ಓಹೋ ಓಯೋ!: 8 ಸಾವಿರಕ್ಕೆ ಮನೆ ಬಾಡಿಗೆ ಬೇರೆ ಕೊಡ್ತಿಯೋ?

By Web Desk  |  First Published Oct 23, 2018, 12:47 PM IST

ಓಯೋ ಗ್ರಾಹಕರಿಗೆ ಬಂಪರ್ ಆಫರ್! ಆಧುನಿಕ ಸೌಲಭ್ಯವುಳ್ಳ ಕೋಣೆಗಳು ಬಾಡಿಗೆಗೆ! ದೀರ್ಘ ಕಾಲದವರೆಗೆ ಕೋಣೆಗಳು ಬಾಡಿಗೆಗೆ ಸಿಗಲಿವೆ! ಒಂದು ಕೋಣೆಗೆ ತಿಂಗಳಿಗೆ 8 ಸಾವಿರ ರೂ. ಬಾಡಿಗೆ! ವೈ-ಫೈ, ಟಿವಿ, ಫ್ರಿಡ್ಜ್ ಏನುಂಟು, ಏನಿಲ್ಲ?


ನವದೆಹಲಿ(ಅ.23): ಹೋಟೆಲ್ ಲಭ್ಯತೆ ಮಾಹಿತಿ ಸಂಗ್ರಹ ಸಂಸ್ಥೆ ಓಯೋ ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ಓಯೋ ಗ್ರಾಹಕರು ಇನ್ಮುಂದೆ ದೀರ್ಘ ಕಾಲದ ಒಪ್ಪಂದದ ಮೇಲೆ ಅತ್ಯಾಧುನಿಕ ಸೌಲಭ್ಯವುಳ್ಳ ಕೋಣೆಗಳನ್ನು ಬಡಿಗೆ ಪಡೆಯಬಹುದಾಗಿದೆ.

ಹೌದು, ಓಯೋ ತನ್ನ ಗ್ರಾಹಕರಿಗೆ ಆಧುನಿಕ ಸೌಲಭ್ಯವುಳ್ಳ ಕೋಣೆಗಳನ್ನು ಬಾಡಿಗೆಗೆ ನೀಡಲಿದೆ. ಈ ಕೋಣೆಗಳನ್ನು ಗ್ರಾಹಕರು ದೀರ್ಘ ಸಮಯದವರೆಗೂ ಬಾಡಿಗೆ ಪಡೆಯಬಹುದಾಗಿದೆ.

Tap to resize

Latest Videos

ನೋಯ್ಡಾ, ಗುರುಗ್ರಾಮ, ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಓಯೋದ ಎಕ್ಸಕ್ಲೂಸಿವ್ ಕೋಣೆಗಳನ್ನು ಬಾಡಿಗೆ ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ. ಅಲ್ಲದೇ ಈ ಆಧುನಿಕ ಕೋಣೆಗಳಿಗೆ ತಿಂಗಳಿಗೆ 7,999 ರೂ. ಬಾಡಿಗೆ ನಿಗದಿಪಡಿಸಲಾಗಿದೆ.

ಓಯೋದ ಈ ಆಧುನಿಕ ಕೋಣೆಗಳಲ್ಲಿ ಉಚಿತ ವೈ-ಫೈ, ಟಿವಿ, ಫ್ರಿಡ್ಜ್, ಸಿಸಿಟಿವಿ ಕ್ಯಾಮರಾ ಸೇರಿದಂತೆ ಆಧುನಿಕ ಸೌಲಭ್ಯಗಳು ಇರಲಿವೆ ಎಂದು ಹೇಳಲಾಗಿದೆ. ಜೊತೆಗೆ ಮನೆ ನಿರ್ವಹಣೆಗಾಗಿ ಓರ್ವ ಕೆಲಸಾಗರನನ್ನು ಕೂಡ ನೇಮಿಸಲಾಗುವುದು ಎಂದು ಕಂಪನಿ ತಿಳಿಸಿದೆ.

click me!