ಸವಾರರಿಗೆ ಸಿಹಿ: 14 ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅತ್ಯಂತ ಕಡಿಮೆ!

Published : Mar 16, 2020, 08:01 AM ISTUpdated : Mar 16, 2020, 11:31 AM IST
ಸವಾರರಿಗೆ ಸಿಹಿ: 14 ತಿಂಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಅತ್ಯಂತ ಕಡಿಮೆ!

ಸಾರಾಂಶ

ತೈಲ ಬೆಲೆ ಇಳಿಕೆ| ಪೆಟ್ರೋಲ್‌ ಬೆಲೆ 12, ಡೀಸೆಲ್‌ 15 ಪೈಸೆ ಇಳಿಕೆ| ಸತತ 4 ದಿನದಿಂದ ಪೆಟ್ರೋಲ್‌ 56 ಪೈಸೆ, ಡೀಸೆಲ್‌ 59 ಪೈಸೆ ಅಗ್ಗ

ನವದೆಹಲಿ[ಮಾ.16]: ಜಾಗತಿಕ ತೈಲ ದರ ಇಳಿಯುತ್ತಿದ್ದಂತೆಯೇ ದೇಶದಲ್ಲಿ ಪೆಟ್ರೋಲ್‌ ದರ ಭಾನುವಾರ ಲೀಟರ್‌ಗೆ 12 ಪೈಸೆ ಹಾಗೂ ಡೀಸೆಲ್‌ ಬೆಲೆ 15 ಪೈಸೆ ಇಳಿದಿದೆ.

ಭಾನುವಾರ ಪೆಟ್ರೋಲ್‌ ಬೆಲೆ ಬೆಂಗಳೂರಿನಲ್ಲಿ ಲೀಟರ್‌ಗೆ 72.14 ರು. ಇದ್ದರೆ, ದಿಲ್ಲಿಯಲ್ಲಿ 69.75 ರು. ಇತ್ತು. ಇನ್ನು ಡೀಸೆಲ್‌ ಬೆಲೆ ಕ್ರಮವಾಗಿ ಈ ಊರುಗಳಲ್ಲಿ 64.57 ಹಾಗೂ 62.44 ರು. ಇತ್ತು. ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳು ಸತತ 4 ದಿನಗಳಿಂದ ಇಳಿಮುಖವಾಗಿವೆ.

ಮಾರ್ಚ್ 12ರಿಂದ 15ರವರೆಗೆ ಪೆಟ್ರೋಲ್‌ ಬೆಲೆ 56 ಪೈಸೆ, ಡೀಸೆಲ್‌ ಬೆಲೆ 59 ಪೈಸೆ ಇಳಿದಿದೆ. ದರ ಇನ್ನೂ ಹೆಚ್ಚು ಇಳಿಯಬಹುದಿತ್ತು. ಆದರೆ ಅಬಕಾರಿ ಸುಂಕವನ್ನು ಲೀಟರ್‌ಗೆ 3 ರು.ನಷ್ಟುಏರಿಸಿದ್ದರಿಂದ ದರ ಇಳಿಕೆಯ ಪ್ರಮಾಣ ಕಡಿಮೆಯಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Vastu Tips: ಮನೆಯಲ್ಲಿ 'ಓಡುತ್ತಿರುವ ಏಳು ಕುದುರೆ' ಫೋಟೋ ಯಾಕೆ ಹಾಕ್ತಾರೆ? ಸೀಕ್ರೆಟ್ ಗೊತ್ತಾದ್ರೆ ಈಗ್ಲೇ ಹಾಕ್ತೀರಾ..
ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕಗಳಲ್ಲಿ ಜನಿಸಿದವರು ಉತ್ತಮ ಉದ್ಯಮಿಗಳಾಗುವುದು ಖಚಿತ