ರೊಕ್ಕಾ ಅಲ್ಲ ಡಾಲರ್ ಪ್ರಾಬ್ಲಂ: ಧಮೇಂದ್ರ ಹೊಸ ಲೆಕ್ಕ!

By Web DeskFirst Published 8, Sep 2018, 9:38 PM IST
Highlights

ಭಾರತದ ರೂಪಾಯಿ ಸದೃಢವಾಗಿದೆ ಎಂದ ಧಮೇಂದ್ರ ಪ್ರಧಾನ್! ಎಲ್ಲಾ ಸಮಸ್ಯೆಗೆ ಡಾಲರ್ ಕಾರಣ ಎಂದ ಪೆಟ್ರೋಲಿಯಂ ಸಚಿವ! ತದ್ವಿರುದ್ಧ ಹೇಳಿಕೆ ನೀಡಿದ ಧಮೇಂದ್ರ ಪ್ರಧಾನ್! ತೈಲವನ್ನು ಡಾಲರ್ ಮೂಲಕವೇ ಖರೀದಿಸುವುದೇ ಸಮಸ್ಯೆ

ನವದೆಹಲಿ(ಸೆ.8): ತೈಲ ಬೆಲೆ ಮಿತಿ ಮೀರಿ ಏರಿಕೆಯಾಗುತ್ತಿರುವುದಕ್ಕೆ ಡಾಲರ್ ಎದುರು ಕುಸಿಯುತ್ತಿರುವ ರೂಪಾಯಿಯ ಮೌಲ್ಯವೂ ಕಾರಣ ಎನ್ನಲಾಗುತ್ತಿದೆ. ಆದರೆ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ್ದಾರೆ. 

ರೂಪಾಯಿ ಹಿಂದೆಂದಿಗಿಂತಲೂ ಸದೃಢವಾಗಿದೆ. ಆದರೆ ಸಮಸ್ಯೆ ಉಂಟಾಗುತ್ತಿರುವುದು ಡಾಲರ್ ನಿಂದ ಎಂದು ಹೇಳುವ ಮೂಲಕ ಪೇಟ್ರೋಲಿಯಂ ಸಚಿವರು ಅಚ್ಚರಿ ಮೂಡಿಸಿದ್ದಾರೆ. ಆ.15 ರಿಂದ ಈ ವರೆಗೆ 3 ರೂಪಾಯಿ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದರೆ ಡೀಸೆಲ್ ಬೆಲೆ 3.50 ರೂಪಾಯಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪೆಟ್ರೋಲಿಯಂ ಸಚಿವರು, ಸರ್ಕಾರ ಈ ವಿಷಯದಲ್ಲಿ ಯಾಕೆ ಹೆಚ್ಚಿನದ್ದನ್ನು ಮಾಡಲು ಸಾಧ್ಯವಿಲ್ಲ ಎಂಬುದನ್ನು ವಿವರಿಸಿದ್ದಾರೆ. 

ಮಾರುಕಟ್ಟೆಯಲ್ಲಿ ಅನಿವಾರ್ಯವಾಗಿ ಈ ಸ್ಥಿತಿ ನಿರ್ಮಾಣವಾಗಲಿ ಎರಡು ಪ್ರಮುಖ ಬಾಹ್ಯ ಕಾರಣಗಳಿವೆ. ಅಮೆರಿಕದ ಡಾಲರ್ ವಿಲಕ್ಷಣ, ತಡೆಯಲು ಸಾಧ್ಯವೇ ಇಲ್ಲದಂತಹ ಸ್ಥಿತಿಯನ್ನು ನಿರ್ಮಾಣ ಮಾಡುತ್ತಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಇಂದು ಭಾರತದ ಕರೆನ್ಸಿ ಬೇರೆಲ್ಲಾ ಕರೆನ್ಸಿಗಳಿಗಿಂತಲೂ ಹಿಂದೆಂದಿಗಿಂತಲೂ ಸದೃಢವಾಗಿದೆ. ಆದರೆ ತೈಲವನ್ನು ಡಾಲರ್ ಮೂಲಕವೇ ಖರೀದಿಸುವ ಕಾರಣದಿಂದ ಈ ಎಲ್ಲಾ ಸಮಸ್ಯೆಗಳು ಉಂಟಾಗುತ್ತಿವೆ ಎಂದು ಧರ್ಮೇಂದ್ರ ಪ್ರಧಾನ್ ವಿವರಿಸಿದ್ದಾರೆ.

Last Updated 9, Sep 2018, 8:52 PM IST