ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಗವರ್ನರ್‌ ಹುದ್ದೆ ರೇಸಲ್ಲಿ RBI ಮಾಜಿ ಗವರ್ನರ್!

By Web Desk  |  First Published Jun 13, 2019, 9:47 AM IST

ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ ಗವರ್ನರ್‌ ಹುದ್ದೆ ರೇಸಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಮುಂಚೂಣಿಯಲ್ಲಿದ್ದಾರೆ.


ನವದೆಹಲಿ[ಜೂ.13]: ಪ್ರತಿಷ್ಠಿತ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ನ ಗವರ್ನರ್‌ ಹುದ್ದೆಗೆ ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್‌ ರಘುರಾಮ್‌ ರಾಜನ್‌ ಅವರ ಹೆಸರು ಪ್ರಮುಖವಾಗಿ ಕೇಳಿ ಬಂದಿದೆ.

ಹಾಲಿ ಗವರ್ನರ್‌ ಮಾಕ್‌ ಕಾರ್ನೆ ಅವರ ಅಧಿಕಾರ ಅವಧಿ ಜನವರಿ 2020ಕ್ಕೆ ಮುಗಿಯಲಿದೆ. ಈ ಸ್ಥಾನಕ್ಕೆ ಭಾರತೀಯ ಮೂಲದ ಸೃಷ್ಟಿವದೇರಾ ಸೇರಿದಂತೆ ಆರು ಮಂದಿ ರೇಸ್‌ನಲ್ಲಿದ್ದಾರೆ. ಹಣಕಾಸು ಪ್ರಾಧಿಕಾರದ ಮುಖ್ಯಸ್ಥ ಆಂಡ್ರ್ಯೂ ಬೈಲೆಯ್‌ ಅವರ ಹೆಸರು ಸಹ ಮುಂಚೂಣಿಯಲ್ಲಿದೆ. ಖಜಾನೆ ಚಾನ್ಸೆಲರ್‌ ಫಿಲಿಪ್‌ ಹ್ಯಾಮಂಡ್‌ ಅವರು ಅಕ್ಟೋಬರ್‌ನಲ್ಲಿ ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ನ ನೂತನ ಗವರ್ನರ್‌ ಅವರನ್ನು ನೇಮಿಸುವ ನಿರೀಕ್ಷೆ ಇದೆ.

Tap to resize

Latest Videos

ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ರಾಜನ್‌, ಐಎಂಎಫ್‌ ಸೇರಿದಂತೆ ವಿಶ್ವದ ಅಗ್ರಮಾನ್ಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಬ್ರೆಕ್ಸಿಟ್‌ ಬಗ್ಗೆ ಬ್ರಿಟನ್‌ಗಿರುವ ದ್ವಂದ್ವದ ಪರಿಪೂರ್ಣ ಅರಿವು ಇರುವ ರಾಜನ್‌ ಅವರು ಈ ಹುದ್ದೆಯನ್ನು ನಿಭಾಯಿಸಲು ಸೂಕ್ತ ವ್ಯಕ್ತಿ ಎನಿಸಿಕೊಂಡಿದ್ದಾರೆ.

click me!