ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆ 2,689 ಕೋಟಿ ಹೂಡಿಕೆ: ಮುರುಗೇಶ್‌ ನಿರಾಣಿ

By Kannadaprabha NewsFirst Published Jun 18, 2022, 2:00 AM IST
Highlights

*  ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ ಸಭೆ
*   ಎಸ್‌ಎಲ್‌ಎಸ್‌ಡಬ್ಲ್ಯೂಸಿಸಿ ಸಭೆಯಲ್ಲಿ 81 ಕೈಗಾರಿಕೆಗಳಿಗೆ ಅನುಮೋದನೆ
*  1,229.43 ರು. ಹೂಡಿಕೆಯಿಂದ 1,734 ಜನರಿಗೆ ಉದ್ಯೋಗ ಸೃಷ್ಟಿ
 

ಬೆಂಗಳೂರು(ಜೂ.18):  ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆ ಜೊತೆಗೆ ಉದ್ಯೋಗ ಸೃಷ್ಟಿಗೆ ಒತ್ತು ನೀಡಲು ರಾಜ್ಯ ಕೈಗಾರಿಕೆ ಇಲಾಖೆಯು 6,825 ಉದ್ಯೋಗ ಸೃಷ್ಟಿ ಮಾಡುವ 2,689.51 ಕೋಟಿ ರು. ಹೂಡಿಕೆಯ 81 ಕೈಗಾರಿಕಾ ಯೋಜನೆಗಳ ಸ್ಥಾಪನೆಗೆ ಅನುಮೋದನೆ ನೀಡಿದೆ.

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ 132ನೇ ರಾಜ್ಯ ಮಟ್ಟದ ಏಕಗವಾಕ್ಷಿ ಕ್ಲಿಯರೆನ್ಸ್‌ ಸಮಿತಿ (ಎಸ್‌ಎಲ್‌ಎಸ್‌ಡಬ್ಲ್ಯೂಸಿಸಿ) ಸಭೆಯಲ್ಲಿ 81 ಕೈಗಾರಿಕೆಗಳಿಗೆ ಅನುಮೋದನೆ ನೀಡಲಾಗಿದೆ.

Electric vehicle ಎಲೆಕ್ಟ್ರಿಕ್ ವಾಹನ ಉತ್ತೇಜನಕ್ಕೆ ಮುಂದಾದ ಬೆಸ್ಕಾಂ, ಬ್ರಿಟನ್ ಜೊತೆ 31,000 ಕೋಟಿ ರೂ ಹೂಡಿಕೆ ಒಪ್ಪಂದ!

ಕರ್ನಾಟಕ ಉದ್ಯೋಗಮಿತ್ರ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಸಭೆಯಲ್ಲಿ ಸಮಿತಿಯು 50 ಕೋಟಿ ರು.ಗಿಂತ ಹೆಚ್ಚಿನ ಹೂಡಿಕೆಯ 7 ಪ್ರಮುಖ ಬೃಹತ್‌ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದೆ. ಇವುಗಳಿಂದ 1,229.43 ರು. ಹೂಡಿಕೆಯಾಗಲಿದ್ದು 1,734 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ.

ಇದಲ್ಲದೆ 15 ಕೋಟಿ ರು.ಗಳಿಂದ 50 ಕೋಟಿ ರು.ವರೆಗಿನ ಹೂಡಿಕೆಯ 71 ಹೊಸ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳಿಂದ 1,308.06 ಕೋಟಿ ರು. ಹೂಡಿಕೆ ನಿರೀಕ್ಷಿಸಲಾಗಿದ್ದು, 5,091 ಜನರಿಗೆ ಉದ್ಯೋಗವಕಾಶ ಒದಗಲಿದೆ. ಉಳಿದಂತೆ ಮೂರು ವಿಶೇಷ ಯೋಜನೆಗಳಿಂದ 151.42 ಕೋಟಿ ರು. ಹೂಡಿಕೆ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪೈಕಿ ಪ್ರಮುಖವಾಗಿ ಪರ್ಪಲ್‌ ಸ್ಟಾರ್‌ ಹೈಜೀನ್‌ ಪ್ರೈವೇಟ್‌ ಲಿಮಿಟೆಡ್‌ನ 270 ಕೋಟಿ ರು., ಬೆಳಗಾವಿ ಶುಗರ್ಸ್‌ ಪ್ರೈವೇಟ್‌ ಲಿಮಿಟೆಡ್‌ 240.84 ಕೋಟಿ ರು., ಪರಾತ್ಪರ ಕಾಫಿ ಲಿಮಿಟೆಡ್‌ -236.8 ಕೋಟಿ ರು., ಲಾಜಿಕಲಿ ಇಸ್ಫೋಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ 228.19 ಕೋಟಿ ರು., ಎಎಲ್‌ಎಸ್‌ ಪೇಪರ್‌ ಪ್ರೈವೇಟ್‌ ಲಿಮಿಟೆಡ್‌ 100 ಕೋಟಿ ರು., ಗೋದಾವತ್‌ ಫುಡ್‌ ಪ್ರೈವೇಟ್‌ ಲಿಮಿಟೆಡ್‌ 98.60 ಕೋಟಿ ರು., ಜ್ಯೋತ್ಸಾ$್ನ್ಯ ಲೈಟೆಕ್‌ ಪ್ರೈವೇಟ್‌ ಲಿಮಿಟೆಡ್‌ 50 ಕೋಟಿ ರು. ಹೂಡಿಕೆ ಮಾಡುತ್ತಿವೆ.

ಕರ್ನಾಟಕದಲ್ಲಿ ಆಕ್ಮೆ ಕ್ಲೀನ್‌ಟೆಕ್‌ 52000 ಕೋಟಿ ಹೂಡಿಕೆ!

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಕೈಗಾರಿಕಾ ಆಯುಕ್ತರಾದ ಗುಂಜನ್‌ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಎನ್‌. ಶಿವಶಂಕರ್‌, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ್‌ ಸೇರಿದಂತೆ ಹಲವರು ಹಾಜರಿದ್ದರು.

ಯಾವ ಕಂಪನಿಯಿಂದ ಎಷ್ಟು ಬಂಡವಾಳ ಹೂಡಿಕೆ?

- ಪರ್ಪಲ್‌ ಸ್ಟಾರ್‌ ಹೈಜೀನ್‌ ಪ್ರೈವೇಟ್‌ ಲಿಮಿಟೆಡ್‌ 270 ಕೋಟಿ ರು.
- ಬೆಳಗಾವಿ ಶುಗರ್ಸ್‌ ಪ್ರೈವೇಟ್‌ ಲಿಮಿಟೆಡ್‌ 240.84 ಕೋಟಿ ರು.
- ಪರಾತ್ಪರ ಕಾಫಿ ಲಿಮಿಟೆಡ್‌ 236.8 ಕೋಟಿ ರು.
- ಲಾಜಿಕಲಿ ಇಸ್ಫೋಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ 228.19 ಕೋಟಿ ರು.
- ಎಎಲ್‌ಎಸ್‌ ಪೇಪರ್‌ ಪ್ರೈವೇಟ್‌ ಲಿಮಿಟೆಡ್‌ 100 ಕೋಟಿ ರು.
- ಗೋಡಾವತ್‌ ಫುಡ್‌ ಪ್ರೈವೇಟ್‌ ಲಿಮಿಟೆಡ್‌ 98.60 ಕೋಟಿ ರು.
- ಜ್ಯೋತ್ಸಾನ್ಯ ಲೈಟೆಕ್‌ ಪ್ರೈವೇಟ್‌ ಲಿಮಿಟೆಡ್‌ 50 ಕೋಟಿ ರು.
 

click me!