Crude Oil Price: 100 ಡಾಲರ್‌ನತ್ತ ಕಚ್ಚಾ ತೈಲ ಬೆಲೆ!

Kannadaprabha News   | Asianet News
Published : Feb 15, 2022, 01:15 AM IST
Crude Oil Price: 100 ಡಾಲರ್‌ನತ್ತ ಕಚ್ಚಾ ತೈಲ ಬೆಲೆ!

ಸಾರಾಂಶ

ಕೋವಿಡ್‌ನಿಂದ ತತ್ತರಿಸಿಕೊಂಡು ಈಗಷ್ಟೇ ಚೇತರಿಕೆಯ ಹೆಜ್ಜೆ ಇಡುತ್ತಿರುವ ವಿಶ್ವದ ಆರ್ಥಿಕತೆಗೆ ಏರುತ್ತಿರುವ ಕಚ್ಚಾತೈಲ ಬೆಲೆ ಮತ್ತೊಂದು ದೊಡ್ಡ ಶಾಕ್‌ ನೀಡುವ ಸಾಧ್ಯತೆ ಇದೆ. ಮಾಸಾಂತ್ಯದ ವೇಳೆಗೆ ಇದು 8 ವರ್ಷದ ಗರಿಷ್ಠವಾದ 100 ಡಾಲರ್‌ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. 

ವಾಷಿಂಗ್ಟನ್‌ (ಫೆ.15): ಕೋವಿಡ್‌ನಿಂದ (Covid19) ತತ್ತರಿಸಿಕೊಂಡು ಈಗಷ್ಟೇ ಚೇತರಿಕೆಯ ಹೆಜ್ಜೆ ಇಡುತ್ತಿರುವ ವಿಶ್ವದ ಆರ್ಥಿಕತೆಗೆ ಏರುತ್ತಿರುವ ಕಚ್ಚಾತೈಲ ಬೆಲೆ ( Crude Oil) ಮತ್ತೊಂದು ದೊಡ್ಡ ಶಾಕ್‌ ನೀಡುವ ಸಾಧ್ಯತೆ ಇದೆ. ಮಾಸಾಂತ್ಯದ ವೇಳೆಗೆ ಇದು 8 ವರ್ಷದ ಗರಿಷ್ಠವಾದ 100 ಡಾಲರ್‌ ತಲುಪುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಇದು ವಿಶ್ವದ ಬಹುತೇಕ ದೇಶಗಳ ಆರ್ಥಿಕತೆಗೆ ಪೆಟ್ಟು ನೀಡಲಿದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.

ರಷ್ಯಾ-ಉಕ್ರೇನ್‌ ಬಿಕ್ಕಟ್ಟು (Russia Ukraine Crisis), ತೈಲಕ್ಕೆ ಬೇಡಿಕೆ ಹೆಚ್ಚಳ, ತೈಲ ಪೂರೈಕೆ ವ್ಯವಸ್ಥೆಯಲ್ಲಿನ ಅಡ್ಡಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆಯನ್ನು ಬ್ಯಾರಲ್‌ಗೆ 94 ಡಾಲರ್‌ ಗಡಿಗೆ ತಂದು ನಿಲ್ಲಿಸಿವೆ. ಇದು ಶೀಘ್ರದಲ್ಲೇ 100 ಡಾಲರ್‌ ಮುಟ್ಟುವ ಭೀತಿಯಿದೆ. ಹೀಗೇನಾದರೂ ಆದರೆ ಭಾರತದಲ್ಲಿ ಸದ್ಯ 100 ರು. ಇರುವ ಪೆಟ್ರೋಲ್‌ ಬೆಲೆ ಇನ್ನಷ್ಟು ಪ್ರಮಾಣದಲ್ಲಿ ಏರಲಿದೆ.

ಆರ್ಥಿಕತೆಗೆ ಹೊಡೆತ ಭೀತಿ: ಕಚ್ಚಾತೈಲ ಬೆಲೆ ಈಗಾಗಲೇ 7 ವರ್ಷದ ಗರಿಷ್ಠಕ್ಕೆ ತಲುಪಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಕಚ್ಚಾತೈಲ ಬೆಲೆ ಡಬಲ್‌ ಆಗಿದೆ. ಇದು ಇನ್ನಷ್ಟುಹೆಚ್ಚಿನ 100 ಡಾಲರ್‌ ತಲುಪಿದರೆ, ಕೋವಿಡ್‌ನಿಂದಾಗಿ ಹೊಡೆತ ತಿಂದಿದ್ದ ಜಾಗತಿಕ ಆರ್ಥಿಕತೆಗೆ ಮತ್ತೊಂದು ದೊಡ್ಡ ಪೆಟ್ಟು ಬೀಳಲಿದೆ. ಜೊತೆಗೆ ಅವುಗಳ ಚೇತರಿಕೆ ಸಾಮರ್ಥ್ಯವನ್ನು ಮತ್ತಷ್ಟುಕುಗ್ಗಿಸಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

Petrol Diesel Rate:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯೇರಿಕೆ, ರಾಜ್ಯದಲ್ಲಿ ಪೆಟ್ರೋಲ್ ದರ ಎಷ್ಟಿದೆ?

ಕೋವಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಆರ್ಥಿಕತೆ ಏರುಪೇರಾಗದಂತೆ ನೋಡಿಕೊಳ್ಳುವ ಜೊತೆಜೊತೆಗೆ ಕಳೆದೊಂದು ದಶಕದಲ್ಲೇ ದಾಖಲೆ ಎನ್ನಬಹುದಾದ ಬೆಲೆ ಏರಿಕೆಯ ನಿರ್ವಹಣೆ ಸಮಸ್ಯೆಯನ್ನು ವಿಶ್ವದ ಬಹುತೇಕ ದೇಶಗಳು ಎದುರಿಸುತ್ತಿವೆ. ಅದರ ನಡುವೆಯೇ ತೈಲ ಬೆಲೆ ಏರಿಕೆಯ ಬಿಸಿ, ಸರ್ಕಾರಗಳು ಮತ್ತು ಜನಸಾಮಾನ್ಯರನ್ನು ಮತ್ತಷ್ಟುಹೈರಾಣಾಗಿಸಲಿದೆ.

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗೋ ಸಾಧ್ಯತೆ: ಜಾಗತಿಕ ಮಟ್ಟದಲ್ಲಿನ ಕೆಲ ಬೆಳವಣಿಗೆಗಳ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾತೈಲದ (Brent Crude) ಬೆಲೆ ಪ್ರತಿ ಬ್ಯಾರಲ್‌ಗೆ 6,760(90 ಡಾಲರ್‌) ರು.ಗೆ ತಲುಪಿದೆ. ಇದು 2014ರ ಬಳಿಕ ಕಚ್ಚಾತೈಲದ ಬೆಲೆ ಗರಿಷ್ಠ ದರ. ಹೀಗಾಗಿ ಮತ್ತೊಮ್ಮೆ ವಿವಿಧ ಪೆಟ್ರೋಲಿಯಂ ಉತ್ಪನ್ನಗಳ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಭಾರತದಲ್ಲಿ ಪೆಟ್ರೋಲ್‌ ದರ 110ರ ಗಡಿ ಮತ್ತು ಡೀಸೆಲ್‌ ದರ 100ರ ಗಡಿ ದಾಟಿದೆ. ಆದರೆ 2021ರ ನವೆಂಬರ್‌ ಬಳಿಕ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಸದ್ಯ ಪಂಚ ರಾಜ್ಯ ಚುನಾವಣೆ ನಡೆಯುತ್ತಿರುವ ಕಾರಣ ಅದು ಮುಗಿಯುವವರೆಗೂ ದರ ಏರಿಕೆ ಸಾಧ್ಯತೆ ಕಡಿಮೆ. ಬಳಿಕವೂ ಕಚ್ಚಾತೈಲ ಬೆಲೆ ಹೆಚ್ಚೇ ಇದ್ದರೆ, ದೇಶದಲ್ಲೂ ದರ ಏರಿಕೆ ಸಾಧ್ಯತೆ ಇದೆ.

ಕರ್ನಾಟಕ ವಿಧಾನಸಭೆಗೆ 2018ರಲ್ಲಿ ಚುನಾವಣೆ ನಡೆದಿದ್ದ ವೇಳೆ 19 ದಿನಗಳ ಕಾಲ ಪಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ 5 ಡಾಲರ್‌ ಏರಿಕೆಯಾಗಿದ್ದರೂ ದೇಶದಲ್ಲಿ ದರ ಏರಿಕೆ ನಡೆದಿರಲಿಲ್ಲ. ಆದರೆ, ಚುನಾವಣೆ ಮುಗಿದು ಫಲಿತಾಂಶ ಹೊರರಬಿದ್ದ ಬಳಿಕ, ಅಂದರೆ ಮೇ 14 ರಿಂದ ಸತತ 16 ದಿನಗಳ ಕಾಲ ದರ ಏರಿಕೆ ನಡೆಯುವ ಮೂಲಕ ತೈಲ ಕಂಪನಿಗಳ ಮೇಲಿದ್ದ ಹೊರೆಯನ್ನು ಜನರಿಗೆ ದಾಟಿಸುವಲ್ಲಿ ಯಶಸ್ವಿಯಾಗಿತ್ತು. 

War For Oil: ಬಲಾಢ್ಯ ದೇಶಗಳು ವರ್ಸಸ್‌ ಕೊಲ್ಲಿ ರಾಷ್ಟ್ರಗಳ ತೈಲಸಮರ!

ಆ ಸಮಯದಲ್ಲಿ ಪೆಟ್ರೋಲ್ ಬೆಲೆಯಲ್ಲಿ 3.8 ರೂಪಾಯಿ ಹಾಗೂ ಡೀಸೆಲ್ ದರದಲ್ಲಿ 3.38 ರೂಪಾಯಿ ಏರಿಕೆಯಾಗಿತ್ತು. ಇದೇ ರೀತಿ 2017ರ ಡಿಸೆಂಬರ್‌ನಲ್ಲಿ ಗುಜರಾತ್‌ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲೂ 14 ದಿನ ದರ ಏರಿಕೆ ಸ್ಥಗಿತಗೊಂಡಿತ್ತು. ಇದೇ ರೀತಿ 2017ರ ಜನವರಿ 16 ರಿಂದ ಏಪ್ರಿಲ್‌ 1ರ ನಡುವಿನ ಅವಧಿಯಲ್ಲಿ ಪಂಜಾಬ್‌, ಗೋವಾ, ಉತ್ತರಾಖಂಡ್‌, ಉತ್ತರ ಪ್ರದೇಶ, ಮಣಿಪುರ ಚುನಾವಣೆಗಳಿದ್ದಾಗ ತೈಲ ಕಂಪನಿಗಳು ದರ ಏರಿಕೆಯನ್ನು ತಡೆ ಹಿಡಿದಿದ್ದವು.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

Gold Price: ಸಂಬಳದಲ್ಲಿ ಹಣ ಉಳಿದಿದ್ಯಾ? ಇಲ್ಲಿದೆ ನೋಡಿ ಇಂದಿನ ಚಿನ್ನದ ಬೆಲೆ
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?