ವಾಹನ ಚಾಲಕರಿಗೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಶಾಕ್!

By Kannadaprabha NewsFirst Published May 30, 2020, 1:40 PM IST
Highlights

ಲಾಕ್‌ಡೌನ್‌ ತೆರವಾದ ಬಳಿಕ, ಇಲ್ಲವೇ ದೈನಂದಿನ ದರ ಪರಿಷ್ಕರಣೆ ಆರಂಭವಾದ ಬಳಿಕ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆ| ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳು 4ರಿಂದ 5 ರು.ನಷ್ಟುಏರಿಕೆ 

ನವದೆಹಲಿ(ಮೇ.30): ಜೂನ್‌ನಲ್ಲಿ ಲಾಕ್‌ಡೌನ್‌ ತೆರವಾದ ಬಳಿಕ, ಇಲ್ಲವೇ ದೈನಂದಿನ ದರ ಪರಿಷ್ಕರಣೆ ಆರಂಭವಾದ ಬಳಿಕ ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳು 4ರಿಂದ 5 ರು.ನಷ್ಟುಏರಿಕೆ ಆಗುವ ಸಾಧ್ಯತೆ ಇದೆ. ಕೊರೋನಾ ವೈರಸ್‌ನಿಂದಾಗಿ ಕುಸಿತ ಕಂಡಿದ್ದ ಜಾಗತಿಕ ಕಚ್ಚಾತೈಲ ಮಾರುಕಟ್ಟೆ ನಿಧಾನವಾಗಿ ಚೇತರಿಕೆ ಕಾಣುತ್ತಿದೆ.

ಕಳೆದ ತಿಂಗಳು ಇದ್ದ ದರಕ್ಕೆ ಹೋಲಿಸಿದರೆ ತೈಲ ದರ ಶೇ.50ರಷ್ಟು ಏರಿಕೆಯಾಗಿದ್ದು, ಬ್ಯಾರಲ್‌ವೊಂದಕ್ಕೆ 30 ಡಾಲರ್‌ (2,250 ರು.) ಆಗಿದೆ. ಅಲ್ಲದೇ ದಿನದಿಂದ ದಿನಕ್ಕೆ ಕಚ್ಚಾತೈಲ ದರ ಏರಿಕೆ ಕಾಣುತ್ತಿದೆ. ಒಂದು ವೇಳೆ ಏರುಗತಿ ಇದೇ ರೀತಿಯಲ್ಲಿ ಮುಂದುವರಿದರೆ ತೈಲ ಮಾರಾಟ ಕಂಪನಿಗಳಿಗೆ ವೆಚ್ಚ ಹಾಗೂ ಮಾರಾಟದ ಮಧ್ಯೆ 4ರಿಂದ 5 ರು.ನಷ್ಟು ವ್ಯತ್ಯಾಸ ಉಂಟಾಗುತ್ತಿದೆ.

ತೈಲ ಬೆಲೆ ಏರಿಕೆ ಖಂಡಿಸಿ ಕೈ ನಾಯಕರ ಸೈಕಲ್ ಪ್ರತಿಭಟನೆಯಲ್ಲಿ ಸಾಮಾಜಿಕ ಅಂತರ ಕಣ್ಮರೆ

ಹೀಗಾಗಿ ನಷ್ಟವನ್ನು ತುಂಬಿಕೊಳ್ಳುವ ಸಲುವಾಗಿ ದೈನಂದಿನ ತೈಲ ದರ ಪರಿಷ್ಕರಣೆ ಆರಂಭವಾದ ಬಳಿಕ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಕೆಲವು ದಿನಗಳ ವರೆಗೆ ಪ್ರತಿನಿತ್ಯ ಲೀಟರ್‌ಗೆ 40ರಿಂದ 50 ಪೈಸೆಯಷ್ಟುಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳನ್ನು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಒಂದು ವೇಳೆ 5ನೇ ಹಂತದ ಲಾಕ್‌ಡೌನ್‌ ಜಾರಿಯಲ್ಲಿದ್ದರೂ, ಸರ್ಕಾರದ ಅನುಮತಿ ನೀಡಿದರೆ ತೈಲ ಕಂಪನಿಗಳು ದೈನಂದಿನ ದರ ಪರಿಷ್ಕರಣೆಯನ್ನು ಅನ್ವಯಿಸಬಹುದು. ಆದರೆ, ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ಸರ್ಕಾರ ತೈಲ ದರ ಏರಿಕೆಗೆ ಒಂದು ಮಿತಿಯನ್ನು ವಿಧಿಸಲು ಮುಂದಾಗಿವೆ ಎಂದು ಮೂಲಗಳು ತಿಳಿಸಿವೆ.

click me!