇಲೆ 8 ಪೈಸೆಯಷ್ಟು ಇಳಿಕೆಯಾಗಿದ್ದು ಇದರಿಂದ ಪ್ರತೀ ಲೀಟರ್ ಡೀಸೆಲ್ ಬೆಲೆ ದಿಲ್ಲಿಯಲ್ಲಿ 74.85 ರು.ಗಳಾಗಿದ್ದು,  ಮುಂಬೈನಲ್ಲಿ 78.46 ರಷ್ಟಾಗಿದೆ. 

ಕಳೆದ ಕೆಲ ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದ ದರವು ಇದೀಗ ಇಳಿಮುಖವಾಗುತ್ತಿದೆ. 

click me!