
ನವದೆಹಲಿ[ಮಾ.14]: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಜನವರಿಯಿಂದಲೂ ಕಚ್ಚಾತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಬ್ಯಾರೆಲ್ ಕಚ್ಚಾತೈಲಕ್ಕೆ 32 ಡಾಲರ್ ಇಳಿಸಲಾಗಿದೆ. ಹೀಗಿದ್ದರೂ ಗ್ರಾಹಕರಿಗೆ ಮಾತ್ರ ಇದರ ಲಾಭ ಸಿಕ್ಕಿಲ್ಲ. ಸದ್ಯ ಕೇಂದ್ರ ಸರ್ಕಾರ ದಿಢೀರನೆ ಅಬಕಾರಿ ಸುಂಕ 3 ರೂ ಏರಿಕೆ ಮಾಡಿದ್ದು, 2014-15ರ ಕಾಯ್ದೆಯನ್ನು ಪುನರಾರಂಭಿಸುವ ಮೂಲಕ 39.000 ಕೋಟಿ ಹೆಚ್ಚವರಿ ಆದಾಯವನ್ನು ಗಳಿಸಲು ಮುಂದಾಗಿದೆ, ಇದು ಗ್ರಾಹಕರಿಗೆ ಭಾರೀ ಹೊಡೆತ ನೀಡಿದೆ.
ತೈಲ ಬೆಲೆ ಕುಸಿದಿದೆ, ಪೆಟ್ರೋಲ್ ದರ ಕಡಿಮೆ ಮಾಡಿ: ಪಿಎಂಗೆ ರಾಹುಲ್ ಮನವಿ!
ಪ್ರಸ್ತುತ ದರ ಪರಿಶೀಲನೆ ಸೇರಿ ಈವರೆಗೆ ಕೇಂದ್ರ ಸರ್ಕಾರ ಪೆಟ್ರೋಲ್ ಸುಂಕ ಪ್ರತಿ ಲೀಟರ್ಗೆ 11.77ರೂ. ಹಾಗೂ ಡೀಸೆಲ್ ಮೇಲಿನ ಸುಂಕ 13.47 ರಷ್ಟು ಏರಿಕೆ ಮಾಡಿದಂತಾಗಿದೆ. ಹೀಗಾಗಿ 2014-5ರಲ್ಲಿ 99 ಸಾವಿರ ಕೋಟಿ ಇದ್ದ ಕೇಂದ್ರದ ಆದಾಯ 2016-17ರಲ್ಲಿ 2 ಲಕ್ಷದ 44 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದ ಜನವರಿಯಿಂದಲೂ ಕಚ್ಚಾತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಬ್ಯಾರೆಲ್ ಕಚ್ಚಾತೈಲಕ್ಕೆ 32 ಡಾಲರ್ ಇಳಿಸಲಾಗಿದೆ. 1991ರ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ದಾಖಲಿಸಿರುವ ಅತ್ಯಂತ ಕನಿಷ್ಟ ಬೆಲೆ ಇದಾಗಿದೆ. ಇದರ ಅನ್ವಯ ಕೇಂದ್ರಕ್ಕೆ ಪೆಟ್ರೋಲ್, ಡೀಸೆಲ್ ಬೆಲೆ ತಲಾ 6 ರೂ. ಇಳಿಸುವ ಅವಕಾಶ ಇದೆ. ಆದರೆ, ತೈಲ ಬೆಲೆಯಲ್ಲಿ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಬದಲಾವಣೆ ಸರಿದೂಗಿಸಲು ಸರ್ಕಾರ ಬೆಲೆ ಇಳಿಸಿಲ್ಲ ಎನ್ನಲಾಗಿದೆ.
ಕಚ್ಚಾ ತೈಲ ಬೆಲೆ ಶೇ. 30 ಕುಸಿತ, ಭಾರತಕ್ಕೆ ಭರ್ಜರಿ ಲಾಭ!
ಇನ್ನು ಇತ್ತ ರಾಜ್ಯ ಬಜೆಟ್ನಲ್ಲೂ ಹಣ ಸಂಗ್ರಹಕ್ಕೆ ಕಚ್ಚಾತೈಲ ಮೇಲಿನ ರಾಜ್ಯ ತೆರಿಗೆಯನ್ನು 2. ರೂ ಏರಿಕೆ ಮಾಡಿದ್ದು, ರಾಜ್ಗಯದಲ್ಲಿ ತೈಲ ಏರಿಕೆ ಬಿಸಿ ಚಾಲಕರಿಗೆ ಭಾರೀ ಹೊಡೆತ ನೀಡಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.