ಕೇರಳ, ಪಂಜಾಬಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

Published : Feb 04, 2023, 01:00 AM IST
ಕೇರಳ, ಪಂಜಾಬಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ

ಸಾರಾಂಶ

ಸೆಸ್‌ ವಿಧಿಸಿದ ಪರಿಣಾಮ ಕೇರಳದಲ್ಲಿ ಡೀಸೆಲ್‌, ಪೆಟ್ರೋಲ್‌ ಬೆಲೆ ಲೀಟರ್‌ಗೆ ತಲಾ 2 ಹೆಚ್ಚಳ ಆಗಲಿದೆ. ಪಂಜಾಬ್‌ನಲ್ಲಿ ಉಭಯ ತೈಲಗಳ ಬೆಲೆ 90 ಪೈಸೆ ಏರಲಿದೆ. ಎರಡೂ ರಾಜ್ಯಗಳಲ್ಲಿ ಹೆಚ್ಚುವರಿ ಆದಾಯ ಕ್ರೋಢಿಕರಿಸುವ ಉದ್ದೇಶದಿಂದ ಬೆಲೆ ಹೆಚ್ಚಳ ಮಾಡಲಾಗಿದೆ.

ತಿರುವನಂತಪುರ/ಚಂಡೀಗಢ(ಫೆ.04):  ಎಡರಂಗ ಆಡಳಿತದ ಕೇರಳ ಹಾಗೂ ಆಪ್‌ ಆಡಳಿತದ ಪಂಜಾಬಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಿಸಲಾಗಿದೆ. ಸೆಸ್‌ ವಿಧಿಸಿದ ಪರಿಣಾಮ ಕೇರಳದಲ್ಲಿ ಡೀಸೆಲ್‌, ಪೆಟ್ರೋಲ್‌ ಬೆಲೆ ಲೀಟರ್‌ಗೆ ತಲಾ 2 ಹೆಚ್ಚಳ ಆಗಲಿದೆ. ಪಂಜಾಬ್‌ನಲ್ಲಿ ಉಭಯ ತೈಲಗಳ ಬೆಲೆ 90 ಪೈಸೆ ಏರಲಿದೆ. ಎರಡೂ ರಾಜ್ಯಗಳಲ್ಲಿ ಹೆಚ್ಚುವರಿ ಆದಾಯ ಕ್ರೋಢಿಕರಿಸುವ ಉದ್ದೇಶದಿಂದ ಬೆಲೆ ಹೆಚ್ಚಳ ಮಾಡಲಾಗಿದೆ.

‘ಕೇರಳದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟದ ಮೇಲಿನ ಸಾಮಾಜಿಕ ಭದ್ರತಾ ಸೆಸ್‌ ಹೇರಿಕೆ ಮಾಡಿದ ಪರಿಣಾಮ ಬೆಲೆ ಏರಿಕೆ ಆಗಿದೆ. ಇದಲ್ಲದೇ 500 ರು.ನಿಂದ 999 ರು. ಬೆಲೆಯ ಮದ್ಯದ ಬಾಟಲಿಗಳ ಮೇಲೆ 20 ರು. ಹಾಗೂ 1,000 ರು. ಮೇಲ್ಪಟ್ಟಮದ್ಯದ ಬಾಟಲಿಗಳ ಮೇಲೆ 40 ರು. ಸೆಸ್‌ ವಿಧಿಸಲಾಗಿದೆ. ಈ ಮೂಲಕ ಹೆಚ್ಚುವರಿಯಾಗಿ 400 ಕೋಟಿ ರು. ಸಂಗ್ರಹ ಮಾಡುವ ಗುರಿ ಹೊಂದಲಾಗಿದೆ’ ಎಂದು ಬಜೆಟ್‌ ಮಂಡನೆ ವೇಳೆ ಕೇರಳ ಹಣಕಾಸು ಸಚಿವ ಕೆ.ಎನ್‌.ಬಾಲಗೋಪಾಲ್‌ ಹೇಳಿದ್ದಾರೆ.

Union Budget:ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಠೇವಣಿ ಮಿತಿ ಹೆಚ್ಚಳ; ಠೇವಣಿ, ಬಡ್ಡಿದರ ಮಾಹಿತಿ ಇಲ್ಲಿದೆ

ಇನ್ನು, ‘ಪಂಜಾಬ್‌ನಲ್ಲಿ ಹೆಚ್ಚಿನ ಕಂದಾಯ ಸಂಗ್ರಹ ಉದ್ದೇಶವಿದೆ. ಹೀಗಾಗಿ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಪ್ರತಿ ಲೀಟರ್‌ಗೆ 90 ಪೈಸೆ ಸೆಸ್‌ ವಿಧಿಸಲು ಸಂಪುಟ ನಿರ್ಧರಿಸಿದೆ’ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಅಮನ್‌ ಅರೋರಾ ಹೇಳಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

YouTube ನಲ್ಲಿ ಗೋಲ್ಡನ್ ಬಟನ್ ಸಿಕ್ಕಿದ್ರೆ ಹಣದ ಹೊಳೆ, ಜಾಸ್ತಿ ಆಗುತ್ತೆ ತೆರಿಗೆ ಭಾರ
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!