ಪೆಟ್ರೋಲ್, ಡೀಸೆಲ್ ದರದಲ್ಲಿ ನಿರಂತರ ಇಳಿಕೆ

Published : Jun 13, 2019, 11:09 AM ISTUpdated : Jun 13, 2019, 01:13 PM IST
ಪೆಟ್ರೋಲ್, ಡೀಸೆಲ್  ದರದಲ್ಲಿ ನಿರಂತರ ಇಳಿಕೆ

ಸಾರಾಂಶ

ನಿರಂತರವಾಗಿ ಪೆಟ್ರೋಲ್, ಡೀಸೆಲ್ ದರದಲ್ಲಿ ಇಳಿಕೆಯಾಗುತ್ತಿದ್ದು, ಗುರುವಾರ  ತೈಲದರಲ್ಲಿ ಮತ್ತಷ್ಟು ಕುಸಿತ ಕಂಡು ಬಂದಿದೆ.

ನವದೆಹಲಿ (ಜೂ.13): ಕಳೆದ ಕೆಲ ದಿನಗಳಿಂದ ಇಳಿಯುತ್ತಿರುವ ಪೆಟ್ರೋಲ್ ಡೀಸೆಲ್ ದರದಲ್ಲಿ ಮತ್ತಷ್ಟು ಕುಸಿತ ಕಂಡು ಬಂದಿದೆ. 

ಗುರುವಾರ  ಮೆಟ್ರೋ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ 7 ರಿಂದ 9 ಪೈಸೆಯಷ್ಟು  ಇಳಿದಿದೆ. 

ದಿಲ್ಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದ ಮೇಲೆ 8 ಪೈಸೆ ಇಳಿದಿದ್ದು, 70.35ರಷ್ಟಾಗಿದೆ. ಡೀಸೆಲ್ ದರ 6 ಪೈಸೆ ಇಳಿದು, 64.33ರು.ನಷ್ಟಾಗಿದೆ. 

ಮೋದಿ ಹೊಸ ನೀತಿ -ಪೆಟ್ರೋಲ್ ಡೀಸಲ್ ಆಗಲ್ಲ, ಟ್ಯಾಕ್ಸಿ‌ಗೆ ಎಲೆಕ್ಟ್ರಿಕ್ ಕಾರು ಕಡ್ಡಾಯ!
 
ಇನ್ನು ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರದ ಮೇಲೆ 8 ಪೈಸೆ ಇಳಿದಿದ್ದು, 76.04ರು.ನಷ್ಟಾಗಿದೆ. ಡೀಸೆಲ್ ದರ 6 ಪೈಸೆ ಇಳಿದಿದ್ದು, 66. 25 ರು.ನಷ್ಟಾಗಿದೆ. 

ಶೀಘ್ರದಲ್ಲೇ ಪೆಟ್ರೋಲ್ ಮಾರುತಿ ಬ್ರೆಜಾ ಬಿಡುಗಡೆ- ಡೀಸೆಲ್ ಕಾರಿಗಿಂತ ಕಡಿಮೆ ಬೆಲೆ!

ನಿರಂತರ ಪೆಟ್ರೋಲ್, ಡೀಸೆಲ್ ದರದಲ್ಲಿನ ಇಳಿಕೆ ವಾಹನ ಸವಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

₹11 ರಿಚಾರ್ಜ್ ಮಾಡಿದ್ರೆ ಸಾಕು, ಜಿಯೋ ಮತ್ತೆ ಬಂಪರ್ ಆಫರ್; ಏನೆಲ್ಲ ಲಾಭ?
ಜಕ್ಕೂರಿನಲ್ಲಿ ಬೆಂಗಳೂರಿನ ಭವಿಷ್ಯ ಬದಲಿಸುವ ಐಷಾರಾಮಿ ವಸತಿ ಯೋಜನೆ, ಅಲ್ಪಾವಧಿಯಲ್ಲೇ ₹550 ಕೋಟಿಗೂ ಹೆಚ್ಚು ಬುಕಿಂಗ್!