Petrol, Diesel Price: ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್‌,ಡೀಸೆಲ್ ದರ

By Suvarna NewsFirst Published Nov 27, 2021, 11:09 AM IST
Highlights

ಪೆಟ್ರೋಲ್‌ ಹಾಗೂ ಡೀಸೆಲ್ ದರದಲ್ಲಿಇಂದು(ನ.27) ಕೂಡ ಯಾವುದೇ ಏರಿಕೆ ಕಂಡುಬಂದಿಲ್ಲ.ಕೆಲವು ದಿನಗಳಿಂದ ಕೆಲವೇ ಕೆಲವು ಪೈಸೆಗಳಷ್ಟೇ ಏರಿಕೆ,ಇಳಿಕೆ ದಾಖಲಿಸುತ್ತಿದೆ. ಇದು ಈಗಾಗಲೇ ಬೆಲೆಯೇರಿಕೆಯಿಂದ ಬೇಸತ್ತಿರೋ ಜನಸಾಮಾನ್ಯರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿ ತರಿಸಿದೆ ಎಂದೇ ಹೇಳಬಹುದು.  

ಬೆಂಗಳೂರು (ನ.27):  ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ದರ (Rate) ಇಂದು (ನ.27)  ಕೂಡ ಯಥಾಸ್ಥಿತಿ ಕಾಯ್ದುಕೊಂಡಿದೆ. ಕಳೆದ 23 ದಿನಗಳಿಂದ ಪೆಟ್ರೋಲ್,ಡೀಸೆಲ್ ಬೆಲೆಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ಕಳೆದ ತಿಂಗಳು ಏರಿಕೆ ಹಾದಿ ಹಿಡಿದಿದ್ದ ಪೆಟ್ರೋಲ್‌ ಹಾಗೂ ಡೀಸೆಲ್ ಬೆಲೆ ಈ ತಿಂಗಳು ಕೂಡ ಅದೇ ಹಾದಿಯಲ್ಲಿ ಸಾಗಿದ್ರೆ ಏನು ಮಾಡೋದು ಎಂಬ ಚಿಂತೆ ಜನಸಾಮಾನ್ಯರನ್ನು ಕಾಡುತ್ತಿತ್ತು. ಆದ್ರೆ ದೀಪಾವಳಿ ಸಮಯದಲ್ಲಿ ಸರ್ಕಾರ ಪೆಟ್ರೋಲ್‌ ಹಾಗೂ ಡೀಸೆಲ್ ಮೇಲಿನ ಸುಂಕ ಕಡಿತ ಮಾಡಿದ ಕಾರಣ ಇಂಧನ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಇದು ಜನಸಾಮಾನ್ಯ ಸ್ವಲ್ಪ ಮಟ್ಟಿಗೆ ನೆಮ್ಮದಿ ತಂದಿದೆ. ಹಾಗಾದ್ರೆ ರಾಜ್ಯದ ಪ್ರಮುಖ ನಗರಗಳಲ್ಲಿ(Cities) ಇಂದು (ನ.27)  ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ? ಇಲ್ಲಿದೆ ಮಾಹಿತಿ.

ರಾಜ್ಯದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಎಷ್ಟಿದೆ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ(Bangalore) ಇಂದು ಪೆಟ್ರೋಲ್ ದರ ಲೀಟರ್ ಗೆ 100.58ರೂ. ಹಾಗೂ ಡೀಸೆಲ್  ದರ 85.01 ರೂ.ಇದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ (Hubli)ಪೆಟ್ರೋಲ್ ಬೆಲೆ 100.41ರೂ. ಹಾಗೂ ಡೀಸೆಲ್ ಬೆಲೆ 84.88 ರೂ.ಇದೆ. ಮಂಗಳೂರಿನಲ್ಲಿ (Mangalore) ಪೆಟ್ರೋಲ್ ಬೆಲೆ 99.76 ರೂ. ಹಾಗೂ ಡೀಸೆಲ್ ದರ 84.24ರೂ.ಇದ್ದರೆ, ಸಾಂಸ್ಕ್ರತಿಕ ನಗರಿ ಮೈಸೂರಿನಲ್ಲಿ (Mysore) ಪೆಟ್ರೋಲ್ ಗೆ 100.65 ರೂ. ಹಾಗೂ ಡೀಸೆಲ್ ಗೆ 85.05ರೂ. ದರವಿದೆ. ಬಿಸಿಲ ನಗರಿ ಕಲಬುರಗಿಯಲ್ಲಿ (Kalburgi) ಪೆಟ್ರೋಲ್ ಗೆ 100.28 ರೂ. ಹಾಗೂ ಡೀಸೆಲ್ ಗೆ 84.77ರೂ.ಇದೆ. 

Sensexಗೂ ಹೊಸ ಸೋಂಕಿನ ಶಾಕ್‌ : ಜಗತ್ತಿನೆಲ್ಲೆಡೆ ಷೇರುಗಳ ಬೆಲೆ ಕುಸಿತ!

ಪೆಟ್ರೋಲ್ ದರ ಪರಿಷ್ಕರಣೆ ಹೇಗೆ?
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿರ್ಧರಣೆಯಲ್ಲಿಅನೇಕ ಅಂಶಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಮೊದಲನೆಯದಾಗಿ ಕಚ್ಚಾ ತೈಲದ ಬೆಲೆ, ಎರಡನೆಯದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರೋ ತೆರಿಗೆಗಳು. ಇವೆರಡರ ಜೊತೆಗೆ ಡೀಲರ್‌ಗಳ ಕಮೀಷನ್ ಹಾಗೂ ವ್ಯಾಟ್(VAT) ಕೂಡ ಬೆಲೆ ಮೇಲೆ ಪರಿಣಾಮ ಬೀರುತ್ತವೆ. ಪೆಟ್ರೋಲ್‌ ಹಾಗೂ ಡೀಸೆಲ್ ದುಬಾರಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸೋ ತೆರಿಗೆಗಳೇ ಕಾರಣ.ಇಂಧನಗಳ ಮೇಲೆ ವಿಧಿಸೋ ತೆರಿಗೆಗಳಿಂದ ಸರ್ಕಾರಕ್ಕೆ ದೊಡ್ಡ ಮೊತ್ತದ ಆದಾಯ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಹಿಂದೇಟು ಹಾಕೋದು.ಅಂತಾರಾಷ್ಟ್ರೀಯ ಕಚ್ಚಾ ತೈಲಗಳ ಮಾರುಕಟ್ಟೆಯಲ್ಲಿ ದರಗಳ ಏರಿಳಿತವಾಗುತ್ತಿರೋ ಕಾರಣ ಪ್ರತಿದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಈ ಹಿಂದೆ ಪೆಟ್ರೋಲ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ಅಂದ್ರೆ ಪ್ರತಿ ತಿಂಗಳು 1 ಹಾಗೂ 16ನೇ ತಾರೀಖಿನಂದು ದರ ಬದಲಾವಣೆ ಮಾಡಲಾಗುತ್ತಿತ್ತು. ಆದ್ರೆ 2017ರ ಜೂನ್ 16ರಿಂದ ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಲಾಯಿತು. ಅದರಡಿಯಲ್ಲಿ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಬೆಲೆ ಪರಿಷ್ಕರಣೆ ಮಾಡಲಾಗುತ್ತಿದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ತೈಲ ಕಂಪನಿಗಳು ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. 

ಬಂಡವಾಳ ಆಕರ್ಷಿಸಲು ಬೆಂಗಳೂರಿನಲ್ಲಿ ಮೊರಾಕ್ಕೊ ರೋಡ್-ಶೋ

GST ಇಲ್ಲ
ಪೆಟ್ರೋಲ್ ಹಾಗೂ ಡೀಸೆಲ್ ಸರಕು ಹಾಗೂ ಸೇವಾ ತೆರಿಗೆ (GST) ವ್ಯಾಪ್ತಿಗೆ ಬಾರದಿದ್ರೂ ಕೂಡ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ತೆರಿಗೆಗಳನ್ನು ವಿಧಿಸುತ್ತವೆ. ಈ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಹೆಚ್ಚಿದಾಗ ಅದರ ಮೇಲಿನ ಸುಂಕವನ್ನು ಸರ್ಕಾರ ಕಡಿತಗೊಳಿಸುತ್ತಿತ್ತು.ಆದ್ರೆ 2014ರಿಂದ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಬಿಟ್ಟಿದೆ. 

click me!