ಅಯೋಧ್ಯೆಗೆ ದೇಶದ ವಿವಿಧ ಭಾಗಗಳಿಂದ ದೊಡ್ಡ ಪ್ರಮಾಣದಲ್ಲಿ ಭಕ್ತರು ಆಗಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ದೊಡ್ಡ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಇವರಿಗೆ ಹಣಕಾಸಿನ ವಹಿವಾಟುಗಳನ್ನು ಸುಲಭಗೊಳಿಸಲು ಪೇಟಿಎಂ ಎಲ್ಲ ಅಂಗಡಿಗಳಲ್ಲಿ ಕ್ಯುಆರ್ ಕೋಡ್ ಹಾಗೂ ಸೌಂಡ್ ಬಾಕ್ಸ್ ಸಾಧನಗಳನ್ನು ಅಳವಡಿಸಿದೆ.
ಅಯೋಧ್ಯೆ (ಜ.22): ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಇಂದು ಯಶಸ್ವಿಯಾಗಿ ನಡೆದಿದೆ. ಅಯೋಧ್ಯೆ ಭಕ್ತಿ ಕೇಂದ್ರವಾಗುತ್ತಿರುವ ಈ ಸಮಯದಲ್ಲಿ ಅಲ್ಲಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಮುಂದೆ ಹೆಚ್ಚಳವಾಗಲಿದೆ. ಅಯೋಧ್ಯೆ ಭಕ್ತರ ನೆಚ್ಚಿನ ಧಾರ್ಮಿಕ ಸ್ಥಳವಾಗಿರುವ ಕಾರಣ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ. ಹೀಗಾಗಿ ಇಲ್ಲಿ ಆರ್ಥಿಕ ಚಟುವಟಿಕೆಗಳು ಕೂಡ ಹೆಚ್ಚಲಿವೆ. ಇಂಥ ಸಂದರ್ಭದಲ್ಲಿ ಇಲ್ಲಿ ಹಣಕಾಸಿನ ವಹಿವಾಟುಗಳನ್ನು ಸರಳಗೊಳಿಸಲು ಪೇಟಿಎಂ ಮುಂದಾಗಿದೆ. ಪೇಟಿಎಂ ಕ್ಯುಆರ್ ಕೋಡ್, ಸೌಂಡ್ ಬಾಕ್ಸ್ ಸಾಧನಗಳನ್ನು ಅಳವಡಿಸುವ ಮೂಲಕ ಆಯೋಧ್ಯೆಯಲ್ಲಿ ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದಿದೆ. ಅಯೋಧ್ಯೆಯ ಬೀದಿ ಬೀದಿಯಲ್ಲಿ ಪೇಟಿಎಂ ಕ್ಯುಆರ್ ಕೋಡ್ ಹಾಗೂ ಸೌಂಡ್ ಬಾಕ್ಸ್ ಸಾಧನಗಳು ನೋಡಲು ಸಿಗುತ್ತಿವೆ. ಒಟ್ಟಾರೆ ಅಯೋಧ್ಯೆಯ ಪ್ರತಿ ಅಂಗಡಿ ಕೂಡ ಪೇಟಿಎಂ ಸಾಧನಗಳನ್ನು ಅಳವಡಿಸಿಕೊಳ್ಳುವ ಮೂಲಕ ಡಿಜಿಟಲ್ ಕ್ರಾಂತಿಯಲ್ಲಿ ಪಾಲ್ಗೊಂಡಿವೆ. ಇದರಿಂದ ಪ್ರವಾಸಿಗರಿಗೆ ಮೊಬೈಲ್ ಮೂಲಕ ಯುಪಿಐ ಪಾವತಿ ಮಾಡಲು ಅನುವು ಮಾಡಿಕೊಟ್ಟಿವೆ.
ಅಯೋಧ್ಯೆಯ ಜನಪ್ರಿಯ ತಾಣಗಳಾದ ಹನುಮಾನ್ ಘರ್ಹಿ, ಸೀತಾ ಕಿ ರಸೋಹಿ, ನಯಾ ಘಟ್, ಕೇಶವ್ ಭವನ್ ಹಾಗೂ ಸರಯೂ ನದಿ ದಡಗಳಲ್ಲಿನ ಅಂಗಡಿಗಳಲ್ಲಿ ಇತ್ತೀಚೆಗೆ ಬಿಡುಗಡೆಗೊಂಡ ಪೇಟಿಎಂ ಪಾಕೆಟ್ ಹಾಗೂ ಮ್ಯೂಸಿಕ್ ಸೌಂಡ್ ಬಾಕ್ಸ್ ಗಳು ಕಾಣಸಿಗುತ್ತಿವೆ. ಅಯೋಧ್ಯೆಗೆ ಭೇಟಿ ನೀಡಿರುವ ಭಕ್ತಾದಿಗಳು ತಮ್ಮ ಹಣಕಾಸಿನ ವಹಿವಾಟುಗಳಿಗೆ ಆಲ್ -ಇನ್-ಒನ್ ಪೇಟಿಎಂ ಕ್ಯುಆರ್ ಕೋಡ್ ಬಳಸುತ್ತಿದ್ದಾರೆ. ಈ ಮೂಲಕ ಅಯೋಧ್ಯೆಯಲ್ಲಿ ವ್ಯಾಪಾರ-ವಹಿವಾಟುಗಳನ್ನು ಪೇಟಿಎಂ ಸರಳಗೊಳಿಸಿದೆ.
Love exploring cuisines? presents a flavorful journey into Ayodhya's local delicacies. Dive in and tell us your top pick. pic.twitter.com/0qwWoGd7gJ
— MyGovIndia (@mygovindia)ಅಯೋಧ್ಯೆಯ ಹನುಮಾನ್ ಘರ್ಹಿಯಲ್ಲಿ ಹೂವು ಹಾಗೂ ಪೂಜಾ ಸಾಮಗ್ರಿಗಳನ್ನು ಮಾರುವ ವ್ಯಾಪಾರಿಗಳಿಗೆ ಡೆಬಿಟ್ ಕಾರ್ಡ್ ಗಾತ್ರದ ಪಾಕೆಟ್ ಸೌಂಡ್ ಬಾಕ್ಸ್ ಅಚ್ಚುಮೆಚ್ಚಿನದ್ದಾಗಿದೆ. ಪೇಟಿಎಂ ಮ್ಯೂಸಿಕ್ ಸೌಂಡ್ ಬಾಕ್ಸ್ ಕೂಡ ಪಾವತಿ ಸ್ವೀಕರಿಸುವಾಗ ಭಜನೆಗಳನ್ನು ಪ್ಲೇ ಮಾಡುತ್ತವೆ. ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಣ್ತುಂಬಿಕೊಂಡು ಶ್ರೀರಾಮ ದರ್ಶನ ಪಡೆಯಲು ದೇಶದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಆಗಮಿಸಿದ್ದಾರೆ. ಇವರಿಗೆಲ್ಲ ಮೊಬೈಲ್ ಮೂಲಕ ಮಾಡಬಹುದಾದ ಯುಪಿಐ ಪಾವತಿ ಖರೀದಿ ಹಾಗೂ ಪಾವತಿ ಕೆಲಸವನ್ನು ಸುಲಭಗೊಳಿಸಿದೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಯುಪಿಐ ಪಾವತಿ ಭಾರೀ ಜನಪ್ರಿಯತೆ ಗಳಿಸಿದೆ. ಬೀದಿಬದಿ ವ್ಯಾಪಾರಿಗಳಿಂದ ಹಿಡಿದು ಮಾಲ್ ತನಕ ಎಲ್ಲೆಡೆ ಯುಪಿಐ ಪಾವತಿ ಜನಪ್ರಿಯತೆ ಗಳಿಸಿದೆ. ಇತ್ತೀಚೆಗೆ ಭಾರತ ಸರ್ಕಾರದ ನಾಗರಿಕರ ಎಂಗೇಜ್ಮೆಂಟ್ ಪ್ಲ್ಯಾಟ್ ಫಾರ್ಮ್ MyGovIndia,ಪುಟ್ಟ ವಿಡಿಯೋವೊಂದನ್ನು 'ಎಕ್ಸ್' ನಲ್ಲಿ ಶೇರ್ ಮಾಡಿದೆ. ಈ ವಿಡಿಯೋದಲ್ಲಿ ಅಯೋಧ್ಯೆಯ ಪುಟ್ಟ ಅಂಗಡಿಗಳಲ್ಲಿ ಪೇಟಿಎಂ ಸಾಧನಗಳನ್ನು ನೋಡಬಹುದಾಗಿದೆ.
ಅಯೋಧ್ಯೆ ರಾಮಲಲ್ಲಾಗೆ 33 ಕೆಜಿ ಚಿನ್ನದ 3 ಕಿರೀಟ ಕೊಡುಗೆ ನೀಡಿದ್ರ ಅಂಬಾನಿ ?
ಪೇಟಿಎಂ ಇತ್ತೀಚೆಗೆ ಅಯೋಧ್ಯೆ ನಗರ ನಿಗಮ ಲಿಮಿಟೆಡ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಮೊಬೈಲ್ ಪಾವತಿಗಳನ್ನು ಉತ್ತೇಜಿಸುತ್ತಿದೆ. ಅಯೋಧ್ಯೆಯ ನಗರ ಸಭೆ ಕೂಡ ವಿವಿಧ ಇಲಾಖೆಗಳಲ್ಲಿ ಮೊಬೈಲ್ ಪಾವತಿ ಸಾಧನಗಳನ್ನು ಅಳವಡಿಸಿದೆ. ಇನ್ನು ಪೇಟಿಎಂ ತನ್ನ ಗ್ರಾಹಕರಿಗೆ ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ದೃಶ್ಯಗಳನ್ನು ದೊಡ್ಡ ಸ್ಕ್ರೀನ್ ಗಳಲ್ಲಿ ಕಣ್ತುಂಬಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಇದಕ್ಕಾಗಿ ದೇಶಾದ್ಯಂತ ವಿವಿಧ ನಗರಗಳಲ್ಲಿ ಪಿವಿಆರ್ ಐನೋಕ್ಸ್ ಥಿಯೇಟರ್ ಗಳಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ದೃಶ್ಯಗಳನ್ನು ಪ್ರಸಾರ ಮಾಡಲು ವ್ಯವಸ್ಥೆ ಮಾಡಿತ್ತು. ಇನ್ನುಇದರಲ್ಲಿ ಪಾಲ್ಗೊಳ್ಳಲು ಬಳಕೆದಾರರಿಗೆ ಪೇಟಿಎಂ ಆಪ್ ಮೂಲಕ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಿತ್ತು. ಪ್ರತಿ ವ್ಯಕ್ತಿಗೆ ಟಿಕೆಟ್ ಗೆ 99ರೂ. ದರ ನಿಗದಿಪಡಿಸಿತ್ತು.