Jio Recharge App ಮೂಲಕ ಮನೆಯಲ್ಲೇ ಕುಳಿತು ಗಳಿಸಿ ಹಣ

By Suvarna News  |  First Published Jun 18, 2022, 12:19 PM IST

ಈಗಿನ ಲೈಫ್ ಸ್ಟೈಲ್ ನಲ್ಲಿ ಎಷ್ಟು ಗಳಿಸಿದ್ರೂ ತಿಂಗಳ ಕೊನೆಯಲ್ಲಿ ಕೈ ಖಾಲಿಯಾಗಿರುತ್ತದೆ. ಹಾಗಾಗಿಯೇ ಜನರು ಗಳಿಕೆಗೆ ಮೂರ್ನಾಲ್ಕು ಮೂಲಗಳು ಹುಡುಕ್ತಾರೆ. ನೀವೂ ಗಳಿಕೆಗೆ ಬೇರೆ ಮೂಲವನ್ನು ಸರ್ಚ್ ಮಾಡ್ತಿದ್ದರೆ ಇಲ್ಲೊಂದು ಮಾರ್ಗವಿದೆ.
 


ಗಳಿಕೆಗೆ ಸಾಕಷ್ಟು ದಾರಿಗಳಿವೆ. ಕೆಲಸದ ಜೊತೆಗೆ ನೀವು ಪಾರ್ಟ್ ಟೈಂ (Part Time) ರೂಪದಲ್ಲಿ ಸ್ವಲ್ಪ ಮಟ್ಟಿಗೆ ಹಣ (Money) ಗಳಿಕೆ ಮಾಡ್ಬಹುದು. ಇತ್ತೀಚಿನ ದಿನಗಳಲ್ಲಿ ಆನ್ಲೈನ್ (Online) ರೀಚಾರ್ಜ್ ಹೆಚ್ಚಾಗ್ತಿದೆ. ಭಾರತದಲ್ಲಿ ಮೂರು ಪ್ರಮುಖ ಟೆಲಿಕಾಂ ಕಂಪನಿಗಳು ಆನ್‌ಲೈನ್‌ನಲ್ಲಿ ರೀಚಾರ್ಜ್ (Recharge) ಮಾಡಲು ಬಳಕೆದಾರರಿಗೆ ಅನುಮತಿ ನೀಡಿವೆ. ರಿಲಯನ್ಸ್ ಜಿಯೋ ತನ್ನ JioPOS Lite ಅಪ್ಲಿಕೇಶನ್ ಮೂಲಕ ಹಣ ಗಳಿಸಲು ಬಳಕೆದಾರರಿಗೆ ಅವಕಾಶ ಮಾಡಿಕೊಟ್ಟಿದೆ. ಈ ಆ್ಯಪ್ ಮೂಲಕ ಬಳಕೆದಾರರು ಮನೆಯಲ್ಲಿ ಕುಳಿತು ಎಷ್ಟು ಬೇಕಾದರೂ ಗಳಿಸಬಹುದು. ಇದಕ್ಕಾಗಿ ನೀವು ಸಾಕಷ್ಟು ಸಮಯವನ್ನು ಮೀಸಲಿಡುವ ಅಗತ್ಯವಿಲ್ಲ. ಹೆಚ್ಚು ರೀಚಾರ್ಜ್ ಮಾಡಿದಷ್ಟು ಹೆಚ್ಚು ಹಣ ಗಳಿಸ್ಬಹುದು. JioPOS Lite ಅಪ್ಲಿಕೇಶನ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಹೇಗೆ ಹಣ ಗಳಿಸಬಹುದು ಎಂದು ನಾವಿಂದು ಹೇಳ್ತೇವೆ. 

JioPOS Lite ನಿಮಗೆ ಗೂಗಲ್ ಪ್ಲೇ ಸ್ಟೋರ್ ಅಪ್ಲಿಕೇಷನ್ ನಲ್ಲಿ ಸಿಗುತ್ತದೆ.. ಗ್ರಾಹಕರು ಜಿಯೋ ಪಾಲುದಾರರಾಗಲು ಮತ್ತು ಪ್ರಿಪೇಯ್ಡ್ ರೀಚಾರ್ಜ್‌ಗಳನ್ನು ಮಾಡಲು ಅನುಮತಿ ಪಡೆಯಬೇಕು. ಗ್ರಾಹಕರಿಗೆ ಇದರಿಂದ ಕಮಿಷನ್  ಸಿಗುತ್ತದೆ. ಇದರ ನೋಂದಣಿ ಪ್ರಕ್ರಿಯೆಯು ತುಂಬಾ ಸುಲಭವಾಗಿದೆ. ಈ ಅಪ್ಲಿಕೇಶನ್‌ನಲ್ಲಿ ಯಾವುದೇ ಭೌತಿಕ ಪರಿಶೀಲನೆ ಅಗತ್ಯವಿಲ್ಲ. ನೀವು MyJio ಅಪ್ಲಿಕೇಶನ್ ಅಥವಾ ಜಿಯೋ ವೆಬ್‌ಸೈಟ್ ಮೂಲಕ ಇತರ ಜಿಯೋ ಸಂಖ್ಯೆಗಳನ್ನು ರೀಚಾರ್ಜ್ ಮಾಡಬಹುದು.
JioPOS Lite ಅಪ್ಲಿಕೇಶನ್ ರೀಚಾರ್ಜಿಂಗ್ ಪಾಲುದಾರರಿಗೆ 4.16 ಪ್ರತಿಶತ ಕಮಿಷನ್ ನೀಡುತ್ತಿದೆ. ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಅಥವಾ ಇತರ ಯಾವುದೇ ವ್ಯಕ್ತಿಯ ಜಿಯೋ ಖಾತೆಯನ್ನು ಸರಳವಾಗಿ ರೀಚಾರ್ಜ್ ಮಾಡಬಹುದು. JioPOS Lite ಅಪ್ಲಿಕೇಶನ್‌ನಲ್ಲಿ ಜಿಯೋ ಪಾಲುದಾರರಾಗಿ ಹೆಸರು ನೋಂದಾಯಿಸಲು ನಿಮ್ಮ ಬಳಿ ಜಿಯೋ ನಂಬರ್ ಇರುವುದು ಅಗತ್ಯ. ನೀವು Google Play Store ನಿಂದ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ನಂತರ  ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನೀಡಬೇಕಾಗುತ್ತದೆ.

Personal Finance: ಉಳಿತಾಯ ಖಾತೆ ಹೊಂದಿದ್ರೆ ಈ ವಿಷ್ಯ ಗಮನದಲ್ಲಿರಲಿ

Tap to resize

Latest Videos

ನೋಂದಣಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ  ಈ ಅಪ್ಲಿಕೇಶನ್ ನಿಮ್ಮ ವ್ಯಾಲೆಟ್‌ಗೆ ಹಣ ಹಾಕಲು ಹೇಳುತ್ತದೆ. ನೀವು ಯಾವುದೇ ಸಂಖ್ಯೆಗೆ ರೀಚಾರ್ಜ್ ಮಾಡಿದಾಗ  ನಿಮಗೆ ಶೇಕಡಾ 4.16 ರಷ್ಟು ಕಮಿಷನ್ ಸಿಗುತ್ತದೆ.  ಉದಾಹರಣೆಗೆ  ನೀವು 100 ರೂಪಾಯಿಗಳ ರೀಚಾರ್ಜ್ ಮಾಡಿದರೆ ನಿಮಗೆ 4.166 ರೂಪಾಯಿ ಸಿಗುತ್ತದೆ.

Work From Home: ಕಂಪನಿಗೆ ಲಾಭ ನೀಡ್ತಿರೋದು ಯಾವುದು ಗೊತ್ತಾ?

ನೋಂದಾಯಿಸುವುದು ಹೇಗೆ ? : 
ಮೊದಲು ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿ JioPOS Lite ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ನಂತರ ಅಪ್ಲಿಕೇಶನ್ ನಲ್ಲಿ ನಿಮ್ಮ ಹೆಸರು, ಸ್ಥಳ ನಮೂದಿಸಿ ಎಲ್ಲವನ್ನು ಅನುಮತಿಸಿ ಮೇಲೆ ಕ್ಲಿಕ್ ಮಾಡಿ. ನಂತ್ರ  ಸೈನ್ ಅಪ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಇಮೇಲ್ ಮತ್ತು ಜಿಯೋ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ನಂತ್ರ ಜನರೇಟ್ ಒಟಿಪಿ ಮೇಲೆ ಕ್ಲಿಕ್ ಮಾಡಿ. ಇದಾದ್ಮೇಲೆ ನಿಮ್ಮ ಮೊಬೈಲ್ ಗೆ ಬಂದ ಒಟಿಪಿ ನಮೂದಿಸಿ ಮತ್ತು ಒಟಿಪಿ  ಮೌಲ್ಯೀಕರಿಸಿ ಮೇಲೆ ಕ್ಲಿಕ್ ಮಾಡಿ. ಎಲ್ಲ ಪ್ರಕ್ರಿಯೆ ಮುಗಿದ ನಂತ್ರ ನಿಮ್ಮ ಗಳಿಕೆಗಳು, ಪಾಸ್‌ಬುಕ್, ನಿಮ್ಮ ಖಾತೆಯಲ್ಲಿ ಹಣವನ್ನು ವರ್ಗಾವಣೆ ಮಾಡುವುದು ಸೇರಿದಂತೆ ಬ್ಯಾಂಕ್ ವಿವರವನ್ನು ನಮೂದಿಸಬೇಕು. ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲು  ಲೋಡ್ ಮನಿ ಗೆ ಒಪ್ಪಿಗೆ ನೀಡ್ಬೇಕು. ಇದರ ನಂತರ ನೀವು ಬೇರೆಯವರ ನಂಬರ್ ರಿಚಾರ್ಜ್  ಮಾಡ್ಬಹುದು. ಆಗ ನಿಮ್ಮ ಖಾತೆಯಲ್ಲಿರುವ ಹಣ ಕಟ್ ಆಗುತ್ತದೆ. ಕಮಿಷನ್ ನಿಮ್ಮ ಖಾತೆಗೆ ಬರುತ್ತದೆ.  
 

click me!